ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್ ಬಳಸಿ ಮನೆಗಳ ನಿಮರ್ಾಣ ಮಾಡಿ: ವೆಂಕಟರಾಜಾ

ಕೊಪ್ಪಳ 23: ಪ್ಲಾಸ್ಟಿಕ್ ನಿಷೇಧಕ್ಕೆ ಟೆಕ್ನಾಲಜಿ ಅತ್ಯವಶ್ಯಕವಾಗಿದ್ದು, ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಮನೆಗಳ ನಿಮರ್ಾಣ ಮಾಡಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜಾ ಅವರು ಇಂಜಿನಿಯರ್ಸ್ಗಳಿಗೆ ಸಲಹೇ ನೀಡಿದರು.

                ಕೊಪ್ಪಳ ಜಿಲ್ಲಾ ಪಂಚಾಯತ, ಕನರ್ಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಟ್ (ಕೆ.ಆರ್..ಡಿ.ಎಲ್) ಕೊಪ್ಪಳ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಇವರ ಜಂಟಿ ಸಹಭಾಗಿತ್ವದಲ್ಲಿ ನಗರದ ಬಿ.ಎಸ್. ಪವಾರ್ ಗ್ರ್ಯಾಂಡ್ನಲ್ಲಿ ಮಂಗಳವಾರದಂದು ಆಯೋಜಿಸಲಾದ ಇಂಜಿನಿಯರಿಂಗ್ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು

                ಒಂದು ಪ್ಲಾಸ್ಟಿಕ್ ನಾಶವಾಗಲು ಸುಮಾರು 500 ವರ್ಷಗಳು ಬೇಕುಪ್ಲಾಸ್ಟಿಕ್ ಪರಿಸರದ ಮಹಾಶತ್ರುವಾಗಿದ್ದು, ಆರೋಗ್ಯಕ್ಕೂ ಮಾರಕವಾಗಿದೆಆದ್ದರಿಂದ ಪ್ಲಾಸ್ಟಿಕ್ ಬಳಕೆಯು ಸಂಪೂರ್ಣ ನಿಷೇಧವಾಗಬೇಕಾಗಿದೆಆದರೆ ಪ್ಲಾಸ್ಟಿಕ್ ಬಳಕೆ ಇನ್ನೂ ನಿಯಂತ್ರಣವಾಗುತ್ತಿಲ್ಲ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹೊಸ-ಹೊಸ ಪ್ರಯೋಗಳು ನಡೆಯುತ್ತಿದ್ದು, ಇಂಜಿನಿಯರ್ಸ್ಗಳು ಮನೆ ನಿಮರ್ಾಣ ಕಾಮಗಾರಿಗಳಲಿ ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್ಗಳನ್ನು ಹಾಗೂ ಅಸ್ಫಾಲ್ಟ್ ರಸ್ತೆ ನಿಮರ್ಾಣದಲ್ಲಿ ತ್ಯಾಜ್ಯ ಪ್ಲ್ಯಾಸ್ಟಿಕ್ ಸಾಮಗ್ರಿಗಳನ್ನು ಬಳಸಿಕೊಂಡರೆ ಇಂತರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಮೇಲೆ ನಿಯಂತ್ರಣ ಮಾಡಬಹುದಾಗಿದೆಹೀಗೆ ಯಾವುದೇ ಒಂದು ಹೊಸ ಪ್ರಯೋಗವನ್ನು ಮಾಡಿ ಜನರನ್ನು ಆಕಷರ್ಿಸಿದಾಗ ಮಾತ್ರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ವಿಲೇ ಮಾಡಬಹುದಾಗಿದೆನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ಲಾಸ್ಟಿಕ್ ವಿಲೇವಾರಿಗೆ ಕಷ್ಟವಾಗುತ್ತದೆಆದ್ದರಿಂದ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಕಸ ಬಟ್ಟಿಗಳಲ್ಲೇ ಹಾಕಬೇಕು ದೆಸೆಯಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಮೊದಲು ನಾವೇ ನಮ್ಮ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದ್ದು, ಪ್ಲಾಸ್ಟಿಕ್ ಅನ್ನು ಟೆಕ್ನಿಕಲ್ ಆಗಿ ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.

         ಕೆ.ಆರ್..ಡಿ.ಎಲ್. ಕಾರ್ಯಪಾಲಕ ಅಭಿಯಂತರರಾದ ಜೆ.ಎಮ್. ಕೊರಬು ಅವರು ಮಾತನಾಡಿ, ಕನರ್ಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಟ್ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದ ಸಂಸ್ಥೆಯಾಗಿದೆಅದಲ್ಲದೇ ಸಕಾರಕ್ಕೆ ಉಳಿತಾಯ ಮಾಡುವ ಸಂಸ್ಥೆಯಾಗಿದೆಸಂಸ್ಥೆಯಲ್ಲಿ ಮೊದಲು 10 ರಿಂದ 15 ಕೋಟಿ ವರೆಗೆ ವ್ಯವಹಾರಗಳು ಆಗುತ್ತಿದ್ದು, ಇದೀಗ ಅದು ಸುಮಾರು 60 ರಿಂದ 100 ಕೋಟಿ ದಾಟಿದೆಎಲ್ಲಾ ಖಚರ್ುಗಳನ್ನು ತೆಗೆದು 4 ರಿಂದ 20 ಕೋಟಿ ವರೆಗೆ ಉಳಿತಾಯ ವಾಗುತ್ತಿದೆಕೊಪ್ಪಳ ಸಂಸ್ಥೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ತುಂಬಾ ಸಹಕಾರ ದೊರೆತಿದೆಪರಿಸರದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕಾಗಿದ್ದು, ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾಯರ್ಾಗಾರವನ್ನು ಆಯೋಜಿಸಲಾಗಿದೆಕಾಯರ್ಾಗಾರದಲ್ಲಿ "ಅಸ್ಫಾಲ್ಟ್ ರಸ್ತೆ ನಿಮರ್ಾಣದಲ್ಲಿ ತ್ಯಾಜ್ಯ ಪ್ಲ್ಯಾಸ್ಟಿಕ್ ಸಾಮಗ್ರಿಗಳನ್ನು ಬಳಸಿ (ಹೊಂದಿಕೊಳ್ಳುವ ಪಾದಚಾರಿ), ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್ ಅನ್ನು ಬಳಸಿಕೊಂಡು ಕಡಿಮೆ ವೆಚ್ಚದ ಮನೆಗಳ ನಿಮರ್ಾಣ, ವೈಟ್ ಟಾಪ್ಪಿಂಗ್ & ಆರ್ಎಂ.ಡಿ ಟೆಕ್ನಾಲಜಿ ಮತ್ತು ಕಾಂಕ್ರೀಟ್ ಪ್ರಾಪಟರ್ೀಸ್ಗಳಿಗೆ ಪರಿಣಾಮ ಬೀರುವ ಸಿಮೆಂಟ್ ಗ್ರೇಡ್ ಎಂಬ ವಿಷಯಗಳ ಕುರಿತು ತಾಂತ್ರಿಕ ಉಪನ್ಯಾಸ ಏರ್ಪಡಿಸಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದು ಕಾಯರ್ಾಗಾರವನ್ನು ಯಶಸ್ವಿಗೊಳಿಸಬೇಕು ಎಂದರು.

                ಕಲಬುಗರ್ಿ ಕೆ.ಆರ್..ಡಿ.ಎಲ್. ಅಧೀಕ್ಷಕ ಅಭಿಯಂತರರಾದ ಎಂ. ನಟೇಶ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರುಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ರೀಜನಲ್ ಟೆಕ್ನಿಕಲ್ ಹೆಡ್ (ಉತ್ತರ ಕನರ್ಾಟಕ & ಗೋವಾ) ಅಶೋಕ ರೆಡ್ಡಿ, ಗದಗ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರವೀಣ ಜ್ಯೋತಿ, ಜಿ.ಪಂ. ಉಪ ಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.