ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ :ನ್ಯಾಯಾಧೀಶೆ ಅಕ್ಷತಾ .ಸಿ .ಆರ್
Everyone needs legal knowledge: Justice Akshata C.R.
ಮುಂಡಗೋಡ 14 :ಕಾನೂನು ಅರಿವು ನೆರವು ಕಾರ್ಯಕ್ರಮಗಳು ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉಚಿತ ಕಾನೂನು ಸಲಹೆ ನೆರವು ನೀಡಲು ರೂಪಿಸಲಾದ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯ ಎಂದು ಗೌರವಾನ್ವಿತ ನ್ಯಾಯಾಧೀಶರಾದ ಅಕ್ಷತಾ ಸಿ ಆರ್ ರವರು ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ ಅಭಿಯೋಜನಾ ಇಲಾಖೆ ಮುಂಡಗೋಡ ವಕೀಲರ ಸಂಘ ಮುಂಡಗೋಡ ಹಾಗೂ ಮುಂಡಗೋಡ ತಾಲೂಕಿನ ಇತರೇ ಇಲಾಖೆಗಳ ಸಹಯೊಗದೊಂದಿಗೆ ನಾಲ್ಲಾ ಜಾಗೃತಿ ಯೋಜನೆ-2025 " ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಯೋಜನೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪಟ್ಟಣದ ಜೆಎಮ್ ಎಫ್ಸಿ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಡಗೋಡ ತಾಲೂಕಿನ 16 ಪಂಚಾಯತ, 8 ಶಾಲೆಗಳು 05 ಅಂಗನವಾಡಿ ಕೇಂದ್ರಗಳನ್ನು ಸೇರಿ ಒಟ್ಟು 30 ಕಡೆಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಸಿ ಆರ್, ತಹಶೀಲ್ದಾರಾದ ಶಂಕರ ಗೌಡಿ, ಸಹಾಯಕ ಸರಕಾರಿ ವಕೀಲರಾದ ಪ್ರಸಾದ ರಮೇಶ ಹೆಗಡೆ,ವಕೀಲರ ಸಂಘದ ಅಧ್ಯಕ್ಷರಾದ ಎನ್ ಎ. ನಿಂಬಾಯಿ, ಉಪಾಧ್ಯಕ್ಷರಾದ ಎಸ್.ಎಮ್. ಮಲವಳ್ಳಿ, ಹಾಗೂ ಸಹ ಕಾರ್ಯದರ್ಶಿಗಳಾದ ಜ್ಯೋತಿ ಪಾಟೀಲ್, ಖಜಾಂಜಿಯಾದ ಕೆ.ಎಸ್. ಗುಲಾನವರ್, ಹಿರಿಯ ವಕೀಲರಾದ ಗುಡ್ಡಪ್ಪ ಕಾತೂರ, ಮಂಜುನಾಥ್ ವೇರ್ಣೇಕರ , ಪೊಲೀಸ್ ನೀರಿಕ್ಷಕರಾದ ರಂಗನಾಥ ನೀಲಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಮಾ ಜಿ,ಹಾಗೂ ಸಿ.ಡಿ.ಪಿ.ಓ. ಇಲಾಖೆಯ ಯೋಜನಾಧಿಕಾರಿಗಳಾದ ನಂದನಕುಮಾರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಸಂತೋಷ ಕುಮಾರ , ಕಾರವಾರ ಜಿಲ್ಲಾ ಮಹಿಳಾ ಸಬಲಿಕರಣದ ಯೋಜನಾಧಿಕಾರಿಗಳಾದ ವನಜಶ್ರೀ ನಾಯಕ, ಹಾಗೂ ಎಲ್ಲಾ ಹಿರಿಯ ಕಿರಿಯ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 