ಉತ್ತರ ಅಫ್ಘಾನಿಸ್ತಾನದಲ್ಲಿ ನಾಲ್ವರು ಉಗ್ರರ ಹತ್ಯೆ

ಕುಂಡುಜ್, ಫೆ 17,  ಉತ್ತರ ಅಫ್ಘಾನಿಸ್ತಾನ ತಖಾರ್ ಪ್ರಾಂತ್ಯದ ಎಷ್ಕಾಮಿಶ್ ಜಿಲ್ಲೆಯಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ತಾಲಿಬಾನ್ ಸ್ಥಳೀಯ ಕಮಾಂಡರ್ ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಮೊಹಮ್ಮದ್ ಜವಾದ್ ಹಜಾರಿ ತಿಳಿಸಿದ್ದಾರೆ.  ಭಾನುವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ತಾಲಿಬಾನ್ ಭಯೋತ್ಪಾದಕರ ಗುಂಪೊಂದು ಪೊಲೀಸ್ ತಪಾಸಣಾ ಶಿಬಿರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿ ಸ್ವಲ್ಪ ತಾಸು ನಡೆದಿದೆ. ಘಟನೆಯಲ್ಲಿ ತಾಲಿಬಾನ್ ಕಮಾಂಡರ್ ಮುಲ್ಲಾ ಶಾ ದುಲಾ ಸೇರಿದಂತೆ ನಾಲ್ವರು ಭಯೋತ್ಪಾದಕರು ಹತರಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.  

‘ಪ್ರಾಂತೀಯ ರಾಜಧಾನಿ ಕುಂಡುಜ್ ನಗರದ ಪಶ್ಚಿಮ ಹೊರವಲಯದಲ್ಲಿರುವ ಭದ್ರತಾ ತಪಾಸಣಾ ಶಿಬಿರದ ಮೇಲೆ ಉಗ್ರರು ಬಂದೂಕುಗಳು ಮತ್ತು ಸ್ವಯಂಚಾಲಿತ ಬಂದೂಕುಗಳಿಂದ ಮುಂಜಾನೆ ದಾಳಿ ನಡೆಸಿದ್ದಾರೆ. ಶಿಬಿರಗಳಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ತಕ್ಕಪ್ರತ್ಯುತ್ತರ ನೀಡಿದ್ದು, ದಾಳಿಕೋರರು ಸ್ಥಳದಿಂದ ಪರಾರಿಯಾಗದಂತೆ ತಡೆದಿದ್ದರು ಎಂದು ಪ್ರಾಂತೀಯದಿಂದ ಶಿರ್ ಮೊಹಮ್ಮದ್ ಪಾರ್ಸಾ ಪೊಲೀಸರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.   ಅಲಿಖಿಲ್ ಮತ್ತು ಶಾ ದಾರಾ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಆಗಮಿಸಿ ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.  ಹತ್ತಿರದ ಪರ್ವತಗಳಿಂದ ಬಂದ ದಾಳಿಕೋರರನ್ನು ಪತ್ತೆ ಮಾಡಲು ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.