ಪ್ರತಿಯೊಬ್ಬರು ಪರಿಸರ ಸುಸ್ಥಿರತೆಗೆ ಒತ್ತು ನೀಡಬೇಕು : ಕಾಶಿ ಶ್ರೀಗಳು
Everyone should emphasize environmental sustainability: Kashi Shri
ಗದಗ 14 : ಸಾಮಾಜಿಕ ಜವಾಬ್ದಾರಿಯನ್ನು ಅರಿವು ಮೂಡಿಸುವುದರ ಮೂಲಕ ಸಮುದಾಯ ಆರೋಗ್ಯ ಮತ್ತು ಪರಿಸರ ಸುಸ್ಥಿರತೆಗೆ ಒತ್ತು ನೀಡಲು ಈ ಕಾರ್ಯಕ್ರಮ ಮುಂದಾಗಿದೆ ಎಂದು ಕಾಶಿ ಪೀಠದ ಜ. ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಹೇಳಿದರು.
ಅವರು ನಗರದ ಟಾಟಾ ಮೋಟಾರ್ಸ್ ಮಾಣಿಕ್‌ಬಾಗ್ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು 111 ಸಸಿಗಳ ಉಚಿತ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಸಸಿಗಳ ಉಚಿತ ವಿತರಣೆ ಮಾಡುವುದರ ಜೊತೆಗೆ ಸ್ವಚ್ಛ ಮತ್ತು ಹಸಿರು ಗದಗದತ್ತ ಒಂದು ಹೆಜ್ಜೆ, ಹಸಿರು ಹೊದಿಕೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸುವ ಉಚಿತ ಅರೋಗ್ಯ ತಪಾಸಣೆ ಕಾರ್ಯ ಶ್ಲಾಘನಿಯ ವ್ಯಾಪಾರಿಕರಣ ಅಷ್ಟೇ ಅಲ್ಲದೆ ಸಾಮಾಜಿಕವಾಗಿ ಕೊಡುಗೆ ಕೊಡುತ್ತಿರುವುದು ಉತ್ತಮ ಸಂದೇಶ ಎಂದು ಹೇಳಿದರು.
ಕೈಗಾರಿಕೋದ್ಯಮಿ, ಯುವ ಮುಖಂಡ ಭರತ್ ಬೊಮ್ಮಾಯಿ ಹಾಗೂ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಡಾ.ಕಾರ್ತಿಕ ಶಿವಪುರ ಅವರಿಂದ ನಡೆಯಿತು.
ಈ ಸಂದರ್ಭದಲ್ಲಿ ಡಾ. ರಾಜಶೇಖರ ಮ್ಯಾಗೇರಿ, ಮಾಣಿಕಬ್ಯಾಗ್ ಆಟೋಮೊಬೈಲ್ಸ್ ಪ್ರೈ.ಲಿ.ಸಂಸ್ಥೆಯ ಕಾರ್ತಿಕ ಶಿಗ್ಲಿಮಠ, ಸೇಲ್ಸ್ ಮುಖ್ಯಸ್ಥ ಈಶ್ವರ ಕರಮುಡಿ, ರಾಜಣ್ಣ ಶಿಗ್ಲಿಮಠ, ಲಿಂಗರಾಜ ಪಾಟೀಲ, ವಿಜಯಕುಮಾರ ಬಾಳಿಹಳ್ಳಿಮಠ, ಅಶೋಕ ಸಂಕಣ್ಣವರ, ರಮೇಶ ಹತ್ತಿಕಾಳ, ಚಂದ್ರು ಬಾಳಿಹಳ್ಳಿಮಠ, ಶಿವಾನಂದ ಹಿರೇಮಠ, ಉಮೇಶ ಹುಬ್ಬಳ್ಳಿ, ರಾಜು ಕುರಡಗಿ, ಪ್ರಶಾಂತ ನಾಯ್ಕರ, ಶಿವು ಹಿರೇಮನಿ ಪಾಟೀಲ, ರಮೇಶ ಸಜ್ಜಗಾರ, ದೇವೇಂದ್ರ್ಪ ಹೂಗಾರ, ಸುರೇಶ ಮರಳಪ್ಪನವರ, ಸಂತೋಷ ಅಕ್ಕಿ, ಸಂಗಮೇಶ ಅಂಗಡಿ, ಬಸವರಾಜ ನರೇಗಲ್, ವಿನಾಯಕ ಹೊರಕೇರಿ, ನವೀನ ಕುರ್ತಕೋಟಿ, ಅವಿನಾಶ್ ಹೊನ್ನಗುಡಿ ಶಶಿರೇಖಾ ಶಿಗ್ಲಿಮಠ, ನಾಗರತ್ನ ಹುಬ್ಳಿಮಠ, ಜಯಶ್ರೀ ಹುಬ್ಬಳ್ಳಿ, ಶಾರದ ಹಿರೇಮಠ, ವಿಜಯಲಕ್ಷಿ-್ಮ ಮಾನ್ವಿ, ಲಲಿತಾ ಬಾಳಿಹಳ್ಳಿಮಠ, ನಿರ್ಮಲಾ ಹುಬ್ಳಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 