ದೂರು ಸ್ವೀಕರಿಸಲು ಹಾಗೂ ಮತದಾರರಿಗೆ ಮಾಹಿತಿ ನೀಡಲು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಲಹಾ ಕೇಂದ್ರ ಸ್ಥಾಪನೆ

 ದೂರು ಸ್ವೀಕರಿಸಲು ಹಾಗೂ ಮತದಾರರಿಗೆ ಮಾಹಿತಿ ನೀಡಲು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಲಹಾ ಕೇಂದ್ರ ಸ್ಥಾಪನೆ Establishment of a consultation center in the Regional Commissioner's office to receive complaints a

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಹಿ2026 

ದೂರು ಸ್ವೀಕರಿಸಲು ಹಾಗೂ ಮತದಾರರಿಗೆ ಮಾಹಿತಿ ನೀಡಲು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಲಹಾ ಕೇಂದ್ರ ಸ್ಥಾಪನೆ 

ಬಳ್ಳಾರಿ  06: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿಯು 2026ನೇ ನ.11 ಕ್ಕೆ ಮುಕ್ತಾಯಗೊಳ್ಳಲಿದ್ದು, ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಹಿ2026 ರ ಚುನಾವಣೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಹಾಗೂ ಮತದಾರರಿಗೆ ಮಾಹಿತಿ ನೀಡಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕೋಣೆ ಸಂಖ್ಯೆ 17 ರಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ (ಕಂಪ್ಲೈಂಟ್ಸ್‌ ಮಾನಿಟರಿಂಗ್ ಸೆಲ್ ಮತ್ತು ವೋಟರ​‍್ಸ‌ ಹೆಲ್ಪ್‌ಡೆಸ್ಕ್‌) ಸ್ಥಾಪಿಸಿಲಾಗಿದೆ. 

ಈ ಸಲಹಾ ಕೇಂದ್ರದ ದೂ.08472-200255 ಆಗಿದ್ದು, ಸಾರ್ವಜನಿಕರು ಈ ಸಲಹಾ ಕೇಂದ್ರ ತಂಡಕ್ಕೆ ಸಂಪರ್ಕಿಸಿ ಮತದಾರರ ನೋಂದಣಿ ಮತ್ತು ಚುನಾವಣೆಗೆ ಕುರಿತಾದ ಮಾಹಿತಿ ಪಡೆಯಬಹುದಾಗಿದೆ. ಯಾವುದೇ ದೂರುಗಳಿದ್ದಲ್ಲಿ ದಾಖಲಿಸಬಹುದಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ  ಜಹೀರಾ ನಸೀಮ ಅವರು ತಿಳಿಸಿದ್ದಾರೆ. 

ಅರ್ಹತಾ ದಿನಾಂಕ 01.11.2025ಕ್ಕೆ ಅನ್ವಯಸುವಂತೆ ಮತದಾರರ ಪಟ್ಟಿ ಸಿದ್ಧಪಡಿಸಲು ವೇಳಾಪಟ್ಟಿ ಹೊರಡಿಸಲಾಗಿದ್ದು, ದಿನಾಂಕ:25.11.2025 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ ದಿನಾಂಕ:25.11.2025 ರಿಂದ 10.12.2025ರ ವರೆಗೆ ಆಕ್ಷೇಪಣೆಗಳನ್ನು ಅಹ್ವಾನಿಸಿ ದಿನಾಂಕ:30.12.2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. 

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿರುವುದರಿಂದ ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಲು ಅಲ್ಲದೇ ಈಗಾಗಲೇ ನೋಂದಣಿಯಾಗಿದ್ದಲ್ಲಿ ಅವರ ಮತದಾರರ ಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿ ನೀಡುವುದು ಇದನ್ನು ಹೊರತುಪಡಿಸಿಯು ಸಹ ಮತದಾರರ ನೋಂದಣಿ ಪ್ರಕ್ರೀಯೆ ಪ್ರಾರಂಭದಿಂದ ಈ ಚುನಾವಣೆಯ ಫಲಿತಾಂಶ ಘೋಷಣೆಯಾಗುವವರೆಗೂ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳಲು ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸ್ಥಾಪಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 

*ಅಧಿಕಾರಿ ಹಾಗೂ ಸಿಬ್ಬಂದಿಯ ಪದನಾಮ, ಮೊಬೈಲ್ ಸಂಖ್ಯೆ:* 

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ಬಜೇಟ್ ಆಫೀಸರ್ ಪ್ರಸನ್ನಕುಮಾರ(ಮೊ.9448712912), ಶಿರಸ್ತೇದಾರ ಅಶೋಕ(ಮೊ.9731720711), ಶಿರಸ್ತೇದಾರ ರವಿಕುಮಾರ ಗಾಜರೆ(ಮೊ.9480149223) ಹಾಗೂ ದ್ವಿತೀಯ ದರ್ಜೆ ಸಹಾಯಕ ಶರಣಪ್ಪ ಶ್ರೀಗಿರಿ(ಮೊ.7406111177) ಮತ್ತು ದ್ವಿತೀಯ ದರ್ಜೆ ಸಹಾಯಕ ಪ್ರವೀಣ ಕುಲಕರ್ಣಿ (ಮೊ.7829766596) ಇವರನ್ನು ನೇಮಿಸಲಾಗಿದೆ.  

ದೂರು ಮೇಲ್ವಿಚಾರಣೆ ತಂಡ ಮತ್ತು ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ನೇಮಕ ಮಾಡಲಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತವಾಗಿ / ಮೌಖಿಕವಾಗಿ / ದೂರವಾಣಿ ಮುಖಾಂತರ ಸ್ವೀಕೃತವಾದ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಿ ಕಾಲೋಚಿತಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅ.16 ರಂದು ಅಡುಗೆ ಸ್ಪರ್ಧೆ; ನೋಂದಾಯಿಸಿಕೊಳ್ಳಲು ಆಹ್ವಾನ 

ಬಳ್ಳಾರಿ 06: ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಏಆರ್ ಹಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ವಿಶ್ವ ಆಹಾರ ದಿನ ಅಂಗವಾಗಿ “ಪರಂಪರೆಯ ತಿನಿಸುಗಳಲ್ಲಿ ಪೌಷ್ಟಿಕ ನವೀನತೆ” ಎಂಬ ವಿಷಯದಡಿ ಅಕ್ಟೋಬರ್ 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಕೇಂದ್ರದ ಆವರಣದಲ್ಲಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, ಅರ್ಹರು ಭಾಗವಹಿಸಲು ನೋಂದಾಯಿಸಿಕೊಳ್ಳಬಹುದು. 

ಜಿಲ್ಲೆಯ ಪರಂಪರೆಯ ತಿನಿಸುಗಳ ಮೂಲಕ ಪೋಷಕಾಂಶಯುತ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ. ಭಾಗವಹಿಸುವವರು ತಮ್ಮ ಮನೆಯಲ್ಲೇ ಆಹಾರ ತಿನಿಸು ತಯಾರಿಸಿ, ಸಿದ್ಧವಾದ ತಿನಿಸನ್ನು ನಿಗದಿತ ದಿನದಂದು ಇದೇ ಕಚೇರಿಗೆ ತರಬೇಕು. 

30 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಮೊದಲು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುತ್ತದೆ. ರೈತ ಮಹಿಳೆಯರು, ಸ್ವಯಂಸಹಾಯ ಗುಂಪು ಸದಸ್ಯರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಯುವಕರು ಭಾಗವಹಿಸಬಹುದಾಗಿದೆ. 

*ಸೂಚನೆ:* 

ಒಂದು ತಿನಿಸು ಮಾತ್ರ ತಯಾರಿಸಬೇಕು, ಸ್ಥಳೀಯ ಪದಾರ್ಥಗಳನ್ನು ಬಳಸಬೇಕು. ಆಹಾರವು ಪೋಷಕಾಂಶಯುತವಾಗಿರಬೇಕು; ಹೆಚ್ಚು ಎಣ್ಣೆ, ಮೈದ ಪದಾರ್ಥಗಳ ಬಳಕೆ ತಪ್ಪಿಸಬೇಕು. 

ಪ್ರದರ್ಶಿಸಲು ಸಿದ್ಧವಾದ ತಿನಿಸು ಸ್ವಚ್ಛವಾದ ಪಾತ್ರೆಯಲ್ಲಿ ತರಬೇಕು. ಪ್ರದರ್ಶನ ವೇಳೆಯಲ್ಲಿ ತಿನಿಸಿನ ಹೆಸರು, ಬಳಸಿದ ಪದಾರ್ಥಗಳು, ಪೋಷಕಾಂಶದ ಮಹತ್ವ ಮಾಹಿತಿ ನೀಡಬೇಕು. ಪೋಷಕ ಮೌಲ್ಯ, ರುಚಿ, ಪ್ರದರ್ಶನ ಮತ್ತು ಸ್ಥಳೀಯ ಪದಾರ್ಥಗಳ ಬಳಕೆ ಪ್ರಮಾಣಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. 

ಆಸಕ್ತರು ತಮ್ಮ ಹೆಸರು, ಗ್ರಾಮದ ಹೆಸರು ಮತ್ತು ತಿನಿಸಿನ ಶೀರ್ಷಿಕೆಯನ್ನು ಕೆಳಗಿನ ವಿಳಾಸಕ್ಕೆ ಅಥವಾ ದೂರವಾಣಿಯಲ್ಲಿ ನೋಂದಾಯಿಸಬಹುದು. ನೋಂದಾಯಿಸಿಕೊಳ್ಳಲು ಅಕ್ಟೋಬರ್ 13 ಕೊನೆಯ ದಿನ. 

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಏಆರ್ ಹಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಗೃಹ ವಿಜ್ಞಾನಿ) ಅವರ ಮೊ.9535556509 ಗೆ ಸಂಪರ್ಕಿಸಬಹುದು ಎಂದು ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ; ಪರಿಶಿಷ್ಟ ಪಂಗಡ  ಮಹಿಳೆಯರಿಂದ ನೋಂದಾಯಿಸಿಕೊಳ್ಳಲು ಆಹ್ವಾನಬಳ್ಳಾರಿ 06: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ  ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ವತಿಯಿಂದ ಸ್ವಂತ ಉದ್ಯೋಗ ಆರಂಭಿಸಲು ಇಚ್ಚಿಸುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಅರ್ಹ ಪರಿಶಿಷ್ಟ ಪಂಗಡ ಮಹಿಳೆಯರಿಂದ ನೋಂದಾಯಿಸಿಕೊಳ್ಳಬಹುದಾಗಿದೆ. 

ತರಬೇತಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಉದ್ಯಮ ನಿರ್ವಹಣೆ ಹಾಗೂ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.ಅಭ್ಯರ್ಥಿಗಳು 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಓದಲು/ಬರೆಯಲು ಬರುತ್ತಿರಬೇಕು.  ಪರಿಶಿಷ್ಟ ಪಂಗಡ ಮಹಿಳೆಯರಿಗೆ ಮಾತ್ರ ಅವಕಾಶ.ಆಸಕ್ತರು ಅರ್ಜಿಯನ್ನು ನಗರದ ಹೊಸಪೇಟೆ ರಸ್ತೆಯ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಕಟ್ಟಡದ ಸಿಡಾಕ್ ನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಅಥವಾ ಮೊ.9449226221, 7483538942 ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಸಿಡಾಕ್ ನ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದಾ 

ಯುವಕ ಕಾಣೆ: ಪತ್ತೆಗೆ ಮನವಿ 

ಬಳ್ಳಾರಿ 06: ನಗರದ ವಿದ್ಯಾನಗರ ಬಡಾವಣೆಯ ಸೌದಗರ್ ಕಾಲೋನಿಯ ಸಾಯಿರಾಮ್ ಚೌಧರಿ ಎನ್ನುವ 24 ವರ್ಷದ ಯುವಕ ಅ.04 ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಕಾಣೆಯಾಗಿದ್ದು, ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಠಾಣಾಧಿಕಾರಿ ಮನವಿ ಮಾಡಿದ್ದಾರೆ. 

ಚಹರೆ ಗುರುತು: ಅಂದಾಜು 6.2 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು, ಬಲಗೈ ಮೇಲೆ ವೆಂಕಟ ಬಾಲಾಜೀ ಇಂಗ್ಲೀಷ್‌ನಲ್ಲಿ ಹಚ್ಚೆ ಇರುತ್ತದೆ. 

ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟೀ-ಶರ್ಟ್‌ ಹಾಗೂ ಗ್ರೇ ಕಲರ್ ಜೀನ್ಸ್‌ ಪ್ಯಾಂಟ್ ಮತ್ತು ಸ್ಯಾಂಡಲ್ಸ್‌ ಚಪ್ಪಲಿ ಧರಿಸಿರುತ್ತಾನೆ.ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731,244145 ಅಥವಾ ಪಿಎಸ್‌ಐ ಮೊ.94808203085, ಪಿಐ ಮೊ.9480803047 ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅನಾಮಧೇಯ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಮನವಿ 

ಬಳ್ಳಾರಿ 06: ಬಳ್ಳಾರಿ ರೈಲು ನಿಲ್ದಾಣ ವ್ಯಾಪ್ತಿಯ ಹದ್ದಿನಗುಂಡು-ಹಗರಿ ರೈಲ್ವೇ ನಿಲ್ದಾಣಗಳ ಮಧ್ಯ ರೈಲ್ವೇ ಕೆ.ಎಂ.ನಂ 214/32-34 ನೇದ್ದರ ಹಳಿಯ ಮಧ್ಯೆ ಯಾವುದೋ ಚಲಿಸುವ ರೈಲುಗಾಡಿಗೆ ಆಕಸ್ಮಿಕವಾಗಿ ಬಿದ್ದು ಅಂದಾಜು 50 ವರ್ಷದ ಅನಾಮಧೇಯ ವ್ಯಕ್ತಿಯು ಅ.04 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಪ್ರಕಟಣೆ ಹೊರಡಿಸಿದ್ದಾರೆ. 

ಮೃತನ ಚಹರೆ: ಎತ್ತರ ಸುಮಾರು 5.6 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದ ಮೂಗು, ಅಗಲವಾದ ಹಣೆ, ತಲೆ ಮತ್ತು ಗಡ್ಡ, ಮೀಸೆ ಬೋಳಿಸಿರುತ್ತಾನೆ. 

ಮುಂಗೈ ಮೇಲೆಎಸ್‌.ಪಿ.ಎಸ್‌.ಎಸ್‌.ಆರ್‌.ಎಸ್ ಎಂದು ಅಚ್ಚೆ ಗುರುತುಇರುತ್ತದೆ. ಮೃತನ ಮೈಮೇಲೆ ಗೋಲ್ಡನ್ ಕಲರ್ ತುಂಬುತೋಳಿನ ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಇರುತ್ತದೆ.ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರೀಕ್ಷಕರ ಮೊ:9480802131 ಅಥವಾ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನೀರೀಕ್ಷಕರ ಮೊ:9480800471 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.