ಪ್ರತಿ ಮನೆಗೊಬ್ಬ ಕ್ರೀಡಾಪಟು ಇರಬೇಕು: ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ
Every household should have a sportsperson: SDMC President Guru Angadi
ಪಾಲಬಾವಿ 31 : ಪ್ರತಿ ಮನೆಗೊಬ್ಬ ಕ್ರೀಡಾಪಟು ಇರಬೇಕು. ಕ್ರೀಡೆಯಲ್ಲಿ ಭಾಗವಹಿಸಿವುದರಿಂದ ದೈಹಿಕವಾಗಿ ಬಲವನ್ನು ಹೆಚ್ಚಿಸುತ್ತದೆ. ನಿತ್ಯ ಸೈಕಲ್ ಪ್ಯಾಡಲ್ ತುಳಿಯುವುದರಿಂದ ವ್ಯಕ್ತಿಯ ಸ್ನಾಯು, ಮೊಳೆಗಳು ಗಟ್ಟಿಗೊಳ್ಳುತ್ತದೆ. ಪೆಟ್ರೋಲ್ ಇಂಧನವು ಉಳಿಸಿದಂತೆ ಹಾಗೂ ಪರಿಸರವನ್ನು ಕಾಪಾಡಿದಂತಾಗುತ್ತದೆ. ದಿನ ನಿತ್ಯ ಸೈಕಲ್ ಸವಾರಿ ಮಾಡುವುದರಿಂದ ಶಾರೀರಿಕವಾಗಿ ಮನುಷ್ಯ ಸದೃಢನಾಗುತ್ತಾನೆಂದು ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ ಹೇಳಿದರು.
ಅವರು ಕಪ್ಪಲಗುದ್ದಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಕಂಬಿ ಐದೇಶಿ ಪ್ರಯುಕ್ತ ಗೆಳೆಯರ ಬಳಗ ಇವರ ಆಶ್ರಯದಲ್ಲಿ (ಮಾ.31) ರಂದು ಸೈಕಲ್ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಒಟ್ಟು ಐದು ಜನ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಪ್ಪಲಗುದ್ದಿಯಿಂದ ಮುಗಳಖೋಡ ಕ್ರಾಸ್ ವರೆಗೆ 25 ಕಿ.ಮೀ ಹೋಗಿ ಬರುವ ಸ್ಪರ್ಧೆಯಲ್ಲಿ ಶ್ರೀಶೈಲ ಬೀಳಗಿ ಪ್ರಥಮ, ಸಾಜಿದ್ ಬಳೂತಿ ದ್ವಿತೀಯ, ಹಾಗೂ ಬಡಿಗವಾಡದ ಮಾರುತಿ ಮುಕ್ಕಣ್ಣವರ ತೃತೀಯ ಪಡೆದುಕೊಂಡರು.
ಬಾಕ್ಸ್ ಲೈನ್ : "ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಿಗುತ್ತಿದ್ದಾರೆ. ಪ್ರತಿ ದಿನವು ದೈಹಿಕ ಕಸರತ್ತು ಮಾಡಬೇಕು. ಯುವಕರು ದಿನ ನಿತ್ಯ ಸೈಕಲ್ ತುಳಿಯುವುದರಿಂದ ಶಾರೀರಿಕವಾಗಿ ಸದೃಢರಾಗುತ್ತಾರೆ. ಪರಿಸರ ಮಾಲಿನ್ಯವು ನಿಯಂತ್ರಣ ಮಾಡಿದಂತೆ. ಪೆಟ್ರೋಲ್ ಇಂಧನ ಕಡಿಮೆ ಬಳಸಿದಂತೆ ಆಗುತ್ತದೆ. ಯುವಕರು ಹೆಚ್ಚು ಹೆಚ್ಚು ಸೈಕಲ್ ತುಳಿದರೆ ಆರೋಗ್ಯವಂತರಾಗುತ್ತಾರೆ"===ನ ಶ್ರೀಶೈಲ ಬೀಳಗಿ (ಸೈಕಲ್ ಪಟು ಬೀಳಗಿ)ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ ಗೋಪಾಲ ಕೂಡಲಗಿ, ರೈತ ಸಂಘದ ತಾಲೂಕ ಅಧ್ಯಕ್ಷ ರಮೇಶ ಕಲ್ಲಾರ, ಮಹಾದೇವ ಬಳಗಾರ, ಶೇಖರ ಸಂಕಾನಟ್ಟಿ, ಶ್ರವಣ ಭದ್ರಶೆಟ್ಟಿ, ಧರೆಪ್ಪ ಮಂಗಳೂರ, ಶಂಕರ ಕಲ್ಲಾರ, ಶ್ರೀಶೈಲ ಬದ್ರಶೆಟ್ಟಿ, ಮಹಾದೇವ ಅಂಗಡಿ, ಮಹಾಲಿಂಗ ನಾವಿ, ರಮೇಶ ಬಿಜ್ಜರಗಿ, ಸಂಗಮೇಶ ಹೊರಟ್ಟಿ, ಅಮಿತ ಅಂಗಡಿ, ನಿಂಗಪ್ಪ ಸನದಿ, ಶ್ರೀಶೈಲ ಗಲಗಲಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 