ಜಾತ್ರೆಗಳಿಂದ ಬಾಂಧವ್ಯ, ಸಂಸ್ಕಾರ ಹೆಚ್ಚಳ : ಬಾಬಾಸಾಹೇಬ ಪಾಟೀಲ
Fairs increase bonding and culture: Babasaheb Patil
ನೇಸರಗಿ 21: ದೇಶದಲ್ಲಿ ನಡೆಯುವ ಜಾತ್ರೆ, ಆದ್ಯಾತ್ಮಿಕ ಪ್ರವಚನ, ಅನ್ನ ದಾಸೋಹ ಪರಸ್ಪರ ಮನುಷ್ಯ ಮನುಷ್ಯರು ಬೆರೆತು ಹಬ್ಬ ಜಾತ್ರೆಗಳನ್ನು ಆಚರಿಸಿ, ಸ್ನೇಹಿತರು, ಸಂಬಂದಿಕರು, ಹೊರ ದೂರದ ಊರುಗಳಲ್ಲಿ ವಾಸಿಸುವ ಗ್ರಾಮದ ಜನರು ಇಂತಹ ಜಾತ್ರೆಗಳಲ್ಲಿ ಪಾಲ್ಗೊಂಡು ಬಾಂದವ್ಯ, ಸಂಸ್ಕಾರ ಹೆಚ್ಚಿಸುವ ಸತ್ಕಾರ್ಯ ಆಗುತ್ತದೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಶುಕ್ರವಾರದಂದು ಗ್ರಾಮದ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಜಾತ್ರಾ ಮಹೋತ್ಸವದ ನಿಮಿತ್ಯ ಇಂದು ನಡೆದ ರಥೋತ್ಸವದಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದು, ದೇವಸ್ಥಾನದ ಆವರಣದಲ್ಲಿ ನೂತನ ಕೋಣೆ ಉದ್ಘಾಟನೆ ನೆರವೇರಿಸಿ ಮಾತನಾಡಿ ಚನ್ನವೃಷಬೇಂದ್ರ ಅಜ್ಜನವರ ದೇವಸ್ಥಾನಕ್ಕೆ ಈಗಾಗಲೇ ಅನುಧಾನ ನೀಡಿದ್ದು ಮುಂದಿನ ದಿನಗಳಲ್ಲಿ ಮಠದ ಅಭಿವೃದ್ಧಿಗೆ ಸದಾ ಸಹಕರಿಸುತ್ತೇನೆ ಎಂದರು.
ಸಾನಿಧ್ಯ ವಹಿಸಿ ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಚನ್ನವೃಷಬೇಂದ್ರ ಅಜ್ಜನವರ ಮಠವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಇದಕ್ಕೆ ಸದ್ಭಕ್ತರ ಭಕ್ತಿಯ ಸೇವೆ, ರಾಜಕೀಯ ಮುಖಂಡರ ಸಹಕಾರ ಎಂದರು. ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಎಲ್ಲ ಸಮಾಜದ ಮುಖಂಡರು, ನೇಸರಗಿ ಗ್ರಾಮಸ್ಥರು, ಸಕಲ ಸದ್ಭಕ್ತರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 