ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನಕ್ಕೆ ಚಾಲನೆ

Erehulu Totti construction campaign launched

ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನಕ್ಕೆ ಚಾಲನೆ

ಹಾವೇರಿ 20:   ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುಮೋದಿತ 266 ಕಾಮಗಾರಿಗಳ ಪಟ್ಟಿಯಲ್ಲಿ ರೈತರಿಗೆ ಅನುಕೂಲವಾಗುವ ಮತ್ತು ಕಪ್ಪು ಬಂಗಾರವೆಂದು ಹೇಳುವ ಎರೆಹುಳ ಗೊಬ್ಬರ ತಯಾರಿಸಲು “ಎರೆಹುಳು ತೊಟ್ಟಿ” ನಿರ್ಮಾಣ ಕಾಮಗಾರಿ ಸಹ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 8000 ಎರೆಹುಳು ತೊಟ್ಟಿ ನಿರ್ಮಾಣಮಾಡುವ ಗುರಿ ಹೊಂದಲಾಗಿದೆ ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಅವರು ಹೇಳಿದರು.    

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ  ಜಿಲ್ಲೆಯ ಎಲ್ಲ ಸಹಾಯಕನಿರ್ದೇಶಕರು(ಗ್ರಾಉ), ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು, ಬಿ.ಎಫ್‌.ಟಿ. ಮತ್ತು ಗ್ರಾಮ ಕಾಯಕ ಮಿತ್ರರರ ಸಭೆಯಲ್ಲಿ “ಎರೆಹುಳು ತೊಟ್ಟಿ” ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ತಾಲೂಕಿಗೆ ಮೊದಲನೇ ಹಂತದಲ್ಲಿ 3 ತಿಂಗಳೊಳಗಾಗಿ ಕನಿಷ್ಠ 1000 ಎರೆಹಳು ತೊಟ್ಟಿ ನಿರ್ಮಾಣದ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ಉಳಿದ ರೈತರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗುವುದು. ನರೇಗಾ ಯೋಜನೆಯಡಿ ರೂ. 20,000/- ವೆಚ್ಚದಲ್ಲಿ ಗ್ರಾಮೀಣ ಭಾಗದ ರೈತರಿಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.  

ಏಕೆಬೇಕು ಎರೆಹುಳುತೊಟ್ಟಿ : ಹಾವೇರಿ ಜಿಲ್ಲೆಯಲ್ಲಿ ಶೇ 90 ರಷ್ಟು ರೈತಾಪಿ ಜನರಿದ್ದು, ಎಲ್ಲರೂ ಕೃಷಿ ಅವಲಿಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶವು 58,000 ಹೆಕ್ಟೇರನಷ್ಟಿದ್ದು, ತೋಟಗಾರಿಕೆ ಬೆಳೆಗಳಿಗೆ ಕಡ್ಡಾಯವಾಗಿ ಸಾವಯವ ಗೊಬ್ಬರ ಉಪಯೋಗಿಸುವುದರೊಂದಿಗೆ ಜಿಲ್ಲೆಯನ್ನು ಸಾವಯವ ಕೃಷಿವಲಯವನ್ನಾಗಿಸುವ (ಓಡಿರಚಿಟಿಛಿ ಈಚಿಡಿಟಟಿರ ಚಠಜ) ಸದುದ್ದೇಶ ಹೊಂದಲಾಗಿರುತ್ತದೆ.  

ಅಲ್ಲದೇ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಹಳ್ಳಿಗಳ ನೈರ್ಮಲ್ಯವನ್ನು ಕಾಪಡುವನಿಟ್ಟಿನಲ್ಲಿ ಸ್ವಚ್ಛಭಾರತ್ ಮಿಷನ್ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆಮಾಡಲು ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ (ಚರಂಡಿ, ಸಮುದಾಯಸೋಕ್ ಪಿಟ್ ಮತ್ತು ವೈಯಕ್ತಿಕ ಸೋಕ್ ಪಿಟ್ ಹಾಗೂ ಡಿವ್ಯಾಟ್ಸ್‌). ಕಪ್ಪು ನೀರು ನಿರ್ವಹಣೆಗಾಗಿ ತಾಲೂಕಿಗೆ ಒಂದರಂತೆ ಮಲತ್ಯಾಜ್ಯ ನಿರ್ವಹಣೆ ಘಟಕಗಳನ್ನು (ಪೀಕಲ್ ಸ್ಲಡ್ಜ್‌ ಟ್ರೀಟ್ಮೆಂಟ್  ಪ್ಲಾಂಟ್)ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿಯೊಂದಿಗೆ ಗ್ರಾಮ ಪಂಚಾಯತಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ. ಒಣಕಸ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. 

ಹಸಿಕಸ ನಿರ್ವಹಣೆಯು ನೀರಿಕ್ಷಿತ ಮಟ್ಟದಲ್ಲಿ ಆಗದೇ ಇರುವುದರಿಂದ ಎರೆಹುಳು ತೊಟ್ಟಿಗಳ ನಿರ್ಮಾಣವು ಹಸಿಕಸ ನಿರ್ವಹಣೆಯಲ್ಲಿ ಸಹಾಯದೊಂದಿಗೆ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಮಹತ್ತರ ಪಾತ್ರವಹಿಸಲಿದೆ. ಆದ್ದರಿಂದ??ಎರೆಹುಳು ತೊಟ್ಟಿ ನಿರ್ಮಾಣ”ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.   

ಎರೆಹುಳು ತೊಟ್ಟಿ ನಿರ್ಮಾಣದೊಂದಿಗೆ ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ, ಉತ್ತಮ ಗುಣಮಟ್ಟದ ಆಹಾರಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಉತ್ಪಾದಿಸುವಲ್ಲಿ ಅನುಕೂಲವಾಗುವ ಸದುದ್ದೇಶದಿಂದ ಈ ಅಭಿಯಾನ ಹೊಂದಿದೆ. ಜಿಲ್ಲೆಯ ಅರ್ಹ ಫಲಾನುಭವಿಗಳು ಈ ಅಭಿಯಾನದ ಸದುಪಯೋಗ  ಪಡೆದುಕೊಳ್ಳಬೇಕು. ಎರೆಹುಳು ತೊಟ್ಟಿ ನಿರ್ಮಾಣಕ್ಕಾಗಿ ಇಂದೇ ನಿಮ್ಮ ಗ್ರಾಮ ಪಂಚಾಯತಿ ಸಂರಿ​‍್ಕಸಬೇಕು ಎಂದರು. 

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ  ಡಾ. ಎಸ್‌.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಹೆಚ್‌. ವೈ. ಮಿಶಿ, ಹಾಗೂ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರುಗಳು (ಗ್ರಾಉ), ತಾಂತ್ರಿಕ ಸಂಯೋಜಕರು ಮತ್ತು ಸಹಾಯಕರುಗಳು, ಬಿ.ಎಫ್‌.ಟಿ.ಗಳು, ಗ್ರಾಮ ಕಾಯಕ ಮಿತ್ರರು ಇತರರು ಉಪಸ್ಥಿತರಿದ್ದರು.