ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ: ಭಾಗ್ಯಶ್ರೀ ಪಾಟೀಲ್

ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ: ಭಾಗ್ಯಶ್ರೀ ಪಾಟೀಲ್ Everyone should plant trees: Bhagyashree Patil

ಬೆಳಗಾವಿ 05 : ನಗರದ  ಕಿಲ್ಲಾ ಕೋಟಿ ಆವರಣದಲ್ಲಿರುವ ಆರಾಧನಾ  ಬುದ್ಧಿಮಾಂದ್ಯ  ಕನ್ನಡ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. 

ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೈ  ಶ್ರೀನಿವಾಸ, ರಾಜ್ಯ ಕಾರ್ಯಧ್ಯಕ್ಷರಾದ ರಾಮಚಂದ್ರಯ್ಯ,  ಐಕೇರ್ ಬ್ರಿಗೇಡ್ ಫೌಂಡೇಶನ್ ಸಹಭಾಗಿತ್ವದಲ್ಲಿ ರಾಜ್ಯದ್ಯಂತ ಮನೆಗೆ ಒಂದು ಮರ ಊರಿಗೊಂದು ಕೆರೆ ಎಂಬ ವಿಷಯದ ಮೇಲೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

ಜಯ ಕರ್ನಾಟಕ ಜನಪರ ವೇದಿಕೆಯ  ಜಿಲ್ಲಾ ಮಹಿಳಾ ಅಧ್ಯಕ್ಷರಾದ ಭಾಗ್ಯಶ್ರೀ ಪಾಟೀಲ್ ಅವರು ಮಾತನಾಡಿ,  ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪ್ರಕೃತಿ ಉಳಿಸಬೇಕು ಎಂದು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ತಿಳಿಸಿದ್ದಾರೆ. ಅವರ ಮಾರ್ಗದಲ್ಲಿ ನಾವು ನಿತ್ಯವೂ ಮರ ಬೆಳೆಸುವ ಕಾರ್ಯಮಾಡಬೇಕಿದೆ.   

ಈ ಸ್ವಚ್ಛ ,  ಶುದ್ಧ ವಾತಾವರಣ ಇರಬೇಕಾದರೆ ಗಿಡ ಮರವನ್ನು ಬೆಳೆಸಬೇಕು. ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗೆ ಗೌರವಿಸಿ, ಬೆಳೆಸೋಣ ಎಂದರು.ಪರಿಸರವಾದಿಗಳು, ಕನ್ನಡಪರ ಹೋರಾಟಗಾರರು ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣಜನ್ ಶೆಟ್ಟಿ ಅವರ ನೇತೃತ್ವದಲ್ಲಿ  ಅರಣ್ಯ ವನ್ಯಜೀವಿಗಳ ಸಂರಕ್ಷಣೆ  ಉದ್ದೇಶದಿಂದ  ಪರಿಸರ ಉಳಿವಿಗಾಗಿ ಜಾಗೃತ ಕಾರ್ಯಗಳನ್ನು ನಡೆಸಲಾಗುತ್ತಿದೆ.

ಈ ಮಹತ್ತರ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶಿವರಡ್ಡಿ ಲಕ್ಷ್ಮಣ ರೆಡ್ಡಿ, ಉಪಾಧ್ಯಕ್ಷರಾದ ಸಿದ್ಲಿಂಗ್ ಸುನಕುಪ್ಪಿ,  ಗಜಾನನ್ ಫೇಸ್ ವೀ, ಮತ್ತು ಶಾಲೆಯ ಮುಖ್ಯೋಪಾಧ್ಯರು ಹಾಗೂ  ಮಕ್ಕಳು ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರು ಭಾಗ್ಯಶ್ರೀ ಪಾಟೀಲ್, ಮಹಾದೇವಿ ಹೊಡೆ , ರುದ್ರಮ್ಮ ಪಾಟೀಲ್   ಹಾಗೂ ಇತರರು ಇದ್ದರು.