ಜಾತ್ರೆಗಳಿಂದ ಪ್ರೀತಿ, ವಿಶ್ವಾಸ ಹೆಚ್ಚಳ : ಸಂಸದ ಕಾಗೇರಿ
Fairs increase love and trust: MP Kageri
ನೇಸರಗಿ 04: ನಗರ ಪಟ್ಟಣ, ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಿಂದ ಅದರಲ್ಲಿ ಗ್ರಾಮದೇವತೆಯ ಜಾತ್ರೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಜಾತ್ರೆಗಳಿಂದ ಜನರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ಶನಿವಾರದಂದು ಸಮೀಪದ ಮದನಬಾವಿ ಗ್ರಾಮದಲ್ಲಿ 11 ವರ್ಷಗಳ ನಂತರ ನಡೆಯುತ್ತಿರುವ ಶ್ರೀ ಗ್ರಾಮದೇವತೆಯ ಅದ್ದೂರಿ ಜಾತ್ರೆಗೆ ಬೇಟಿ ನೀಡಿ, ದೇವಿಯ ದರ್ಶನ ಪಡೆದು ಮಾತನಾಡಿ ಶ್ರೀ ಗ್ರಾಮದೇವತೆಯೂ ಗ್ರಾಮದ ಎಲ್ಲರಿಗೂ ಸುಖ ಸಂತೋಷ, ಮಳೆ, ಬೆಳೆ, ನೀಡಿ ಜನ ಸದಾ ಸುಖದಿಂದ ಜೀವನ ಮಾಡಲಿ ಎಂದರು.
ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ 11 ವರ್ಷಗಳ ನಂತರ ಗ್ರಾಮದೇವತೆ ಜಾತ್ರೆ ನಡೆಯುತ್ತಿರುವದು ನಮಗೆಲ್ಲರಿಗೂ ಸಂತಸ ತಂದಿದ್ದು, ದೂರದ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರೂ ಇಂದು ಗ್ರಾಮಕ್ಕೆ ಬಂದು ತನು ಮನ ಧನದಿಂದ ಜಾತ್ರೆ ಅಚರಿಸುತ್ತಿದ್ದು ಸಂತಸದ ವಿಷಯ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಪ್ಪ ಗುಜನಾಳ, ಯಲ್ಲನಗೌಡ ದೊಡ್ಡಗೌಡರ, ಅಜ್ಜಪ್ಪ ಹಮ್ಮಿನಿ, ನಿಂಗನಗೌಡ ದೊಡ್ಡಗೌಡರ, ಈರನಗೌಡ ದೊಡ್ಡಗೌಡರ, ಚನಗೌಡ ಹಾದಿಮನಿ, ಬಸವರಾಜ ಬದ್ರಿ, ಸೋಮಪ್ಪ ಕೊಳದೂರ, ಶಂಕರಗೌಡ ಕೊಳದೂರ , ಜಾತ್ರಾ ಕಮಿತಿ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 