ಕಲಬುರಗಿ, ಫೆ 22 : ಇತ್ತೀಚೆಗೆ ಇಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಪ್ರಚೋದನಾಕಾರಿ, ಹಿಂದೂ ಸಮುದಾಯದ ವಿರುದ್ಧ ಮಾಡಿದ ಟೀಕೆಗಾಗಿ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ನಾಯಕ ವಾರಿಸ್ ಪಠಾಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .ಪೊಲೀಸ್ ಮೂಲಗಳ ಪ್ರಕಾರ, ಈ ಕುರಿತು ಮಹಿಳಾ ವಕೀಲರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಐಎಂಐಎಂ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.ಘಟನೆಯನ್ನು ಗಂಬೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಘಟನೆಯ ಬಗ್ಗೆ ತನಿಖೆ ಮಾಡಿ ವಿವಿರ ವರದಿ ಸಲ್ಲಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.ಕಳೆದ 15 ರಂದು ನಗರದಲ್ಲಿ ನಡೆದ ಸಭೆಯಲ್ಲಿ ಎಐಎಂಐಎಂ ನಾಯಕ ತಮ್ಮ ಭಾಷಣದಲ್ಲಿ ದೇಶದ 15 ಕೋಟಿ ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ನಿಂತರೆ 100 ಕೋಟಿ ಹಿಂದೂ ಸಮುದಾಯವನ್ನು ಮಟ್ಟಹಾಕಬಹುದು ಎಂದೂ ವಿವಾದಾತ್ಮಕ ಹೇಳಿಕೆ ನೀಡಿ ದೊಡ್ಡ ಆಶಾಂತಿಗೆ ಕಾರಣವಾಗಿದ್ದರು.