ಅತಿಯಾದ ಸಾಲಗಳಿಂದ ನೆಮ್ಮದಿಹಾಳು: ಬಿಇಓ ಸಾವಳಗಿ

ಅತಿಯಾದ ಸಾಲಗಳಿಂದ ನೆಮ್ಮದಿಹಾಳು: ಬಿಇಓ ಸಾವಳಗಿ Excessive debts are destroying peace of mind: BEO Savalagi

ತಾಳಿಕೋಟಿ 20: ಸದಸ್ಯರು ಸಂಘದೊಂದಿಗೆ ಉತ್ತಮ ವ್ಯವಹಾರ ಇಟ್ಟುಕೊಂಡು ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘ ಅಭಿವೃದ್ಧಿ ಹೊಂದಿ ಪ್ರಗತಿಯನ್ನು ಸಾಧಿಸಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್‌. ಸಾವಳಗಿ ಹೇಳಿದರು. ಶನಿವಾರ ತಾಳಿಕೋಟಿ ವಿಭಾಗದ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ 59 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಾಲವನ್ನು ಅಗತ್ಯಕ್ಕೆ ತಕ್ಕಂತೆ ತೆಗೆದುಕೊಳ್ಳಿ ಅತಿಯಾದ ಸಾಲ ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುತ್ತದೆ ಜೀವನದಲ್ಲಿ ಮಿತವೆಯ ನೀತಿಯನ್ನು ಪಾಲಿಸಿ ಎಂದು ಕಿವಿಮಾತು ಹೇಳಿದರು.  

ಪೀರಾಪೂರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರಿ​‍್ಬ.ದಮ್ಮೂರಮಠ ಮಾತನಾಡಿ ಈ ಸಂಘದ ಸಂಸ್ಥಾಪಕರು ಕಷ್ಟಪಟ್ಟು ಸಂಘವನ್ನು ಕಟ್ಟಿ ಬೆಳೆಸಿದ್ದಾರೆ ಇದನ್ನು ರಕ್ಷಿಸಿಕೊಂಡು ಹೋಗಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗದ ಸೌಲಭ್ಯಗಳು ನಮಗಿಲ್ಲಿ ಸಿಗುತ್ತವೆ ಇದು ಕೇವಲ ಶಿಕ್ಷಕರ ಅನುಕೂಲಕ್ಕಾಗಿ ಇರುವ ಸಂಘ ಇದರ ಕುರಿತು ಎಲ್ಲರಿಗೂ ಕಾಳಜಿ ಇರಬೇಕಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಸುರೇಶ ವಾಲಿಕಾರ ಅವರು ಮಾತನಾಡಿ ಸಂಘದ ಪ್ರಗತಿಗೆ ಎಲ್ಲರ ಸಹಕಾರದ ಅಗತ್ಯವಿದೆ ಇದೊಂದು ಮಾದರಿ ಸಂಘವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.  

 ಇದೇ ಸಂದರ್ಭದಲ್ಲಿ ಹಾಲಿ ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕಿಯರಿಗೆ, ಈ ಬಾರಿಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಪದನ್ನೋತಿಗೊಂಡ ಆರಿ​‍್ಬ.ದಮ್ಮೂರಮಠ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಮಡಿವಾಳಮ್ಮ ನಾಡಗೌಡ ಇವರಿಗೆ ವಿಶೇಷ ಸನ್ಮಾನ ನೀಡಲಾಯಿತು. ಶ್ರೀಮತಿ ಲಕ್ಷ್ಮೀಬಾಯಿ ಹಾಗೂ ಶಿವಲಿಂಗಮ್ಮ ಇವರ ಸ್ಮರಣಾರ್ಥವಾಗಿ ಭಾಗ್ಯಶ್ರೀ ವಿ ಹೊಸಕೋಟೆಯವರು ಕಾಣಿಕೆಯಾಗಿ ನೀಡಿದ ಬ್ಯಾಗ್ ಗಳನ್ನು ಸದಸ್ಯರಿಗೆ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಸ.ಪ್ರಾ.ಶಾ.ಶಿ.ಸಂ.ತಾ.ಅಧ್ಯಕ್ಷ ಬಿ.ಟಿ. ವಜ್ಜಲ,ಉಪಾಧ್ಯಕ್ಷ ಪಿ.ವೈ.ಚಲವಾದಿ, ಶಂಕರಗೌಡ ಬಿರಾದಾರ, ನಿರ್ದೇಶಕರಾದ ಯು.ಜಿ.ಮಕಾನದಾರ, ಶಿವಪ್ಪ ಬೈಚಬಾಳ, ಕಾಶಿಮ್ ಜಮಾದಾರ, ಜಿ.ಕೆ.ಪತ್ತಾರ, ಆರ್‌.ಕೆ.ಹಂಚಾಟೆ, ಡಿ.ಸಿ.ಕಲಾಲ,ಎಸ್‌.ಎಂ. ಬಂಟನೂರ, ಎಸ್‌.ಎಸ್‌.ಬಿಂಜಲಭಾವಿ, ಬಸವರಾಜ ಹುಲ್ಲೂರ,ಜಿ.ಟಿ.ಬಿರಾದಾರ, ಝಡ್‌.ಎಂ. ಅರ್ಜುಣಗಿ, ಕಾರ್ಯದರ್ಶಿ ಎಸ್‌.ಎಸ್‌. ಬೊಮ್ಮನಹಳ್ಳಿ ಹಾಗೂ ಸಂಘದ ಸದಸ್ಯರು ಇದ್ದರು. ಶಿಕ್ಷಕ ಆರ್‌.ಎಲ್‌. ಕುಲಕರ್ಣಿ ಪ್ರಾರ್ಥಿಸಿದರು. ಜಿ.ಕೆ. ಪತ್ತಾರ ಸ್ವಾಗತಿಸಿದರು. ಶಿಕ್ಷಕ ಆರ್‌.ಎಫ್‌. ಹಿರೇಮಠ ನಿರೂಪಿಸಿದರು.