ನಟ ಯುವರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು
Fans are overwhelmed to see actor Yuvaraj Kumar
ಕೊಪ್ಪಳ 27: ನಟ ಯುವ ರಾಜಕುಮಾರ್ ನಟನೆಯ ಎಕ್ಕ ಚಲನಚಿತ್ರ ಶ್ರೀಲಕ್ಷ್ಮಿ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರವಿವಾರದಂದು ಅಭಿಮಾನಿಗಳನ್ನು ಭೇಟಿಯಾಗಲು ಬಂದ ರಾಘವೇಂದ್ರ ರಾಜಕುಮಾರ್ ಪುತ್ರ ನಟ ಯುವರಾಜಕುಮಾರನನ್ನು ನೋಡಿ ಸಾವಿರಾರು ಅಭಿಮಾನಿಗಳು ಅವರ ಮೇಲೆ ಹೂ ಹಾಕಿ ಸಂಭ್ರಮಿಸಿ,ಕುಣಿದರು.
ಚಿತ್ರಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಿತ್ರಮಂದಿರದ ಮಾಲೀಕರಾದ ವೀರೇಶ್ ಮಹಾಂತಯ್ಯನಮಠ, ವಿಶ್ವನಾಥ್ ಮಹಾಂತಯ್ಯನಮಠ ವ್ಯವಸ್ಥೆಮಾಡಿದ್ದರು. ಆದರೆ ಚಿತ್ರಮಂದಿರ ಒಳಗೆ ಬರಲು ಆಗದಷ್ಟು ಅಭಿಮಾನಿಗಳು ಶ್ರೀ ಲಕ್ಷ್ಮಿ ಚಿತ್ರಮಂದಿರದ ಆವರಣದಲ್ಲಿ ಸೇರಿದ್ದು ಪೊಲೀಸ್ ಸಿಬ್ಬಂದಿಗಳು ಭದ್ರತೆ ವ್ಯವಸ್ಥೆ ಕೈಗೊಂಡಿದ್ದರು ಆದರೆ ನಾಯಕ ನಟ ಯುವರಾಜ್ ಕುಮಾರ್ ಕಾರಿನಿಂದ ಕೆಳಗೆ ಇಳಿಯಬೇಕೆಂದರೆ ಅಭಿಮಾನಿಗಳು ಸಾಕಷ್ಟು ಕೆಕೆ ಶಿಳ್ಳೆ ಜೈಕಾರ ಹಾಕುತ್ತಿದ್ದು ಕಂಡು ಕಾರಿನ ಮೇಲೆ ಕೇಕ್ ಕತ್ತರಿಸಿ ಅಭಿಮಾನಿಗಳತ್ತ ಕೈಬಿಸಿ ಕೈ ಕುಲುಕಿ ಗಂಗಾವತಿಗೆ ತೆರಳಿದರು.
ಈ ಸಂದರ್ಭದಲ್ಲಿ ಚಿತ್ರಮಂದಿರದ ವ್ಯವಸ್ಥಾಪಕರಾದ ಶಿವಾನಂದಯ್ಯ ಉತ್ತಂಗಿಮಠ ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 