ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ತೆರಿಗೆ ಮಿತಿಯ ನಿರೀಕ್ಷೆ

ಬೆಂಗಳೂರು, ಜ.29, ಕೇಂದ್ರ ಸರ್ಕಾರವು 2020-21 ಸಾಲಿನ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದು ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದೆ. ಸರ್ಕಾರದ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ಗ್ರೋವ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗು ಸಿಒಒ ಹರ್ಷ್ ಜೈನ್ ತಿಳಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಕಡಿತ ಅಥವಾ ಆದಾಯ ಸ್ಲ್ಯಾಂಬ್ ಗಳಲ್ಲಿ ಬದಲಾವಣೆಯ ನಿರೀಕ್ಷೆ ಈ ಸಲದ ಬಜೆಟ್ ಮೇಲೆ ಇದೆ. ಇದರಿಂದ ಜನರ ಖರೀದಿಸುವ ಶಕ್ತಿ ಹೆಚ್ಚುತ್ತದೆ ಮತ್ತು ಬೆಡಿಕೆ ಹೆಚ್ಚುತ್ತದೆ. 

ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ಪರಿಚಯಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆ ಚಿಗುರೊಡೆಯುತ್ತದೆ. ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ ಅವಶ್ಯಕತೆ ಈ ಬಜೆಟ್ ನಲ್ಲಿ ಇದೆ. ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಸರ್ಕಾರವು ಈ ಬಜೆಟ್ ನಲ್ಲಿ ಸೂಕ್ತ ಯೋಜನೆಗಳನ್ನು ಘೋಷಿಸಿ ಆರ್ಥಿಕತೆಗೆ ಒತ್ತು ನೀಡಬೇಕಾಗಿದೆ. ಷೇರು ಮಾರುಕಟ್ಟೆಯಲ್ಲೂ ಸುಧಾರಣೆಯ ಅವಶ್ಯಕತೆ ಇದೆ ಎಂದು ಹರ್ಷ್ ಜೈನ್ ಹೇಳಿದರು.