ವಿದ್ಯೆಯಿಂದ ಎಲ್ಲವನ್ನೂ ಗಳಿಸಲು ಸಾಧ್ಯ: ನಾರಾಯಣ ಶಾಸ್ತ್ರಿ
Everything can be achieved through education: Narayana Shastri
ಜಮಖಂಡಿ 09: ವಿದ್ಯೆಯು ಮಾನವನ ಆಭರಣವಾಗಿದ್ದು ವಿದ್ಯೆಯಿಂದ ಎಲ್ಲವನ್ನೂ ಗಳಿಸಲು ಸಾಧ್ಯ ಎಂದು ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಪನ್ನಗೊಂಡ ಮಹಾಸರಸ್ವತಿ ಪೂಜೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಧಿದೇವತೆ ಸರಸ್ವತಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ, ವಿದ್ವಾನ ಸರ್ವತ್ರ ಪೂಜ್ಯತೇ ಎನ್ನುವಂತೆ ವಿದ್ಯಾವಂತನನ್ನು ಇಡೀ ಜಗತ್ತೇ ಗೌರವಿಸುತ್ತದೆ. ವಿದ್ಯಾರ್ಥಿಗಳಾದ ನೀವೆಲ್ಲರೂ ಏಕಾಗ್ರತೆಯಿಂದ ಓದಿ ಗುರಿಯನ್ನು ಮುಟ್ಟಿರಿ, ಸಮಾಜದ ಋಣ ತೀರಿಸಿ. ನಾಗರ ಪಂಚಮಿ ಹಬ್ಬವು ನಾಡಹಬ್ಬವಾಗಿದ್ದು ತಮಗೆಲ್ಲ ಸುಖಶಾಂತಿ ನೀಡಲಿ ಎಂದರು.
ಶಿಕ್ಷಕ ಸಂಗಮೇಶ ಉಟಗಿ ಮಾತನಾಡಿ ಲಕ್ಷ್ಮಿ ಇರುವಲ್ಲಿ ಸರಸ್ವತಿ ಇರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ, ಸರಸ್ವತಿ ಇರುವಲ್ಲಿ ಲಕ್ಷ್ಮಿ ಇದ್ದೇ ಇರುತ್ತಾಳೆ, ಮೊದಲು ನೀವು ವಿದ್ಯೆಯನ್ನು ಗಳಿಸಿರಿ ಅದನ್ನು ಅನುಸರಿಸಿ ಸಂಪತ್ತು ಕೀರ್ತಿ ಬಂದೇ ಬರುತ್ತದೆ. ನಾಗರಪಂಚಮಿಯ ಸಂದರ್ಭದಲ್ಲಿ ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಬಡಮಕ್ಕಳಿಗೆ, ನಿರ್ಗತಿಕರಿಗೆ ಕುಡಿಯಲು ಕೊಡಿ ,ಸಂಸ್ಕೃತಿಯ ಜೊತೆ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಿ ಶ್ರಾವಣ ಶುದ್ಧ ಪಂಚಮಿ ಎಂದು ಜನಿಸಿದ ವಿಶ್ವಗುರು ಬಸವಣ್ಣ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದರು.
ವಿದ್ಯಾರ್ಥಿನಿಯರಾದ ಸುಜಾತಾ ಮಟ್ಟಿ, ಅಂಬಿಕಾ ಹಾಡನ್ನು ಹಾಡಿದರು. ಶಿಕ್ಷಕರಾದ ಸಂಜೀವ ಝಂಬುರೆ, ಸವಿತಾ ಬೆನಕಟ್ಟಿ, ಶಕುಂತಲಾ ಬಿರಾದಾರ, ಬಿಎಡ್ ಪ್ರಶಿಕ್ಷಣಾರ್ಥಿ ಗಂಗಾ ಎಂಟೆತ್ತ, ರೂಪ ಗೌರನವರ ಇದ್ದರು. ಶಾರದಾ ಮಠ ನಿರೂಪಿಸಿದರು. ಬಾಹುಬಲಿ ಮುತ್ತೂರ ಸ್ವಾಗತಿಸಿದರು, ಶಿಕ್ಷಕಿ ಆಸೀಫಾಭಾನು ಮೋಮಿನ ವಂದಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 