ಪಿಯು ಪರೀಕ್ಷೆಯಲ್ಲಿ ಎಸ್‌.ಡಿ.ವ್ಹಿ.ಎಸ್‌. ಸಂಘದ ವಿದ್ಯಾರ್ಥಿಗಳ ಉತ್ತಮ ಸಾಧನೆ : ಎ ಬಿ

ಪಿಯು ಪರೀಕ್ಷೆಯಲ್ಲಿ ಎಸ್‌.ಡಿ.ವ್ಹಿ.ಎಸ್‌. ಸಂಘದ ವಿದ್ಯಾರ್ಥಿಗಳ ಉತ್ತಮ ಸಾಧನೆ : ಎ ಬಿ Excellent performance of SDVHS students in PU exams: A B

ಸಂಕೇಶ್ವರ 11: ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸ್ಥಳೀಯ ಎಸ್‌.ಡಿ.ವ್ಹಿ.ಎಸ್‌. ಸಂಘದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿ ಕಾಲೇಜಿಗೆ ಮತ್ತು ಹ;ಎತ್ತ ತಂದೆ ತಾಯಿಗಳಿಗೆ ಹೆಸರು ತಂದಿದ್ದಾರೆ.  ಪರೀಕ್ಷೆಯಲ್ಲಿ ಶೇಕಡ 100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ನಿನ್ನೆ ಎಸ್‌ಡಿವ್ಹಿಎಸ್ ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾ ಪರಿಷತ್ತಿನಲ್ಲಿ ಸಂಘದ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಹೇಳಿದರು.  ಮಹಾವಿದ್ಯಾಲಯದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಸಂಸ್ಥೆಗೆ ಹೆಸರು ತಂದಿದ್ದಾರೆ.  ಶೇ. 100 ಫಲಿತಾಂಶ ಬಂದಿರುವುದು ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ ಮತ್ತು ಪ್ರಥಮ ಶ್ರೇಣಯಲ್ಲಿ ಉತ್ತೀರ್ಣರಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.   

ದಿವಂಗತ ಅಪ್ಪಣ್ಣಗೌಡ ಪಾಟೀಲರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಲ್ಲ ರೀತಿಯ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ಲಭ್ಯವಾಗಬೇಕು ಎಂಬ ಶ್ರೇಷ್ಠ ಧ್ಯೇಯದಿಂದ ಎಸ್‌.ಡಿ.ವ್ಹಿ.ಎಸ್‌. ಸಂಘವನ್ನು ಹುಟ್ಟು ಹಾಕಿ ಪೂರ್ವ ಪ್ರಾಥಮಿಕದಿಂದ ಉನ್ನತ ಪದವಿ ಕಾಲೇಜುಗಳನ್ನು ಪ್ರಾರಂಭ ಮಾಡಿದ್ದರು. ಅಪ್ಪಣ್ಣಗೌಡಾ ಪಾಟೀಲ ಇವರ ನಂತರ ದಿ. ಬಸಗೌಡಾ ಪಾಟೀಲ ಇವರು ಕೂಡ ಸಂಘದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಗಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.  ಗ್ರಾಮೀಣ ಪ್ರದೇಶದ  ಬಡ ವಿದ್ಯಾರ್ಥಿಗಳು ಗಡಿ ಭಾಗದ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೋಧಕರು ಮತ್ತು ಸಂಸ್ಥೆಯ ಎಲ್ಲ ಸಿಬ್ಬಂದಿಯವರು ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡಿ ರಾಜ್ಯ ಮಟ್ಟದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಹೆಸರು ಗಳಿಸುವಂತೆ ಮಾಡಲಾಗುವುದು ಎಂದು ಎ.ಬಿ.ಪಾಟೀಲ ಅವರು ತಿಳಿಸಿದರು. 

ವಿಜ್ಞಾನ ಪ್ರ್ಯಾಕ್ಟಿಕಲ್ ಲ್ಯಾಬ್ 4 ತಿಂಗಳಲ್ಲಿ ಮುಗಿಸಲಾಗುವುದು. ವಿಶೇಷ ತರಗತಿಗಳನ್ನು ನಡೆಸುವುದು. ಅಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗಾಗಿ ಮುಂಜಾನೆ ಹಾಗೂ ಸಂಜೆ ಹೆಚ್ಚಿನ ಬೋಧನಾ ತರಗತಿಗಳನ್ನು ನಡೆಸಿ ಮುಂಬರುವ ವರ್ಷಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರಾ​‍್ಯಂಕ್‌ಗಳನ್ನು ಗಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸರ್ವಮಂಗಳಾ ಯರಗಟ್ಟಿ ಇವರು ತಿಳಿಸಿದರು.  

ವಿಜ್ಞಾನ ವಿಭಾಗದಲ್ಲಿ ಒಟ್ಟು 295 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಪರೀಕ್ಷೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  184 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 111 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಲಲಿತಾ ಎಸ್‌.ಓಂಕಾರ, ಶೃಷ್ಠಿ ಎಂ.ಗೋವಿನಕೊಪ್ಪ, ಶ್ವೇತಾ ಎಸ್‌.ಕಳಸನ್ನವರ ಇವರು 587 ಅಂಕಗಳನ್ನು ಗಳಿಸಿ (ಶೇಕಡ 97.83) ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸೃಷ್ಠಿ ಯು. ಚೌಗುಲೆ ಇವಳು 585 (97.5ಅ) ದ್ವೀತಿಯ ಸ್ಥಾನವನ್ನು ಹಾಗೂ ಸಾನಿಯಾ ಎಸ್‌.ಮಕಾನದಾರ ಇವಳು 584 (97.33ಅ) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಗಳಿಸಿ ಇಡೀ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. 

ಕಲಾ ವಿಭಾಗದಲ್ಲಿ ಒಟ್ಟು 139 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಪರೀಕ್ಷೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  38 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 101 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಾವೇರಿ ಪಾಟೀಲ ಇವಳು 578 ಅಂಕಗಳನ್ನು ಗಳಿಸಿ (ಶೇ. 96.33) ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಜ್ಯೋತಿ ಮದಿಹಳ್ಳಿ ಇವಳು 574 (ಶೇ. 95.66) ದ್ವೀತಿಯ ಸ್ಥಾನವನ್ನು ಹಾಗೂ ಆಶಾ ಹಾಲಟ್ಟಿ ಇವಳು 571 (95.16ಅ) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಒಟ್ಟು 135 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಪರೀಕ್ಷೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  53 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 82 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿದ್ಯಾನಂದ ಎಂ ಸೂಜಿ ಈತನು 588 ಅಂಕಗಳನ್ನು ಗಳಿಸಿ (ಶೇ.98) ಪ್ರಥಮ ಸ್ಥಾನವನ್ನು ಅನುಷ್ಕಾ ಆರ್‌.ಪಾಟೀಲ ಇವಳು 587 (ಶೇ.97.83) ದ್ವೀತಿಯ ಸ್ಥಾನವನ್ನು ಹಾಗೂ ಸಾನಿಕಾ ಬಿ.ಶಿಂದೆ ಇವಳು 586 (ಶೇ.97.66) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. 

ಅದರಂತೆಯೇ ಸಂಘದ ಎಸ್‌.ಎಲ್‌.ಬಿ.ಎಸ್‌.ಸಂಯುಕ್ತ ಪದವಿ ಪೂರ್ವ ಕಾಲೇಜು ಯಾದಗೂಡ ಮಹಾವಿದ್ಯಾಲಯವು ಉತ್ತಮ ಫಲಿತಾಂಶ ದಾಖಲಿಸಿದೆ.  ಕಲಾ ಮಹಾವಿದ್ಯಾಲಯ ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ರಜನಿ ಅಲ್ಲಪ್ಪಾ ಕಡಲಗಿ ಇವಳು 570 ಅಂಕಗಳನ್ನು ಗಳಿಸಿ (ಶೇಕಡ 95) ಪ್ರಥಮ ಸ್ಥಾನವನ್ನು ಸಹನಾ ಸಂಜೀವ ಮಗೆನ್ನಿ ಇವಳು 561 (ಶೇ.93.5) ದ್ವೀತಿಯ ಸ್ಥಾನವನ್ನು ಹಾಗೂ ಶ್ವೇತಾ ಮಲ್ಲಪ್ಪಾ ಚೌಗುಲಾ ಇವಳು 557 (ಶೇ.92.83) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. 

ಪತ್ರಿಕಾ ಪರಿಷತ್ತಿನಲ್ಲಿ ಸಂಘದ ಹಿರಿಯ ನಿರ್ದೇಶಕ ಆರ್‌.ಬಿ.ಪಾಟೀಲ, ಸಂತೋಷ ಪಾಟೀಲ, ಇನ್ನೋರ್ವ ನಿರ್ದೇಶಕರಾದ ಸುಭಾಷ ಕಾಸಾರಕರ ಸಂಘದ ಕಾರ್ಯದರ್ಶಿ ಗಂಗಾಧರ ಕೊಟಗಿ, ಸಂಘದ ಆಡಳಿತಾಧಿಕಾರಿ ಡಾ. ಬಿ.ಎಸ್‌.ಪೂಜಾರಿ, ಮಹಾವಿದ್ಯಾಲಯದ ಪ್ರಾಚಾರ್ಯರು, ವಿದ್ಯಾಸ್ವಾಮಿ, ತೇರಣಿಮಠ ಇವರೆಲ್ಲರೂ ಹಾಜರಿದ್ದರು.