ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಯುದ್ಧ ವಿಮಾನ ಪತ

ಇಸ್ಲಾಮಾಬಾದ್, ಮಾ.11): ಮುಂಬರುವ "ಪಾಕಿಸ್ತಾನ ಡೇ" ಕಾರ್ಯಕ್ರಮದ ಪೂರ್ವಾಭ್ಯಾಸದ ಸಂದರ್ಭದಲ್ಲಿ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಎಫ್-16 ಯುದ್ಧ ವಿಮಾನವೊಂದು ಬುಧವಾರ ರಾಜಧಾನಿ ಇಸ್ಲಾಮಾಬಾದ್ನ ಶಕಾರ್ಪರಿಯನ್ ಎಂಬಲ್ಲಿ ಅಪಘಾತಕ್ಕೀಡಾಗಿದೆ ಎಂದು ಪಿಎಎಫ್ ವಕ್ತಾರ ಸೈಯದ್ ಅಹ್ಮದ್  ರಝಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಅಪಘಾತ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಏರ್ ಹೆಡ್ ಕ್ವಾರ್ಟರ್ಸ್ ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಆದಾಗ್ಯೂ, ಹೇಳಿಕೆಯಲ್ಲಿ ವಿಮಾನದ ಪೈಲಟ್ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. "ನಾವು ನಷ್ಟವನ್ನು ಪರಿಶೀಲಿಸುತ್ತಿದ್ದೇವೆ" ಎಂದು ಪಿಎಎಫ್ ವಕ್ತಾರರು ತಿಳಿಸಿದ್ದಾರೆ.ಕಳೆದ ತಿಂಗಳು ಫೆಬ್ರವರಿ 12 ರಂದು ಖೈಬರ್ ಪಖ್ತುನ್ಕ್ವಾದ ಮರ್ದಾನ್ ಜಿಲ್ಲೆಯ ತಖ್ತ್ ಭಾಯ್ ಬಳಿ ದೈನಂದಿನ ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ಪಿಎಎಫ್ ತರಬೇತು ವಿಮಾನವೊಂದು ಅಪಘಾತಕ್ಕೀಡಾಯಿತು. ಎರಡು ತಿಂಗಳೊಳಗೆ ನಡೆದ ಮೂರನೇ ಪಿಎಎಫ್ ತರಬೇತಿ ವಿಮಾನ ಅಪಘಾತ ಇದಾಗಿದೆ