ಕಡಲು : ದಾಂಡೇಲಿಯಲ್ಲಿ ವಿಪರೀತ ಗಾಳಿ ಮಳೆ ಹಠಾತ್ ಶಾಲೆಗಳಿಗೆ ರಜೆ ಘೋಷಣೆ

ಕಡಲು : ದಾಂಡೇಲಿಯಲ್ಲಿ ವಿಪರೀತ ಗಾಳಿ ಮಳೆ ಹಠಾತ್ ಶಾಲೆಗಳಿಗೆ ರಜೆ ಘೋಷಣೆ  Excessive wind and rain in Dandeli, sudden holiday declared for schools

ಕಾರವಾರ 24: ಮಂಗಳವಾರ ಕರಾವಳಿಯಲ್ಲಿ ಭಾರೀ ಗಾಳಿ ಬೀಸಿದ ಕಾರಣ ಅಲಿಗದ್ದಾ ಜನವಸತಿ ಪ್ರದೇಶದಲ್ಲಿ ಆತಂಕ ಉಂಟಾಗಿತ್ತು . ಬೆಳಗಿನ ಜಾವ ಕಾರವಾರ ಸನಿಹದ ಅಲಿಗದ್ದಾ ಕಡಲತೀರದಲ್ಲಿ ಕಡಲು ಉಕ್ಕೇರಿತು.

ಸಂಪ್ರದಾಯಿಕ ದೋಣಿ ಸನಿಹಕ್ಕೆ ಬಂದು ,ಜನವಸತಿ ಪ್ರದೇಶಕ್ಕೆ ಸಮುದ್ರದ ನೀರು ನುಗ್ಗುವ ಸನ್ನಿವೇಶ ಸೃಷ್ಟಿ ಯಾಗಿತ್ತು. ಒಂದು ತಾಸಿನ ನಂತರ ಸಮುದ್ರದ ಅಲೆಗಳ ಅಬ್ಬರ ಹೊಡೆತ ಕಡಿಮೆಯಾಯಿತು.ತಾಸಿಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸಿದ್ದೆ ಕಡಲು ಉಕ್ಕೇರಲು ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ .ಇನ್ನು ಘಟ್ಟ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿದ್ದು ದಾಂಡೇಲಿಯಲ್ಲಿ ವಿಪರೀತ ಗಾಳಿ ಮಳೆ ಸುರಿಯಿತು. ಬೆಳಿಗ್ಗೆ ಶುರುವಾದ ಮಳೆ ಹತ್ತು ಗಂಟೆಯಾದರೂ ನಿಲ್ಲಲಿಲ್ಲ.ಆಗ ತಹಶಿಲ್ದಾರರ ಪರಮಾನಂದ ಅವರು ಎಲ್ ಕೆಜಿ,ಯುಕೆಜಿ ಯಿಂದ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದರು. ಸಿದ್ದಾಪುರ ,ಶಿರಸಿಯಲ್ಲಿ ಸಾಧಾರಣ ಮಳೆ ಆಗಾಗ ಸುರಿಯಿತು. ಕರಾವಳಿ ಬಿಟ್ಟು ಬಿಟ್ಟು ಮಳೆ ಅಲ್ಲಲ್ಲಿ ಸರಿಯಿತು . ಕಾರವಾರ ,ಕುಮಟಾ, ಹೊನ್ನಾವರದಲ್ಲಿ ಸೋಮವಾರ ಗಾಳಿ ಸಹಿತ ಮಳೆ ಸುರಿಯಿತು. ಕರಾವಳಿ ಸೇರಿದಂತೆ ಜಿಲ್ಲೆಯ ಮಲೆನಾಡು, ಬಯಲು ಸೀಮೆ ಪ್ರದೇಶಕ್ಕೆ ಹರಡಿದ್ದು ಜೂ.26 ರತನಕ ಅರೆಂಜ್ ಅಲರ್ಟ ಘೋಷಿಸಲಾಗಿದೆ. ಮುಂಡಗೋಡ, ಹಳಿಯಾಳದಲ್ಲಿ ಕೆಲವು ಕಡೆ ಉತ್ತಮ ಮಳೆ ,ಕೆಲವು ಕಡೆ ಸಣ್ಣಮಳೆಯಾಗಿದೆ. ಕೃಷಿ ಚಟುವಟಿಕೆ ಚುರುಕಾಗಿ ಮುಂದುವರಿದಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ರಭಸದ ಗಾಳಿ ಕಾರಣ ಆಗಾಗ ವಿದ್ಯುತ್ ಪೂರೈಕೆ ಕೆಲವುಕಡೆ ವ್ಯತ್ಯಯ ಆಗಿತ್ತು. ಉಳಿದಂತೆ ಜನ ಜೀವನ ಯಥಾವತ್ತಾಗಿತ್ತು.

ಮಳೆ ವಿವರ : ಕಳೆದ 24 ತಾಸಿನಲ್ಲಿ ಮಂಗಳವಾರ ಬೆಳಗಿನ 8 ಗಂಟೆತನಕಅಂಕೋಲಾ74.2, ಭಟ್ಕಳ 23.7,ಹಳಿಯಾಳ 6 , ಹೊನ್ನಾವರ 36.8,ಕಾರವಾರ 59.4, ಕುಮಟಾ 36 , ಮುಂಡಗೋಡ 14.9, ಸಿದ್ದಾಪುರ96.4, ಶಿರಸಿ 71.9, ಸುಫಾ51.5, ಯಲ್ಲಾಪುರ 22.8, ದಾಂಡೇಲಿ 15.5 ಮಿಲಿಮೀಟರ್ ಮಳೆಯಾಗಿದೆ.