ಕುಟುಂಬ, ಸ್ನೇಹ ಎರಡು ಅವಿನಾಭಾವ ಸಂಬಂಧ ಹೊಂದಿವೆ: ಪ್ರೋ.ವಾಯ್‌.ಎಮ್ ಯಾಕೊಳ್ಳಿ

ಕುಟುಂಬ, ಸ್ನೇಹ ಎರಡು ಅವಿನಾಭಾವ ಸಂಬಂಧ ಹೊಂದಿವೆ: ಪ್ರೋ.ವಾಯ್‌.ಎಮ್ ಯಾಕೊಳ್ಳಿ Family and friendship are two inseparable things: Prof. Y.M. Yakoli

 ನೇಸರಗಿ 06 :  ಜೀವನದಲ್ಲಿ ನಾವು, ನೀವೆಲ್ಲರೂ ಕುಟುಂಬಕ್ಕೆ ಹೇಗೆ ಪರಸ್ಪರ ಪ್ರೀತಿ, ವಿಶ್ವಾಸ ನೀಡುತ್ತಿರೋ, ಸ್ನೇಹಕ್ಕೆ ಅದೇ ರೀತಿ ಅನುಕರಣೆ ಮಾಡಿ ಜೀವನದಲ್ಲಿ ಮುಂದೆ ಬನ್ನಿ ಎಂದು ನಿವೃತ್ತ ಪ್ರಾಂಶುಪಾಲರಾದ ವಾಯ್ ಎಮ್ ಯಾಕ್ಕೊಳಿ ಹೇಳಿದರು. ಅವರು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 1999-2002 ರವರೆಗೆ ಬಿ ಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಿತರ ಪುನರ ಮಿಲನ ಕಾರ್ಯಕ್ರಮ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ ಡಿ ಗದ್ದಿಗೌಡರ ವೀರಚಿತ ಗುರು ನೀನು ಶಿಷ್ಯ ನಾನು ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಕಠಿಣ ಪರಿಶ್ರಮದಿಂದ ಮುಂದೆ ಬಂದಿದ್ದು, ಇದಕ್ಕೆ ನಮ್ಮ ಕುಟುಂಬದ ಸಹಕಾರ ಇದ್ದು, ಹಾಗೆ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಪ್ರೀತಿ ವಿಶ್ವಾಸದಿಂದ  ಕಾಣಿರಿ ಎಂದರು.     

ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಜಂಟಿ ನಿರ್ದೇಶಕರಾದ ವ್ಹಿ ಎಸ್ ಪ್ರಕಾಶ ಮಾತನಾಡಿ ಕುಟುಂಬಕ್ಕಿಂತ ಸ್ನೇಹಕ್ಕೆ ಹೆಚ್ಚಿನ ಬೆಲೆ  ಇದ್ದು, ಬಾಲ್ಯದ ಸ್ನೇಹಿತರನ್ನು ನಾವು, ನೀವೆಲ್ಲರೂ ಮರೆಯಬಾರದು, ತಾವು ಎಲ್ಲರೂ ಇಂದು ಈ ವೇದಿಕೆಯಲ್ಲಿ ಸೇರಿದ್ದು ಸಂತಸ ನೀಡಿದ್ದು, 27 ವರ್ಷಗಳ ಹಿಂದಿನ ಸವಿ ನೆನಪು ಪಾಠ ಕಲಿಸಿದ ಗುರುಗಳಿಗೆ ಗುರುವಂದನೆ ಮಾಡುತ್ತಿರುವದು ಹೆಮ್ಮೆಯ ವಿಷಯ ಎಲ್ಲರಿಗೂ ಯಾಕೊಳ್ಳಿ ಗುರುಗಳ ಕುಟುಂಬ ಪದ್ಧತಿ ಮಾದರಿ  ಎಂದರು.   

 ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಎಫ್ ಡಿ ಗದ್ದಿಗೌಡರ ಮಾತನಾಡಿ 27 ವರ್ಷಗಳ ಹಿಂದೆ ವ್ಯಾಸಂಗ ಮಾಡಿದ್ದ ತಾವು ಇಂದು ಕಾಲೇಜು ನೆನಪಿಸಿ, ಕಷ್ಟಪಟ್ಟು ಕಾರ್ಯಕ್ರಮ ಆಯೋಜನೆ ಮಾಡಿ, ಗುರುಗಳಿಗೆ ವಂದನೆ ಸಲ್ಲಿಸಿ ಕಾಲೇಜು ಅಭಿವೃದ್ಧಿಗೆ ತಾವು 20 ಡೆಸ್ಕಗಳನ್ನು ದೇಣಿಗೆ ನೀಡಿ ಹಿಂದಿನ ಕಾಲೇಜು ವಿದ್ಯಾರ್ಥಿಗಳಾದ ತಾವುಗಳು ಕಾಲೇಜು ಅಭಿವೃದ್ಧಿಗೆ ಕಾಣಿಕೆ ನೀಡಿ ಅಪಾರ ಸಾಧನೆ ಮಾಡಿದ್ದೀರಿ, ಮುಂದೆ ನಮ್ಮ ಕುಟುಂಬ, ಸ್ನೇಹ ಸದಾ ಮುಂದೆ ಸಾಗಲಿ ಎಂದರು.  

 ಕಾರ್ಯಕ್ರಮದಲ್ಲಿ ಪ್ರೋ. ಬಿ ಪಿ ಮಠದ, ಪ್ರೋ ಎಸ್ ವ್ಹಿ ಚಿನಗುಡಿ, ಡಾ. ಎ ಎಸ್ ನಾಯಿಕ, ಡಾ. ಜೆ ಎಮ್ ಜಾಲಿಹಾಳ, ಪ್ರೋ. ಅರ್ ಜೆ ಕಟ್ಟಿ,ಪ್ರೋ. ಎಮ್ ಎ ಡವಳೇಶ್ವರ, ಪ್ರೋ. ಬಿ ಎ ಹಸರಡ್ಡಿ,, ಪ್ರೋ, ಎಸ್ ವಿ ಚಿಂಚಣಿ, ಪ್ರೋ. ಬಿ ಕೆ ಮದವಾಲ, ಪ್ರೋ ಎಸ್ ಕೆ ಮೂಲಿಮನಿ, ಪ್ರೋ ಡಿ ಎಸ್ ಮಲ್ಲಿಭಾಶೆಟ್ಟಿ,ಮಲ್ಲಿಕಾರ್ಜುನ ಮಾಳಣ್ಣವರ, ಜೆ ಬಿ ಬೂದಿಹಾಳ, ಎಸ್ ಎಸ್ ಉಕ್ಕಿನಯ್ಯನವರ, ಐ ಬಿ ಫೀರಜಾದೆ, ಸುಜಾತಾ ಮಹಾಳೆ, ರಾಘವೇಂದ್ರ ಕುಲಕರ್ಣಿ,

ಎನ್ ಎಮ್ ನೀಲಣ್ಣವರ, ಡಿ ಅರ್ ಸಾಲುಂಕೆ, ಸುಧಾರಣೆ ಸಮಿತಿ ಸದಸ್ಯರಾದ ನಜೀರ್ ಅಹಮ್ಮದ ತಹಶೀಲ್ದಾರ, ಚನಗೌಡ ಪಾಟೀಲ, ಯಮನಪ್ಪ ಪೂಜೇರಿ, ಸುರೇಶ ಲೆಂಕನಟ್ಟಿ, ಸುನೀಲ ಪಿಸೆ ಹಾಗೂ ಅಡಿವಪ್ಪ ಚಿಗರಿ, ಪಿ ಡಿ ಓ ವನಜಾಕ್ಷಿ ಪಾಟೀಲ, ಕಾಲೇಜು ಪ್ರಾಧ್ಯಾಪಕರು, ಭೋಧಕ, ಭೋಧಕ್ಕೇತ್ತರ ಸಿಬ್ಬಂದಿ, 1999-2002 ರವೆರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.  ನಿರೂಪಣೆಯನ್ನು ಪಟ್ಟೆದ ಗುರುಗಳು ನೆರವೇರಿಸಿದರೆ, ಪರಿಚಯ ಅಭಿನಂದನೆಯನ್ನು ಕಳ್ಳಿಬಡ್ಡಿ ನಡೆಸಿಕೊಟ್ಟರು.