ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು: ಸುಣಧೋಳಿ ಶ್ರೀಗಳು

ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು: ಸುಣಧೋಳಿ ಶ್ರೀಗಳು Everyone should remember those who sacrificed their lives for the country: Sunadholi Shri

ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು: ಸುಣಧೋಳಿ ಶ್ರೀಗಳು 

ಬೆಟಗೇರಿ 03 : ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗಮಾಡಿದ ಮಹಾನ ಪುರುಷರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು. ಭಕ್ತ ಕನಕದಾಸ ಮತ್ತು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನವರ ಬದುಕಿನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.  ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಭಕ್ತ ಕನಕದಾಸ ಮತ್ತು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಫೆ.1 ರಂದು ನಡೆದ ನೂತನ ಭಕ್ತ ಕನಕದಾಸ ಮತ್ತು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು,   

  ಕಡಕೋಳದ ಅಭಿನವ ಸಿದ್ದರಾಯಜ್ಜನವರು ದಿವ್ಯ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಸ್ಥಳೀಯ ಅಡವಿಸಿದ್ಧೇಶ್ವರ ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ  ಸುಮಂಗಲೆಯರಿಂದ ಆರತಿ, ಕುಂಭ ಉತ್ಸವ ಸಕಲ ವಾಧ್ಯಮೇಳಗಳೊಂದಿಗೆ ನೂತನ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಿತು. ಇಲ್ಲಿಯ ಯುವಕರು ಕಾಲ್ನಡಿಗೆ ಮೂಲಕ ನಂದಗಡದಿಂದ ವೀರಜ್ಯೋತಿ ತರಲಾಯಿತು. ಶ್ರೀಗಳು, ಗಣ್ಯರನ್ನು ಸ್ಥಳೀಯ ಭಕ್ತ ಕನಕದಾಸ ಮತ್ತು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸತ್ಕರಿಸಿದರು.   ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಹನುಮಂತ ವಡೇರ, ಲಕ್ಕಪ್ಪ ಚಂದರಗಿ, ಮಾರುತಿ ಚಂದರಗಿ, ಅಶೋಕ ಕೋಣಿ, ಸದಾಶಿವ ಕುರಿ, ಲಕ್ಷ್ಮಣ ಸೋಮಗೌಡ್ರ, ಸುಭಾಷ ಕರೆನ್ನವರ, ಸತ್ತೆಪ್ಪ ಹೊರಟ್ಟಿ, ಮಾಯಪ್ಪ ಬಾಣಸಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಸುರೇಶ ವಡೇರ, ಮುತ್ತೆಪ್ಪ ವಡೇರ, ಸುರೇಶ ಬಾಣಸಿ, ಮುತ್ತೆಪ್ಪ ಕುರುಬರ, ಬೀರ​‍್ಪ ಕುರಬೇಟ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತ ಕನಕದಾಸ ಮತ್ತು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಪದಾಧಿಕಾರಿಗಳು, ಮತ್ತೀತರರು ಇದ್ದರು.