ಪ್ರತಿ ಭಾರತೀಯನೂ ಅಂಬೇಡ್ಕರ್ ಫಲಾನುಭವಿ: ಡಾ. ಎ ಕೆ ಮಠ
Every Indian is a beneficiary of Ambedkar said Dr. A K Math
ಲೋಕದರ್ಶನ ವರದಿ
ಗದಗ 14: ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು ಹೀಗಾಗಿ ಪ್ರತಿ ಭಾರತೀಯನೂ ಅಂಬೇಡ್ಕರ್ ಫಲಾನುಭವಿ ಎಂದು ಕೆ. ಎಲ್. ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ ಕೆ ಮಠ ತಿಳಿಸಿದರು
ನಗರದ ಕೆ. ಎಲ್. ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ದೇಶಾದ್ಯಂತ ಸಂಭ್ರಮ, ಗೌರವಯುತವಾಗಿ ಆಚರಿಸುವ ದಿನ. ಭಾರತದ ಸಂವಿಧಾನದ ಪಿತಾಮಹ, ಅಸ್ಪೃಶ್ಯತಾ ನಿವಾರಕ, ದಲಿತ ಚೇತನ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ನೀರಾವರಿ ತಜ್ಞ, ಮಹಿಳಾ ವಿಮೋಚಕ, ಕಾರ್ಮಿಕರ ಧ್ವನಿ ಹೀಗೆ ಸಾಲು ಸಾಲು ಬಿರುದುಗಳನ್ನು ತನ್ನ ಹೆಸರಿನ ಹಿಂದೆ ಅಚ್ಚಳಿಯದಂತೆ ಕೆತ್ತಿರುವ ಆಧುನಿಕ ಭಾರತದ ನಿರ್ಮಾತೃ ಡಾ ಬಿಆರ್ ಅಂಬೇಡ್ಕರ್. ಭಾರತದ ಇತಿಹಾಸದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿ ಅಂದಿನಿಂದ ಇಂದಿನತನಕವೂ ನಿತ್ಯವೂ ಜನರ ಚರ್ಚೆಯಲ್ಲಿ ಬರುತ್ತಲೇ ಇರುವ ಏಕೈಕ ನಾಯಕ ಡಾ ಬಿಆರ್ ಅಂಬೇಡ್ಕರ್ ಕೋಟ್ಯಂತರ ಜನರ ಜೀವನವನ್ನು ಬದಲಾಯಿಸಿದ ಮಹಾನ್ ಚೇತನವೂ ಹೌದು ಎಂದರು. ಈ ದಿನವು ಕೋಟ್ಯಂತರ ಜನರ ಜೀವನವನ್ನು ಬದಲಾಯಿಸಿದ ಮಹಾನಾಯಕನೊಬ್ಬನ ಹೋರಾಟ, ಶಿಕ್ಷಣ ಮತ್ತು ಕ್ರಾಂತಿಯನ್ನು ನೆನಪಿಸುತ್ತದೆ. ಅಂಬೇಡ್ಕರ್ ಅವರು ತನ್ನ ಜೀವನವನ್ನು ಅನ್ಯಾಯಕ್ಕೊಳಗಾದವರಿಗೆ, ತುಳಿತಕ್ಕೊಳಗಾದವರಿಗೆ ಧ್ವನಿ ನೀಡುವ ಸಾಮಾಜಿಕ ಚಳುವಳಿಯನ್ನೂ ಮುನ್ನಡೆಸಿದರು. ಭಾರತದ ಆರ್ಥಿಕತೆ, ನೀರಾವರಿ, ಸಾಮಾಜಿಕ ಬದಲಾವಣೆಗಾಗಿಯೂ ಹೋರಾಡಿದರು. ಅದಕ್ಕಾಗಿಯೇ ಈ ದಿನವನ್ನು ಕೇವಲ ಕ್ಯಾಲೆಂಡರ್ನಲ್ಲಿ ನೋಡಿ ಮರೆಯುವ ಬದಲು ಅಂಬೇಡ್ಕರ್ ಅವರ ಬದುಕನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅಂಬೇಡ್ಕರ್ ಅವರ ಜೀವನವನ್ನು ನಾವು 1ಅ ಆದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕು ಸಾರ್ಥಕತೆಯ ಹಾದಿಯಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಡಾ. ವೀಣಾ ಈ ಮಾತನಾಡಿ ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ..! ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಅಂಬೇಡ್ಕರ್ ಎಂದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ಪ್ರೊ. ರಾಜು ಯಲಬುರ್ಗಿ ಮಾತನಾಡಿ ಅಂಬೇಡ್ಕರ್ ಪ್ರಮುಖ ತತ್ವಗಳನ್ನು ತಿಳಿಸಿದರು. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ. ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು. ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು. ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ. ನೀವು ಮನಸ್ಸಿನಿಂದ ಮುಕ್ತರಾಗಿದ್ದರೆ ನೀವು ನಿಜವಾಗಿಯೂ ಸ್ವತಂತ್ರರು. ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಿ. ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು, ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 