ನೀಟ್‌ನಲ್ಲಿ ಐತಿಹಾಸಿಕ ಫಲಿತಾಂಶ ನೀಡಿದ ಎಕ್ಸಲಂಟ್

ನೀಟ್‌ನಲ್ಲಿ ಐತಿಹಾಸಿಕ ಫಲಿತಾಂಶ ನೀಡಿದ ಎಕ್ಸಲಂಟ್ Excellent delivers historic NEET results

ಲೋಕದರ್ಶನ ವರದಿ 

ವಿಜಯಪುರ 17: ಹಲವು ಅಡ್ಡಿ ಆತಂಕಗಳ ಕರಗಿ ಬಹು ನೀರೀಕ್ಷಿತ 2026ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಐತಿಹಾಸಿಕ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. 720 ಅಂಕಗಳಿಗೆ ಚನ್ನವಿರೇಶ ಕುಂಬಾರ 651 ಅಂಕಗಳಿಸಿದರೆ ಸಲ್ಮಾನ ಗೋಡಿಹಾಳ 613, ಗಂಗಾಧರ ಮುತ್ತಗಿ 613, ಮಹೇಶ ಉಳ್ಳಾಗಡ್ಡಿ 612, ರುಮೇಜ್ ಶೇಖ್ 600 ಅಂಕಗಳನ್ನು ಗಳಿಸಿರುತ್ತಾರೆ. 

ಅದರಂತೆ ಬಸನಗೌಡ ಎ ಬೈರವಾಡಗಿ (582), ಪವಿತ್ರಾ ಹೆಚ್ ಹನಗಂಡಿ (580), ಅನುಷ್ಕಾ ಎ ಮಹಿಶಾಳೆ(579), ಸ್ನೇಹಾ ಎಂ ಪಟ್ಟಣಶೆಟ್ಟಿ(577), ಪ್ರಜ್ವಲ್ ಅವಟಿ(576), ದೃಶ್ಯಾ ವಿರೇಶ ಶೆಟ್ಟಿ(574), ಪ್ರತೀಕ್ ಪಿ. ಚವ್ಹಾಣ (571), ಭೂಮಿಕಾ ಎಸ್ ಹಳ್ಳಿ (571), ಸಾಗರ ಮಲ್ಲಪ್ಪ ಬನಹಟ್ಟಿ (571), ಆಕಾಶ ಎಸ್ ಸತ್ತಿಗೇರಿ (570), ವಿನಾಯಕ ಎಸ್ ಪಾಯಣ್ಣವರ(568), ಸೃಷ್ಠಿ ಎಸ್‌. ಜತ್ತಿ(564), ಮಲ್ಲಿಕಾರ್ಜುನ ಕೆ ಹೂಗಾರ(562), ಪೂರ್ವಿ ಜಿ ಮಂಟೂರ(561), ಧೈರ್ಯಶೀಲ ಬಾಳಾಸಾಹೇಬ ಹವಾಲ್ದಾರ(558) ಸೇರಿದಂತೆ 63 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 500 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಎಕ್ಸಲಂಟ್ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 

ಫಲಿತಾಂಶದ ಕುರಿತು ಮಾತನಾಡಿ ಹರ್ಷವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ; ಮೊದಲ ಬಾರಿಗೆ ಬರೆದ ಪರೀಕ್ಷೆಯು ರದ್ದಾದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಇಷ್ಟು ಚನ್ನಾಗಿ ಬರೆದ ಪರೀಕ್ಷೆ ರದ್ದಾಯಿತು ಮುಂದೇನಾಗುತ್ತದೆಯೋ ಎಂದುಕೊಂಡಿದ್ದರು. ಅನಿವಾರ್ಯತೆಯನ್ನು ಅರಿತುಕೊಂಡು ಹಗಲು ರಾತ್ರಿ ಓದಿದ ವಿದ್ಯಾರ್ಥಿಗಳು ಕೊನೆಗೂ ತಾವಂದುಕೊಂಡ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಗೊಂದಲಗಳ ಮಧ್ಯದಲ್ಲಿಯೇ ನಮ್ಮ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳಲ್ಲಿ 05 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಹಾಗೂ 63 ಕ್ಕೂ ಅಧಿಕ ವಿದ್ಯಾರ್ಥಿಗಳು 500 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಅವರ ಫಲಿತಾಶಂದ ಅನ್ವಯ ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗುವುದರೊಂದಿಗೆ ಅವರ ಭವಿಷ್ಯವೂ ಉಜ್ವಲವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದೇ ರೀತಿ ಈ ಫಲಿತಾಂಶವು ಪ್ರಸ್ತುತ ನೀಟ್ ಪರೀಕ್ಷೆ ಬೆರೆಯಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಪ್ರೇರಣೆಯಾಗಲಿ ಎಂದು ಆಶಿಸುವುದರೊಂದಿಗೆ ಅತ್ಯುತ್ತಮ ಫಲಿತಾಂಶದ ಮೂಲಕ ಸಂಸ್ಥೆಗೆ, ಜಿಲ್ಲೆಗೆ, ನಾಡಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಶುಭಾಷಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಮಕ್ಕಳ ಈ ಸಾಧನೆಗೆ ಶ್ರಮಿಸಿದ ಬೋಧಕ ಸಿಬ್ಬಂದಿಗಳಿಗೂ ಅಭಿನಂದನೆಗಳನ್ನು ಹೇಳಿದರು.