ಬಜೆಟ್ ಸಿದ್ಧತೆ; ಸಿ.ಎಂ ತಂಡದಲ್ಲಿ ನಾಲ್ವರು ಅಧಿಕಾರಿಗಳು

ಬೆಂಗಳೂರು, ಮಾರ್ಚ್.5, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡುವಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮಹತ್ತರವಾಗಿದೆ.ಬಜೆಟ್ ಸಿದ್ಧಪಡಿಸುವಲ್ಲಿ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳು ಕಳೆದ ಒಂದು ತಿಂಗಳಿಂದ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡಿದ್ದಾರೆ. ಇದು ಅಷ್ಟೇ ಗುರುತರ ಮತ್ತು ಹೊಣೆಗಾರಿಕೆಯ ಕೆಲಸವಾಗಿದೆ.ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಬಜೆಟ್ ಕಾರ್ಯದರ್ಶಿ ಏಕರೂಪ್ ಕೌರ್, ವೆಚ್ಚ ನಿರ್ವಹಣಾ ಕಾರ್ಯದರ್ಶಿ ಜಾಫರ್ ಮತ್ತು ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಚಂದ್ರಶೇಖರ್ ಅಧಿಕಾರಿಗಳ ತಂಡ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಬಜೆಟ್ ಸಿದ್ಧತೆಗಾಗಿ ಶ್ರಮಿಸಿದ್ದಾರೆ. ಅದರಲ್ಲೂ ಕಳೆದ ಒಂದು ವಾರದಿಂದ ಈ ನಾಲ್ವರು ಅಧಿಕಾರಿಗಳು ಯಾರ ಕೈಗೂ ಸಿಗದೇ ಮನೆಗೂ ಹೋಗದೇ ಹಗಲೂ ರಾತ್ರಿ ಕಚೇರಿಯಲ್ಲೇ ಬಿಡಾರ ಹೂಡಿ ಬಜೆಟ್ ತಯಾರಿ ಹಾಗೂ ಗೌಪ್ಯತೆ ಕಾಪಾಡುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೆರವಾಗಿದ್ದಾರೆ. ಬಜೆಟ್ ಮುದ್ರಣ ಮಾಡುವ ಸರ್ಕಾರಿ ಮುದ್ರಣಾಲಯದ ಸಿಬ್ಬಂದಿ ಕಳೆದ ಒಂದು ವಾರದಿಂದ ಯಾರ ಸಂಪರ್ಕಕ್ಕೂ ಸಿಗದೆ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಅಧಿಕೃತವಾಗಿ ಬಜೆಟ್ ಮಂಡನೆಯಾದ ನಂತರ ಈ ಎಲ್ಲಾ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ.ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿವಿಧ ಇಲಾಖೆಯ ಅಧಿಕಾರಿಗಳು, ರೈತ ಪ್ರತಿನಿಧಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು, ಸಂಘ ಸಂಸ್ಥೆ ಮತ್ತು ಪತ್ರಕರ್ತರ ತಂಡದೊಂದಿಗೆ 10ಕ್ಕೂ ಹೆಚ್ಚು ಸಭೆ ನಡೆಸಿದ್ದಾರೆ