ಏ.8 ರಿಂದ ಜಾತ್ರಾ ಮಹೋತ್ಸವ ಹಾಗೂ ಪುರಾಣ ಪ್ರಾರಂಭೋತ್ಸವ
Fair and Purana Opening Celebrations from 8th April
ತಾಳಿಕೋಟಿ 06: ತಾಲೂಕಿನ ಶಳ್ಳಗಿ ಗ್ರಾಮದಲ್ಲಿ ಶ್ರೀ ಬಸವಂತರಾಯ ಮುತ್ಯಾ ಮತ್ತು ಪರಮಣ್ಣ ಮುತ್ಯಾರವರ 2ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪುರಾಣ ಆರಂಭೋತ್ಸವ ಏಪ್ರಿಲ್ 8 ರಿಂದ ಆರಂಭವಾಗಲಿದೆ. ದಿ.8-4-2026 ರಿಂದ 20-4-2026 ರವರೆಗೆ ಕಲ್ಬುರ್ಗಿ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣವನ್ನು ಪುರಾಣಿಕ ವೇ.ಮೂ. ಬಸಯ್ಯಸ್ವಾಮಿ ಸೋಮಶೇಖರಮಠ(ಯಾಳಗಿ) ಇವರು ನಡೆಸಿಕೊಡುವರು.ಏ.20 ರಂದು ಬೆಳಿಗ್ಗೆ 6:00 ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಕುಂಭ ಕಳಸ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಯುವುದು ನಂತರ ಮಧ್ಯಾಹ್ನ 12 ಘಂಟೆಗೆ ಮಹಾ ಪ್ರಸಾದ ಇರುವುದು ಹಾಗೂ ಸಂಜೆ 4 ಘಂಟೆಗೆ ಧರ್ಮಸಭೆ ಹಾಗೂ ಪುರಾಣ ಮಂಗಲೋತ್ಸವ ಜರುಗುವುದು.ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಮಾಗಣಗೇರಿಯ ಷ.ಬ್ರ.ಡಾ.ವಿಶ್ವರಾಧ್ಯ ಶಿವಾಚಾರ್ಯರು, ನಾವದಗಿಯ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು, ತಾಳಿಕೋಟಿಯ ಶ್ರೀ ಸಿದ್ದಲಿಂಗ ದೇವರು ವಹಿಸಲಿದ್ದು, ಸಾನಿಧ್ಯವನ್ನು ಶ್ರೀ ಮಲ್ಲಯ್ಯ ಹಿರೇಮಠ, ಮಲ್ಲಯ್ಯ ಮಠ ವಹಿಸುವರು. ನೇತೃತ್ವವನ್ನು ಸಣಕೆಪ್ಪ ಮುತ್ಯಾ ದೊಡ್ಡ ಪೂಜಾರಿ, ಶ್ರೀ ನಿಂಗಣ್ಣ ಮುತ್ಯಾ ಸಣ್ಣ ಪೂಜಾರಿ, ಶ್ರೀ ಮುದಕಣ್ಣ ಪೂಜಾರಿ, ಶ್ರೀ ಪರಮಣ್ಣ ಶರಣರು ಹಾಗೂ ಶ್ರೀ ದೊಡ್ಡಪ್ಪಗೌಡ ಹಾದಿಮನಿ ವಹಿಸುವರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ,ಮಾಜಿ ಶಾಸಕ ಸೋಮನಗೌಡ ಬಿ.ಪಾಟೀಲ, ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ(ಯಾಳಗಿ),ಡಾ. ಪ್ರಭುಗೌಡ ಲಿಂಗದಳ್ಳಿ, ಬಸನಗೌಡ ಪಾಟೀಲ (ಎಡಿಯಾಪುರ),ಆನಂದಗೌಡ ದೊಡ್ಡಮನಿ ಸಮಾರಂಭ ಉದ್ಘಾಟಿಸುವರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೆ.ನಾಡಗೌಡ ಅಧ್ಯಕ್ಷತೆ ವಹಿಸುವರು. ಕಾಶಿರಾಯ ಚ.ದೇಸಾಯಿ ಗೌರವ ಅಧ್ಯಕ್ಷತೆ ಇರುವುದು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ರಾಜಕೀಯ ದುರೀಣರು ಉಪಸ್ಥಿತರಿರುವರು. ಶಳ್ಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಜ್ಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 