ಜಾತ್ರೆಗಳು ಸಮಾಜಮುಖಿಯಾಗಿರಬೇಕು: ವೀರಯ್ಯ ಉಳಾಗಡ್ಡಿಮಠ

ಜಾತ್ರೆಗಳು ಸಮಾಜಮುಖಿಯಾಗಿರಬೇಕು: ವೀರಯ್ಯ ಉಳಾಗಡ್ಡಿಮಠ Fairs should be socially oriented: Veeraiah Ulagaddimath

ಕುಕನೂರ ಜೂ 27 : ಜಾತ್ರೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಜಾತ್ರೆ ಜನಮಾನಸದಲ್ಲಿ ಉಳಿಯಲು ಸಾದ್ಯ ಎಂದು ಶ್ರೀಮಠದ ಉಪಾಧ್ಯಕ್ಷರಾದ ವೀರಯ್ಯ ಉಳಾಗಡ್ಡಿಮಠ ಹೇಳಿದರು. 

ಅವರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 202ನೇ ಶಿವಾನುಭವ ಮತ್ತು ಶ್ರೀಮಠದ 2025ನೇ ಸಾಲಿನ ಜಾತ್ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಕ್ತರ ಸಹಕಾರವೇ ಕಾರ್ಯಕ್ರಮ ಯಶಸ್ವಿಗೆ ಕಾರಣ, ಶ್ರೀಮಠದ ಭಕ್ತ ವರ್ಗ ಸಾಕಷ್ಟು ಸೇವೆ ಮಾಡುತ್ತಿದೆ, ಕುಕನೂರ ಸೇರಿದಂತೆ ಹಳ್ಳಿಗಳ ಭಕ್ತರ ಕೊಡುಗೆ ಶ್ರೀಮಠಕ್ಕೆ ತುಂಬಾ ಇದೆ ಎಂದರು.  ನಂತರ ಮಾತನಾಡಿದ ಶ್ರೀಮಠದ ಕಾರ್ಯದರ್ಶಿ ಗದಿಗೆಪ್ಪ ಪವಾಡಶೆಟ್ಟಿ ಈ ವರ್ಷದ ಜಾತ್ರೆ ಹಲವಾರು ವಿಶೇಷತೆಗಳಿಂದ ಕೂಡಿದೆ ಅದರಲ್ಲಿ ಗುದ್ನೇಶ್ವರ ಪುರಾಣ, ಲಿಂಗದಾರಣ, ಪಾದಯಾತ್ರೆ, ಅಯ್ಯಾಚಾರ, ಸಾಮೂಹಿಕ ವಿವಾಹಗಳು, ರಥೋತ್ಸವ, ಭಕ್ತ ಹಿತಚಿಂತನಾಗೋಷ್ಟಿ, ಶಿವಾನುಭವ, ಸಾಧಕರ ಸನ್ಮಾನ, ಗುರುವಂದನಾ, ಕುಂಭೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.   ಯುವ ಮುಖಂಡ ಯಲ್ಲಪ ಹೊಸಮನಿ ಮಾತನಾಡಿ ಭಕ್ತರಿಂದ ಭಕ್ತರಿಗಾಗಿ ಭಕ್ತರಿಗೋಸ್ಕರ ಹಲವಾರು ವರ್ಷಗಳಿಂದ ಶ್ರೀಮಠ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಇಂತಹ ಪುಣ್ಯಮಯ ಕಾರ್ಯದಲ್ಲಿ ಎಲ್ಲಾರು ಪಾಲ್ಗೊಂಡು ತಮ್ಮ ಸೇವೆಯನ್ನ ಸಲ್ಲಿಸಬೇಕು ಹಾಗೂ ಶ್ರೀಮಠದಲ್ಲಿ ಪುರಾಣ ಜುಲೈ 30 ರಿಂದ ಆಗಸ್ಟ್‌ 22 ರವರೆಗೆ ಗುದ್ನೆಶ್ವರ ಪುರಾಣ ಅಂದು ಸಾಮೂಹಿಕ ವಿವಾಹ ಮತ್ತು ರಥೋತ್ಸವ ಜರುಗಲಿದೆ ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ವೀರಯ್ಯ ತೋಂಟದಾರ್ಯಮಠ, ಶರಣಪ್ಪ ಗುತ್ತಿ, ಸಂಗಮೇಶ ಕಲ್ಮಠ, ಈಶಪ್ಪ ಮಾಡಿವಾಳರ,  ಪ್ರಭು ಶಿವಶಿಂಪರ, ಬಸಪ್ಪ  ಭಂಗಿ, ರವಿ ಗದಗ, ಹನುಮಂತ ಭಂಗಿ, ಅಶೋಕ, ಶಿವು ಸೇರಿದಂತೆ ಹಲವಾರು ಭಕ್ತರು ಇದ್ದರು.