ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುವ ಹಾಗೂ ಸತ್ಕಾರ ಸಮಾರಂಭ ಸಮಾರಂಭ
Farewell and reception ceremony at Government Kannada Higher Primary School, Madabhavi village
ಸಂಬರಗಿ 08 : ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಮೇತ್ರಿ, ಚಾಲನೆ ನೀಡಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಗಡಿ ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳು ಉಳಿಯಬೇಕು ಬಡ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರ ಸೌಲಭ್ಯವನ್ನು ನೀಡುತ್ತಿದೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ಉಪಯೋಗ ಮಾಡಿ ಎಂದು ಸಲಹೆ ನೀಡಿ ಶಾಲೆಯ ಅಭಿವೃದ್ಧಿಗಾಗಿ ನಮ್ಮ ಸಹಾಯ ಸಹಕಾರ ಇದೆ ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಆಗಮಿಸಿ ಉತ್ತಮ ಶಿಕ್ಷಣ ನೀಡಬೇಕು ಅವರು ಸಲಹೆ ನೀಡಿದೆರು.
ನೂತನ ಪ್ರಧಾನ ಗುರುಗಳಾಗಿ ಎಸ್‌ಎ ಚೌಗಲಾ ಆಗಮಿಸಿದ್ದು ಸಂತೋಷದ ಸಂಗತಿ ತಾವು ಒಳ್ಳೆಯ ಸೇವೆದೊಂದಿಗೆ ಮಾದರಿ ಶಾಲೆಯನ್ನಾಗಿ ಮಾಡಿ ಎಂದು ಹೇಳಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಗುರುಗಳಾದ ಎಸ್‌ಎ ಚೌಗಲಾ ನೇತೃತ್ವ ವಹಿಸಿ ಪ್ರಸ್ತವಿಕವಾಗಿ ಮಾತನಾಡಿ ಎಲ್ಲ ಶಿಕ್ಷಕರನ್ನು ಸಲಹಾ ಸಮಿತಿಯವರನ್ನು ಪಾಲಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಮಾದರಿ ಶಾಲೆಯನ್ನಾಗಿ ಮಾಡುತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಸ್ ಜಿ ಎಸ್ ಕಾಲೇಜಿನ ಉಪನ್ಯಾಸಕರಾದ ವಿ ಆರ್ ತಕತರಾವ, ವಕೀಲರಾದ ಆಕಾಶ ಬಾಗಡಿ,ಮಾಜಿ ಗ್ರಾಮ ಪಂಚಾಯತ ಸದಸ್ಯ ಹಣಮಂತ ಕಾಂಬಳೆ,ಪರಶುರಾಮ ಕಾಂಬಳೆ,ರತ್ನವ್ವಾ ಕಾಂಬಳೆ ಆಗಮಿಸಿದ್ದರು.ಎಸ್ ಡಿ ಎಂ ಸಿ ಸದಸ್ಯರಾದ ನಾಗರಾಜ್ ಹಡಪದ ನಿಂಗಪ್ಪಾ ಕಾಂಬಳೆ, ಕುಮಾರ ಕಾಂಬಳೆ,ಮಲ್ಲೇಶ ಖಟಾವಿ, ಅಶ್ವಿನಿ ಗಾರಿಮನಿ,ಶ್ರೀಕಾಂತ ಅವಳೆ, ಅಶೋಕ ಬೋರಗಾವೆ,
ವೆಂಕಟೇಶ ಗಾಡಿವಡ್ಡರ, ಶಂಕರ ಕಾಂಬಳೆ, ಸಂಗೀತಾ ಮಗದುಮ್ಮ, ಸುಮಿತ್ರಾ ಬಿಸೆ, ಸುನೀತಾ ನಾಯಿಕ, ಸುವರ್ಣ ನಿರಲೆಕರ, ಶಾಂತಾ ಕಾಂಬಳೆ, ಸಾರಿಕಾ ಕಾಂಬಳೆ,ರುಕ್ಸನಾ ಅಲಾಸ, ಶಿಕ್ಷಕರಾದ ಎ ಎಸ್ ಮಾಕನ್ನವರ, ಕೆ ಎಸ್ ನಾಯ್ಕೋಡಿ ಪ್ರವೀಣ್ ನಾಯಕ, ವಿ ಎಸ್ ಪಕೀರೆ, ವಿ ಬಿ ಪಾಟೀಲ, ಟಿ ಬಿ ಒಡೆಯರ, ಆರ್ ಬಿ ನಿಲಜಗಿ,ಎ ಎಸ್ ಚೌಗಲಾ, ಎನ್ ಎ ಚೌಧರಿ, ಪಿ ಟಿ ಕಾಂಬಳೆ ಪಾಲಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಮನರಂಜನೆ ಸಂಸ್ಕೃತಿ ಕಾರ್ಯಕ್ರಮ ನಡೆಯಿತು ವಿ ಎಂ ಪೂಜಾರಿ ಸ್ವಾಗತಿಸಿ ವಂದಿಸಿದರು.ಫೋಟೋಮಧುಭಾವಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯಲ್ಲಿಶಿಕ್ಷಕರಾದ ತುಕಾರಾಂ ಒಡೆಯರ್ ಇವರನ್ನು ವಿನಾಯಕ್ ಬಾಗಡಿ ಮಹದೇವ್ ಕೋರೆ ಸತ್ಕರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 