ಪ್ಯಾಕ್ಟರಿ ರೈತರ ಉದ್ಧಾರಕ್ಕೆ ಅಲ್ಲ, ನಿಮ್ಮಲಾಭಕ್ಕಾಗಿ: ಪ್ರಮೋದ ಮುತಾಲಿಕ್ ದೇಸಾಯಿ

ಪ್ಯಾಕ್ಟರಿ ರೈತರ ಉದ್ಧಾರಕ್ಕೆ ಅಲ್ಲ, ನಿಮ್ಮಲಾಭಕ್ಕಾಗಿ: ಪ್ರಮೋದ ಮುತಾಲಿಕ್ ದೇಸಾಯಿ  Factory is not for the welfare of farmers, but for your profit: Pramod Muthalik Desai

   

ಗುರ್ಲಾಪೂರ 05: ಗುರ್ಲಾಪೂರ ಕ್ರಾಸ್‌ದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವುದು ಎಲ್ಲಿ ನೋಡಿದರಲ್ಲಿ ರೈತರೆ, ಈ ರೈತರ ಹೋರಾಟದಲ್ಲಿ ಎರಡು ದಿನ ಅಂದ್ರೆ ಮಂಗಳವಾರ ಮತ್ತು ಬುಧವಾರ ರಾಜ್ಯಾಧ್ಯಕ್ಷರಾದ ವಿಜೇಯಂದ್ರ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಪಿ.ರಾಜೀವ, ಶಾಸಕರಾದ ಸಿದ್ದುಸವದಿ ಹಾಗೂ ಇನ್ನು ಅನೇಕರು ರಾತ್ರಿ ರೈತರ ಜೊತೆಯಲ್ಲಿ ಬೀದಿಯಲ್ಲಿ ಮಲಗಿದರು. ಬುಧವಾರ ಬಿ.ವಾಯ್‌.ವಿಜೇಯಂದ್ರ ಅವರು ಸರವಾಗಿ  ಹಾರ, ತುರಾಹಿ ಆಡಂಬರ ಇಲ್ಲದೆ ರೈತರು ಬೆಳೆದ ಕಬ್ಬು ಉಡುಗೊರೆಯಾಗಿ ಕೊಟ್ಟು, ಬೆಲ್ಲ ತಿನಿಸಿದರು ರೈತರು. ಸರವಾಗಿ ರೈತರ ಹೋರಾಟದ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬ ಆಚರಿಕೊಂಡ ನಂತರ ನಾನು ಶಾಸಕನಾಗಿ ಹಾಗೂ ರಾಜ್ಯಾಧ್ಯಕ್ಷನಾಗಿ ಬಂದಿಲ್ಲ, ನಿಮ್ಮಲ್ಲಿ ನಾನು ಒಬ್ಬ. ನಿಮಗೆ ಆಗಿತ್ತಿರುವ ಅನ್ಯಾಯ ಕೇಳಿ ನಾನು ಒಬ್ಬ ಹೋರಾಟಗಾರನ ಮಗನಾಗಿ ನಿಮಗೆ ಸದಾ ನಮ್ಮ ಬೆಂಬಲ ಇರುತ್ತದೆ. ನಿಮ್ಮ ತಿರ್ಮಾಣಕ್ಕೆ ನಾವು ಸದಾ ಬದ್ದರಾಗಿರುತ್ತೇವೆ ಎಂದರು ಬಿ.ವಾಯ್‌.ವಿ ಆಶ್ವಾಸನೆನೀಡಿದರು.  

ಇದು ಹೋರಾಟ, ಅಲ್ಲ ಇದೊಂದು ಮಹಾಚಳುವಳಿ ಈ ಚಳುವಳಿಯಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಬಹಳ ಖುಷಿ ತಂದಿರುವುದು. ಇಂದಿಗೆ ಏಳು ದಿನವಾಯಿತು ಇಲ್ಲೇ.. 30ಕಿ.ಲೋಮೀಟರ್ದೂರದಲ್ಲಿದವರಿಗೆ ಬಂದ ರೈತರ ಜೊತೆ ಭಾಗವಹಿಸಲಿಲ್ಲ. ಮಹಾರಾಷ್ಟ್ರದಲ್ಲಿ ಟನಗೆ 3500 ಸಾವಿರ ಕೊಡುತ್ತಾರೆ ಅಂದರೆ ಯಾಕೇ.. ಕರ್ನಾಟಕದಲ್ಲಿ ಆಗುವುದಿಲ್ಲ ವೆಂದು ರಾಜ್ಯಸಭಾ ಸದಸ್ಯರಾ ಈರಣ್ಣ ಕಡಾಡಿ ಕೇಳುವುದರ ಜೊತೆ ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಸರ್ಕಾರ  ರೈತರನ್ನು ನೆಲದಮೇಲೆ ಕುಳಿಸಿತು .ಈ ಜಗತ್ತು ನಡೆದಿರುವುದು ರೈತರ ದುಡಿಮೆ  ಅವರ ಬೆವರಿನಿಂದ. ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಧಿಕ್ಕಾರವಿರಲಿ. ರೈತರ ಕಷ್ಟಕ್ಕೆ ಸರಿಯಾದ ಬೆಲೆ ಇಲ್ವಾ.. 3500 ಸಾವಿರ ರೈತರು ಬೇಡಿಕೆ ಇಟ್ಟಿದ್ದಾರೆ, ಕರ್ನಾಟಕವನ್ನು ಅಲ್ಲಾಡಿಸುತ್ತಾರೆ ಹೀಗೆಹೋದರೆ. ಇತ್ತೀಚಿನ ಒಂದು ವರ್ಷದಲ್ಲಿ ಎಮ್‌.ಎಲ್‌.ಎಗಳ ಸಂಬಳ (ಪಗಾರ) ಹೆಚ್ಚಿಸಿಕೊಂಡರು, ಬತ್ತೆ, ದೂರವಾಣಿ, ಮನೆಬಾಡಗಿ ಹೀಗೆತಮ್ಮ ಅನೂಕುಲಕ್ಕಾಗಿ ಮಾಡಿಕೊಂಡು, ಅದರೆಯಾರು ಒಬ್ಬರು ಬಾಯಿ ಬಿಡಲಿಲ್ಲ ಬಡ್ಡಿಮಕ್ಕಳು. ಈಗ3500 ರೈತರು ದುಡಿದು ಕೇಳುತ್ತಿದರೆ ಕೊಡುವುದಕ್ಕೆ ಆಗುತ್ತಿಲ್ಲ ನಿಮಗೆ. ಪ್ಯಾಕ್ಟರಿಯಾರ ಸಲುವಾಗಿ ಕಟ್ಟಿದ್ದಿರಿ..ನೀವು.  ಪ್ಯಾಕ್ಟರಿ ಕಟ್ಟಿದ್ದು ನಿಮ್ಮಲಾಭಕ್ಕಾಗಿ, ರೈತರ ಉದ್ದಾರಕ್ಕೆ ಅಥವಾ ಲಾಭಕ್ಕಾಗಿ ಅಲ್ಲ. ತಮ್ಮ ಸ್ವಾರ್ಥಸಾಧನೆಗಾಗಿ ಸಂಘಟನೆ ಒಡೆಯುತ್ತಾರೆ,

ರಾಜಕೀಯ ವ್ಯಕ್ತಿಗಳನ್ನು ನಂಬಬೇಡಿ, ನಂಬಿ ರೈತಹೋರಾಟ ಮಾಡುನಾಯಕರನ್ನು ನಂಬಿ. ಇಲ್ಲಿ ಎಲ್ಲ ಜಿಲ್ಲೆಯ ರೈತರು ಹೋರಾಟಕ್ಕೆ ಭಾಗಿಯಾಗಿ ಒಗ್ಗಟ್ಟು ತೊರಿಸಿದ್ದಿರಿ, ಇದೆ ರೀತಿಯಾಗಿ ನಿಮ್ಮ ಒಗ್ಗಟ್ಟು ಇರಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ ಮುತಾಲಿ ದೇಸಾಯಿ ಅವರು ಸಹಕಾರದ ಮಾತುಗಳನಾಡಿದರು.  ಹಂದಿ ಗುಂದ ಗ್ರಾಮದಿಂದ ಮಹಿಳೆಯರು ಸಾವಿರಾರು ರೊಟ್ಟಿ ಬುತ್ತಿಕಟ್ಟಿಕೊಂಡು ಬಂದರು. ಸಾವಿರಾರು ಜನರಿಗೆ ಮುಂಜಾನೆ ಯಿಂದ ಊಟದ ವ್ಯವಸ್ಥೆ ಕೂಡಾ ನಡೆದಿತ್ತು ಮತ್ತು ಮಜ್ಜಿಗೆ, ಬುಂದೆ ಹೀಗೆ ಇನ್ನು ನಾನಾ ತರಹದ ಭೋಜನಕ್ಕೆ ದಾನಿಗಳು ತಂದು ಕೊಡುತ್ತಿದ್ದರು. ಮಾಜಿ ಶಾಸಕ ಶಶಿಕಾಂತ ನಾಯಿಕ, ರೈತ ಹೋರಾಟಗಾರರಾದ ಭೀಮಶಿ  ಗುರುಜಿ, ಚೂನಪ್ಪಪೂಜೇರಿ ಇನ್ನು ಅನೇಕ ಸಹಸ್ರಾರು ರೈತರು ಭಾಗಿಯಾಗಿದ್ದರು.