ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್ಆರ್ಪಿ ದರ ನಿಗದಿ: ಡಿಸಿ

ಬಾಗಲಕೋಟೆ: ರಾಜ್ಯದ ಸಕ್ಕರೆ ಕಾಖರ್ಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವಳಿ ಆಧಾರದ ಮೇಲೆ 2019-20ನೇ ಸಾಲಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಯನ್ನು ಕಬ್ಬು ಅಭಿವೃದ್ದಿಯ ಆಯುಕ್ತರು ಹಾಗೂ ಸಕ್ಕರೆ ನಿದರ್ೇಶಕರು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸಕ್ಕರೆ ಕಾಖರ್ಾನೆ ಮಾಲಿಕರ ಮತ್ತು ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಸಕ್ಕರೆ ಕಾಖರ್ಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಸಾಲಿನ ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್ಆರ್ಪಿ ದರವನ್ನು ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು. 

ಜಿಲ್ಲೆಯ ವಿವಿಧ ಸಕ್ಕರೆ ಕಾಖರ್ಾನೆಗಳ ಪ್ರಸಕ್ತ ಸಾಲಿನ ನಿಗದಿಪಡಿಸಿದ ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್ಆರ್ಪಿ ದರ ಬೀಳಗಿ ಶುಗರ್ಸ್ ಲಿಮಿಟೆಡ್ ರೂ.2995, ಜೆಮ್ಸ್ ಶುಗರ್ಸ್ ರೂ.2981, ಸಮೀರವಾಡಿಯ ಗೋದಾವರಿ ಶುಗರ್ಸ್ ರೂ.2830, ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಿಟೆಡ್ ರೂ.3108, ಜಮಖಂಡಿಯ ಶುಗರ್ಸ್ ಲಿ. ರೂ.3174, ಮುಧೋಳನ ನಿರಾಣಿ ಶುಗರ್ಸ್ ರೂ.2846, ಪ್ರಭುಲಿಂಗೇಶ್ವರ ಶುಗರ್ಸ್ ರೂ.3157, ರೈತರ ಸಹಕಾರಿ ಸಕ್ಕರೆ ಕಾಖರ್ಾನೆ ರೂ.3064, ನ್ಯಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ರೂ.2987, ಸಾಯಿಪ್ರಿಯಾ ಶುಗರ್ಸ್ ರೂ.2945, ಸಾವರಿನ್ ಶುಗರ್ಸ್ ರೂ.2750 ದರವನ್ನು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳ ದರವನ್ನು ನಿರ್ಧರಿಸುವ ಕುರಿತಂತೆ ಶನಿವಾರ ಪ್ರತ್ಯೆಕ ಸಭೆ ನಡೆಸಿ ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

          ಕಳೆದ ಸಭೆಯಲ್ಲಿ ನಿರ್ಧರಿಸಿದಂತೆ 2016-17 ಹಾಗೂ 2017-18ನೇ ಹಂಗಾಮಿನ ಘೋಷಿತ ಹೆಚ್ಚುವರಿ ದರವನ್ನು ಕಾಖರ್ಾನೆ ಪ್ರಾರಂಭದ ಪೂರ್ವದಲ್ಲಿ ಶೇ.50 ಹಾಗೂ ಕಾಖರ್ಾನೆ ಪ್ರಾರಂಭಿಸಿದನಂತರ 15 ದಿನಗಳಲ್ಲಿ ಉಳಿದ ಶೇ.50 ಬಾಕಿ ಹಣ ಪಾವತಿಸಬೇಕು ಎಂದರು. ಪ್ರಸಕ್ತ ಸಾಲಿನ ಹಂಗಾಮಿಗೆ ಸಕ್ಕರೆ ಕಾಖರ್ಾನೆ ಹಾಗೂ ರೈತರ ನಡುವಿನ ದ್ವಿಪಕ್ಷೀಯ ಒಪ್ಪಂದದ ನಂತರವೇ ಕಬ್ಬು ನುರಿಸಲು ಪ್ರಾರಂಭಿಸತಕ್ಕದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ವಿವಿಧ ಕಾಖರ್ಾನೆಯ ಮಾಲಿಕರು ರೈತರಿಗೆ ಎಚ್ಎನ್ಟಿ ದರದಲ್ಲಿ ತಾರತಮ್ಯ ಮಾಡಕೂಡದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. 

    ಸಕ್ಕರೆ ಕಾಖರ್ಾನೆ ಮಾಲಿಕರ ಮತ್ತು ರೈತರ ನಡುವಿನ ಉತ್ತಮ ಸೌಹಾರ್ದತೆಯನ್ನು ಇರುವಂತೆ ಮಾಡುವುದೇ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿದರ್ೇಶಕ ಕಂದಗಾವ,  ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ರೈತ ಮುಖಂಡರಾದ ವಿಶ್ವನಾಥ ಉದಗಟ್ಟಿ, ವಿಠಲ ತುಮ್ಮರಮಟ್ಟಿ, ದುಂಡಪ್ಪ ಲಿಂಗರಡ್ಡಿ, ಸುಭಾಷ ಶಿರಬೂರ, ಗಂಗಾಧರ ಮೇಟಿ ಸೇರಿದಂತೆ ವಿವಿಧ ಸಕ್ಕರೆ ಕಾಖರ್ಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.