ನವದೆಹಲಿ, ಮೇ 8,ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನ ‘ಮಿಗ್ -29’ ಶುಕ್ರವಾರ ಪಂಜಾಬ್‌ನ ಜಲಂಧರ್ ಬಳಿ ಪತನಗೊಂಡಿದ್ದು, ಪೈಲಟ್ ವಿಮಾನದಿಂದ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ. ‘ಜಲಂಧರ್ ಬಳಿಯ ವಾಯುಪಡೆಯ ನೆಲೆಯಿಂದ ಹೊರಟ ಮಿಗ್ -29 ವಿಮಾನ ತರಬೇತಿ ಕಾರ್ಯದಲ್ಲಿದ್ದು, ಶುಕ್ರವಾರ ಬೆಳಿಗ್ಗೆ 10.45ಕ್ಕೆ ಪತನಗೊಂಡಿದೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ವಿಮಾನವನ್ನು ನಿಯಂತ್ರಿಸಲು ಸಾಧ್ಯವಾಗದೆ ಪೈಲಟ್ ಸುರಕ್ಷಿತವಾಗಿ ಜಿಗಿದು ಪಾರಾಗಿದ್ದಾರೆ.’ ಎಂದು ವಾಯುಪಡೆಯ ಪ್ರಕಟಣೆ ತಿಳಿಸಿದೆ. ಪೈಲಟ್‌ನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.ಅಪಘಾತಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವರದಿಗಳಂತೆ, ಪರಿಸ್ಥಿತಿಯನ್ನು ತಿಳಿದ ಪೈಲಟ್‌ಗಳು ವಿಮಾನವನ್ನು ಖಾಲಿ ಜಾಗದಲ್ಲಿ ಬೀಳಿಸಿದ್ದಾರೆ.