ಬೆಂಗಳೂರು,: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಶಾಂತಿ ಸಂದೇಶವನ್ನು ಜತ್ತಿನಾದ್ಯಂತ ಸಾರುವ ಮೂಲಕ ಜಗತ್ತನ್ನು ದ್ವೇಷ ಮುಕ್ತವಾಗಿಸಲು ಎಲ್ಲರೂ ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ 'ದಿ ನ್ಯೂಯಾಕರ್್ ಟೈಮ್ಸ್' ಬರೆದಿರುವ ಲೇಖನದಲ್ಲಿ ಅವರು ಜಾಗತಿಕ ಚಿಂತಕರು, ಉದ್ಯಮಿಗಳು ಹಾಗೂ ಟೆಕ್ ನಾಯಕರು ಮುಂದೆ ಬಂದು ಹೊಸ ಆವಿಷ್ಕಾರಗಳ ಮೂಲಕ ಮಹಾತ್ಮಾ ಗಾಂಧಿ ಅವರ ಸಿದ್ಧಾಂತಗಳನ್ನು ಪ್ರಚಾರ ಮಾಡಬೇಕು.
ಈ ಮೂಲಕ ನಾವು ಮುಂದಿನ ಪೀಳಿಗೆ ಗಾಂಧೀಜಿ ಅವರ ಸಿದ್ಧಾಂತಗಳನ್ನು ನೆನಪಿಟ್ಟುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಬಹುದು ಎಂದಿದ್ದಾರೆ. 'ವೈ ಇಂಡಿಯಾ ಆಂಡ್ ದಿ ವಲ್ರ್ಡ ನೀಡ್ಸ್ ಗಾಂಧಿ' (ಭಾರತ ಮತ್ತು ವಿಶ್ವಕ್ಕೆ ಗಾಂಧಿ ಏಕೆ ಬೇಕು) ಎಂದ ಶೀಷರ್ಿಕೆಯ ಲೇಖನದಲ್ಲಿ ಮೋದಿ ಅವರು ಜಗತ್ತನ್ನು ದ್ವೇಷ, ಹಿಂಸೆ ಮತ್ತು ನರಳಾಟದಿಂದ ಮುಕ್ತಗೊಳಿಸಿ, ಸಮೃದ್ಧವಾಗಿಸಲು ಕೈಜೋಡಿಸಿ ದುಡಿಯೋಣ ಎಂದು ಕರೆ ನೀಡಿದ್ದಾರೆ. ನಾವು ಮಾತ್ರ ಗಾಂಧೀಜಿ ಅವರ ಪ್ರಿಯ ಹೇಳಿಕೆಯಾದ 'ವೈಷ್ಣವ ಜನತೋ' ಎಂಬ ಕನಸನ್ನು ನನಸಾಗಿಸಲು ಸಾಧ್ಯ. ಗಾಂಧೀಜಿ ಅಥವಾ ಬಾಪು, ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜನರ ಸ್ಫೂತರ್ಿಯಾಗಿ ಮುಂದುವರಿಯಲಿದ್ದಾರೆ. ಗಾಂಧೀಜಿಯವರ ತಾಳ್ಮೆಯ ವಿಧಾನ ಹಲವು ಆಫ್ರಿಕಾ ದೇಶಗಳಲ್ಲಿ ಭರವಸೆಯ ಕಿರಣ ಮೂಡಿಸಿತ್ತು ಎಂದರು.