ಪ್ರತಿಯೊಬ್ಬರು ದೇಶಕ್ಕಾಗಿ ಸೇವೆ ಸಲ್ಲಿಸಬೇಕು: ಬಡೆಪ್ಪನವರ
Everyone should serve the country: Badeppa
ಲೋಕದರ್ಶನ ವರದಿ
ಉಗರಗೋಳ 30: ನಮ್ಮ ಭವ್ಯ ಭಾರತದಲ್ಲಿನ ಪ್ರತಿಯೊಬ್ಬ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಮಾತ್ರ, ಸದೃಢ ರಾಷ್ಟ್ರ ನಿರ್ಮಿಸಬಹುದು ಎಂದು ಉಗರಗೋಳದ ಭೂ ನ್ಯಾಯಮಂಡಳಿ ಸದಸ್ಯ ನಾಗರಾಜ ಬಡೆಪ್ಪನವರ ಹೇಳಿದರು. ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಗುರುವಾರ ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ ಅವರ 139ನೇ ಜಯಂತಿ ಅಂಗವಾಗಿ, ಡಾ, ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು. ವಯಕ್ತಿಕ ಹಿತಾಶಕ್ತಿಗಿಂತ ದೇಶದ ಹಿತಾಶಕ್ತಿ ಮುಖ್ಯ. ಪ್ರತಿಯೊಬ್ಬರು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದರು.
ಮಹಾಂತೇಶ ಮಲ್ಲಾಡ ಮಾತನಾಡಿ ದೇಶವೇ ನಮ್ಮನ್ನು ನೋಡುವಂತಾಗ ಬೇಕಾದರೆ ನಮ್ಮಯ ಮಕ್ಕಳನ್ನು ವಿಧ್ಯಾವಂತರನ್ನಾಗಿ ಮಾಡಬೇಕು, ಡಾ,ಅಂಬೇಡ್ಕರ ಹಾಕಿ ಕೋಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು. ಮಂಗಳೂರಿನ ಕಲಾ ಸಂಘದ ಕರಡಿ ಮಜಲಿನ ನೋಟ ಕೆಳುಗರ ಮನ ಸೋರಗೊಂಡಿತು. ರವಿ ಬುಳ್ಳನವರ, ಉಮೇಶ ಬುಳ್ಳನ್ನವರ, ರಾಮು ಹಿರೇಕುಂಬಿ, ಮಹೇಶ ಕೆಳಗಡೆ, ಮಂಜು ಬುಳ್ಳನ್ನವರ, ಪ್ರಲ್ಹಾದ ಕೆಳಗಡೆ, ಶೇಟ್ಟೆಪ್ಪ ಮಲ್ಲಾಡ, ರಮೇಶ ಬುಳ್ಳನ್ನವರ, ಯಲ್ಲಪ್ಪ ಹಿರೇಕುಂಬಿ, ಶಿದ್ದಾರೂಢ ಬುಳ್ಳನ್ನವರ, ಫಕ್ಕೀರ್ಪ ಬುಳ್ಳನ್ನವರ, ಚಂದ್ರಶೇಖರ ಹಿರೇಕೆಂಚನ್ನವರ, ಬಸು ಮೂತ್ತೂರ, ವಾಸು ಗಾಂಜಿ, ಜೋಗಿ ಕೆಳಗಡೆ, ರುದ್ರ್ಪ ಬುಳ್ಳನವರ, ಸುಭಾಸ ಬೆಟಗೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 