ಎಲ್ಲ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕ ಸ್ಥಾಪನೆ; ಕೇಂದ್ರ ಪ್ರಸ್ತಾವನೆ

ನವದೆಹಲಿ, ನ 4:    ಮಕ್ಕಳು, ಯುವತಿಯರು  ಹಾಗೂ ಮಹಿಳೆಯ ಕಳ್ಳಸಾಗಣಿಕೆಯ  ಚಟುವಟುವಟಿಕೆಗಳ  ಮೇಲೆ  ನಿಗಾ ವಹಿಸಲು  ಹಾಗೂ  ಅವರಿಗೆ   ಸುರಕ್ಷತೆ, ಭದ್ರತೆ ಕಲ್ಪಿಸಲು    100 ಕೋಟಿ ರೂಪಾಯಿ  ವೆಚ್ಚದಲ್ಲಿ   ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕಗಳನ್ನು  ಸ್ಥಾಪಿಸಲು  ಕೇಮದ್ರ ಸರ್ಕಾರ ಪ್ರಸ್ತಾವನೆ  ಸಿದ್ಧಪಡಿಸಿದೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಸಚಿವಾಲಯದ  ಕಾರ್ಯದರ್ಶಿ  ಅಧ್ಯಕ್ಷತೆಯಲ್ಲಿ   ನಿರ್ಭಯಾ  ಚೌಕಟ್ಟನಲ್ಲಿ  ರಚಿಸಲಾಗಿರುವ  ಸಬಲೀಕರಣ ಸಮಿತಿ  ಈ ಪ್ರಸ್ತಾವನೆಗೆ  ಅನುಮೋದನೆ ನೀಡಿದೆ.  ನಿರ್ಭಯ ನಿಧಿಯಡಿ    ಸ್ಥಾಪಿಸಲಾಗುವ  ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕಗಳ ವೆಚ್ಚವನ್ನು  ಕೇಂದ್ರ ಸರ್ಕಾರವೇ ಭರಿಸಬೇಕು  ಎಂದು ಶಿಫಾರಸ್ಸು ಮಾಡಿದೆ. ಕಳೆದ ತಿಂಗಳ  22 ರಂದು  ದೆಹಲಿಯಲ್ಲಿ ಸಭೆ ನಡೆಸಿದ  ಸಬಲೀಕರಣ ಸಮಿತಿ  ದೇಶದ ಎಲ್ಲಾ ಜಿಲ್ಲೆಗಳಲ್ಲಿ  ಮಹಿಳೆ ಮತ್ತು  ಮಕ್ಕಳಿಗೆ ಸಂಬಂಧಿಸಿದ  ಪ್ರಕರಣ  ತನಿಖಾ ಕಾರ್ಯಗಳನ್ನು  ನಿಭಾಯಿಸುತ್ತಿರುವ  ಅಧಿಕಾರಿಗಳು  ಗುರುತಿಸುವ ಸ್ಥಳದಲ್ಲಿ ಮಾನವ ಕಳ್ಳಸಾಗಾಣಿಕೆ  ನಿಗ್ರಹ ಘಟಕಗಳ ವಿಸ್ತರಣೆ,  ಪೊಲೀಸ್ ಠಾಣೆಗಳಲ್ಲಿ  ಮಹಿಳಾ ಸಹಾಯವಾಣಿ   ವ್ಯವಸ್ಥೆ ಆರಂಭಿಸಬೇಕೆಂಬ  ಪ್ರಸ್ತಾವನೆಗಳಿಗೆ   ಅನುಮೋದನೆ ನೀಡಿದೆ  ಎಂದು ಅಧಿಕಾರಿ ಮೂಲಗಳು ಹೇಳಿವೆ. ಮಹಿಳಾ ಮತ್ತು  ಮಕ್ಕಳ ಅಭಿವೃದ್ದಿ  ಸಚಿವಾಲಯ   10 ಸಾವಿರ ಪೊಲೀಸ್ ಠಾಣೆಗಳಲ್ಲಿ ಮಹಿಳಾ  ಸಹಾಯವಾಣಿ ಆರಂಭಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.