ಎಂಟ್ಹತ್ತು ಅರ್ಜಿಗಳನ್ನು ಸಲ್ಲಿಸಿದರೂ ಕಣ್ಣೆತ್ತಿ ನೋಡದ ಅಧಿಕಾರಿಗಳು ಮಂತ್ರಿಗಳು

ಎಂಟ್ಹತ್ತು ಅರ್ಜಿಗಳನ್ನು ಸಲ್ಲಿಸಿದರೂ ಕಣ್ಣೆತ್ತಿ ನೋಡದ ಅಧಿಕಾರಿಗಳು ಮಂತ್ರಿಗಳು  Even though eighty applications were submitted, the officers and ministers did not pay attention

ಯಮಕನಮರಡಿ 08: ಸಾರ್ವಜನಿಕ ಕುಂದು ಕೊರತೆಗಳು ಹಾಗೂ ನೊಂದ ಕಲಾವಿದರ ಅನುಕೂಲಕ್ಕಾಗಿ ಕೊಟ್ಟಿರುವ ಸುಮಾರು ಎಂಟು ಹತ್ತು ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ನಿರ್ದೇಶಕರಿಗೆ ಕಳಿಸಿ ಸುಮಾರು ಒಂದು ವರ್ಷಗಳಾದರೂ ಸಹಿತ ಅದರ ಬಗ್ಗೆ ಯಾವುದೇ ತರಹದ ಉತ್ತರಗಳು ಬಂದಿರುವುದಿಲ್ಲ.  

ಮುಖ್ಯಮಂತ್ರಿಗಳಿಗೆ ಕನ್ನಡ ಸಾಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೂ ಸಹಿತ ಕಳುಹಿಸಲಾಗಿದೆ. ಆದರೆ ಇಲ್ಲಿಯವರೆಗೆ ತಮ್ಮ ಅರ್ಜಿ ಬಂದು ತಲುಪಿರುತ್ತದೆ ಇದರ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮಾತು ಅವರ ಹಿಸ್ಟರಿಯಲ್ಲಿ ಇಲ್ಲ. ಇದರಿಂದಾಗಿ ಅರ್ಜಿಗಳನ್ನು ಕಳಿಸಲಾಗಿದ್ದ ಓರ್ವ ಪತ್ರಕರ್ತ ಸಮಾಜಸೇವಕರು, ಕಲಾವಿದರು ಇದ್ದು ಸಹಿತ ಇವರಿಗೆ ಕವಡೆ ಕಿಮ್ಮತ್ತು ಇಲ್ಲದಂತಾಗಿದೆ. ಹೀಗಾಗಿ ಅವರು ಮನನೊಂದು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳಾಗಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವುದಕ್ಕೆ ಅವುಗಳಿಗೆ ತಕ್ಕ ಉತ್ತರ ತಿಳಿಸುವುದಕ್ಕೆ ಸರಕಾರ ಅಧಿಕಾರಿಗಳನ್ನು ನೇಮಕ ಮಾಡಿರುತ್ತದೆ. ಆದರೆ ಇವರು ಸರಕಾರ ನಿಯಮಗಳನ್ನು ಗಾಳಿಗೆ ತೂರಿಬಿಟ್ಟಿದ್ದಾರೆ. ಸುಮಾರು ವರ್ಷಗಳಿಂದ ಕಲಾವಿದರಾಗಲಿ ವಿದ್ಯಾರ್ಥಿಗಳ ತೊಂದರೆಯಾಗಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಕಳಿಸಿದರೆ ಇವರು ಕಣ್ಣು ಮುಚ್ಚಿಕೊಂಡು ಕುಳಿತಿರಬಹುದೆಂದು ತೋರುತ್ತಿದೆ ಎಂದು ಜಾನಪದ ಕಲಾವಿದ ಹಿರಿಯ ಪತ್ರಕರ್ತ ಗೋಪಾಲ್ ಚಿಪಣಿ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳು ಇನ್ನಾದರೂ ಇತ್ತ ಕಡೆ ಗಮನ ಹರಿಸಲಿ ಎಂದು ಮನವಿ ಮಾಡಿದ್ದಾರೆ.