ಸಮಾಜದಲ್ಲಿಯ ದೇವದಾಸಿ ಪದ್ಧತಿಯ ನಿರ್ಮೂಲನೆ ಮಾಡುವುದು ಸವಾಲಿನ ಕಾರ್ಯ

ಸಮಾಜದಲ್ಲಿಯ ದೇವದಾಸಿ ಪದ್ಧತಿಯ ನಿರ್ಮೂಲನೆ ಮಾಡುವುದು ಸವಾಲಿನ ಕಾರ್ಯ Eradicating the Devadasi system in society is a challenging task.

ದಾರವಾಢ 25 : ಇಂಥ ದೇವದಾಸಿಯರ ಪುನರ್ವಸತಿ ಮತ್ತು ಅವರ ಮಕ್ಕಳ ಶಿಕ್ಷಣದ ಬಗ್ಗೆ ಅನೇಕ ದಶಕಗಳಿಂದ ನಾನು ಶ್ರಮಿಸುತ್ತಿದ್ದು, ಈ ಪಯಣದ ಪ್ರಯತ್ನದಿಂದಾಗಿ ದೊರಕಿರುವ ಫಲಿತಾಂಶದಿಂದಾಗಿ ತಮಗೆ ಸಾಕಷ್ಟು ಸಂತೋಷ ಮತ್ತು ಸಮಾಧಾನ ವಿದೆ ಎಂದು ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷಬಿ.ಎಲ್‌. ಪಾಟೀಲ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ‘ಅರ್ಜ್‌’ದೊಳಗಿನ ದಿನಗಳು ಕೃತಿ ಲೋಕಾರೆ​‍್ಣ ಮಾಡಿ ಮಾತನಾಡುತ್ತಿದ್ದರು. 

ಮುಂದುವರಿದು ಮಾತನಾಡಿದಅವರು, ಡಾ.ರೂಪೇಶ ಪಾಟ್ಕರ ಅವರು ಮರಾಠಿಯಲ್ಲಿ ಬರೆದಿರುವ ‘ಅರ್ಜ್‌ ಮಧಲೆ ದಿವಸ್‌’ ಈ ಕೃತಿಯನ್ನುಡಾ. ಸಂಜೀವ ಕುಲಕರ್ಣಿ ಕನ್ನಡದಲ್ಲಿ ‘ಅರ್ಜ್‌ದೊಳಗಿನ ದಿನಗಳು’ ಎಂಬ ಶೀರ್ಷೀಕೆಯಲ್ಲಿ ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದಾರೆ.ಇದು ಎಲ್ಲ ಕನ್ನಡಿಗರು ಓದಲೇಬೇಕಾದ ಪುಸ್ತಕ ಎಂದುಅವರು ಹೇಳಿದರು. 

ಗೋವಾ ವಾಸ್ಕೋದ ಅರ್ಜ್‌ ಸಂಸ್ಥೆಯ ನಿರ್ದೇಶಕಅರುಣ ಪಾಂಡೆಅವರು ಮಾತನಾಡಿ, ಕಳೆದ ಮೂರು ದಶಕಗಳಿಂದ ತಮ್ಮ ಪ್ರಯತ್ನದಿಂದ ಗೋವಾದಲ್ಲಿ ಇಂದು ತರುಣಿಯರನ್ನು ದೇವದಾಸಿ ಪದ್ಧತಿಯೊಳಗೆ ದೂಡುವ ಅನಿಷ್ಠ ಪದ್ಧತಿ ನಿಂತಿದೆ. ಆದರೆ ವೇಶ್ಯಾವಾಟಿಕೆ ಬೇರೆ ಬೇರೆ ಸ್ವರೂಪಗಳಲ್ಲಿ ಇನ್ನೂ ಬಹಳ ದೊಡ್ಡ ಪ್ರಮಾಣದಲ್ಲಿ ಚಾಲನೆಯಲ್ಲಿದೆ ಹಾಗೂ ಪ್ರತಿನಿತ್ಯ ಹತ್ತಾರು, ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಈ ಪದ್ಧತಿಯಿಂದಾಗಿ ನಡೆಯುತ್ತಿದೆ. ಬಹುದೊಡ್ಡ ಜಾಲದಿಂದ ಇಂದಿಗೂ ಅವ್ಯಾಹತವಾಗಿ ಈ ವೃತ್ತಿಯು ನಡೆಯುತ್ತಿದೆ.ಗೋವಾ ಸರಕಾರದ ಕಾನೂನಿನಿಂದಅಲ್ಲಿ ದೇವದಾಸಿ ಪದ್ಧತಿ ಸಂಪೂರ್ಣ ನಿಂತಿದೆ.ಆದರೆ, ಕರ್ನಾಟಕದಲಿ ನಿರಂತರ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಅರ್ಜ್‌ ಸಂಸ್ಥೆಯ ಕಾರ್ಯಕರ್ತರಾದ ಯಲ್ಲಪ್ಪ ಹರಿಜನ ಮತ್ತು ಶೇಖರ ಅವರು ಮಾತನಾಡಿ, ತಾವುದಲಿತರಾಗಿದ್ದು, ವೇಶ್ಯಾವಾಟಿಕೆಯ ವಾತಾವರಣದಲ್ಲಿಯೇ ಬೆಳೆದು ಬಂದವರು.ವೇಶ್ಯಾವಾಟಿಕೆ ಎಂಬುದು ಧಾರ್ಮಿಕ ಆಚರಣೆಯಾಗಿದ್ದು, ಅದನ್ನು  ಉಲ್ಲಂಘಿಸುವುದಾಗಲಿ ಅಥವಾ ಬಿಟ್ಟು ಬಿಡುವುದಾಗಲಿ ಇಡೀ ಕುಟುಂಬಕ್ಕೆ ಅಪಾಯವನ್ನು ತಂದೊಡ್ಡುತ್ತದೆಎಂದು ನಂಬಿದವರು.ಆದರೆ, ಅರ್ಜ್‌ ಸಂಸ್ಥೆಯ ಪ್ರಭಾವದಿಂದಾಗಿತಾವು ಈ ಅನ್ಯಾಯದ ಪದ್ಧತಿಯಿಂದ ಹೊರಗೆ ಬಂದಿದ್ದು, ಈಗ ಅದರ ವಿರುದ್ಧಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದುತಮ್ಮ ಅನುಭವಗಳನ್ನು ಹಂಚಿಕೊಂಡರು. 

ಮೂಲ ಕೃತಿಯ ಲೇಖಕರಾದ ಮನೋರೋಗತಜ್ಞ ಡಾ.ರೂಪೇಶ ಪಾಟ್ಕರಅವರು ಮಾತನಾಡುತ್ತಾ, ಅನೇಕರು ಸೂಳೇಗಾರಿಕೆ ಎಂಬುದು ಜಗತ್ತಿನ ಅತ್ಯಂತ ಹಳೆಯ ವೃತ್ತಿಎಂದು ವ್ಯಾಖ್ಯಾನಿಸುತ್ತಾರೆ. ಆದರೆ ನಿಜವಾಗಿಯೂ ಇದು ಜಗತ್ತಿನ ಅತ್ಯಂತ ಹಳೆಯ ಶೋಷಣೆಯ ಪದ್ಧತಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.ಅಲ್ಲದೆಯಾವ ಮಹಿಳೆಯೂ ಸ್ವಇಚ್ಛೆಯಿಂದ ಸೂಳೇಗಾರಿಕೆಯನ್ನು ಸ್ವೀಕರಿಸುವುದಿಲ್ಲ. ಬಡತನ ಹಾಗೂ ಇತರ ದೌರ್ಬಲ್ಯಗಳ ಲಾಭ ಪಡೆದುದಲಿತ ಮಹಿಳೆಯರನ್ನು ಈ ದಂಧೆಯಲ್ಲಿ ತೊಡಗಿಸಲಾಗುತ್ತದೆ ಎಂದು ಹೇಳಿದರು. 

ಅನುವಾದಕರಾದ ಡಾ.ಸಂಜೀವ ಕುಲಕರ್ಣಿ ಅವರು ಮಾತನಾಡುತ್ತಾ, ಈ ಕೃತಿಯನ್ನು ತಾವು ಯಾಕೆ ಕನ್ನಡಕ್ಕೆ ಅನುವಾದಿಸಿದೆ ಎಂಬುದನ್ನು ವಿವರಿಸುತ್ತಾ, ದೇವದಾಸಿ ಪದ್ಧತಿಯು ಬಹುಮಟ್ಟಿಗೆ ಕರ್ನಾಟಕದಲ್ಲಿಯೇ ಜೀವಂತವಾಗಿದ್ದು, ಗೋವಾ, ಮುಂಬಯಿ ಮುಂತಾದ ಕಡೆಗಳಲ್ಲಿ ಹದಿಹರೆಯದತರುಣಿಯರನ್ನು ಮುತ್ತುಕಟ್ಟಿ ವೇಶ್ಯಾವಾಟಿಕೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಕೃತಿಯಲ್ಲಿ ಇಂತಹ ತರುಣಿಯರ ಅನೇಕ ಹೃದಯ ವಿದ್ರಾವಕ ಬದುಕಿನ ವಿವರಗಳು ದಾಖಲಾಗಿದೆ. ಧರ್ಮವನ್ನು ಅತ್ಯಂತ ತಪ್ಪಾಗಿ ಅರ್ಥೈಸಿ, ಪುರುಷ ವರ್ಗವು ಮಹಿಳೆಯರನ್ನು ಹೀನಾಯವಾಗಿ ಶೋಷಿಸುತ್ತಿದೆ.ಈ ಪುಸ್ತಕವು ಕನ್ನಡದ ಪ್ರಜ್ಞಾವಂತ ಮನಸ್ಸುಗಳನ್ನು ತಲುಪಿ, ಈ ಅನ್ಯಾಯವನ್ನು ನಿವಾರಣೆ ಮಾಡುವಲ್ಲಿ ಒಂದಿಷ್ಟು ಸಹಾಯ ಮಾಡಬಹುದುಎಂದು ಆಶಿಸಿದರು. 

ಕಾರ್ಯಕಾರಿ ಸಮಿತಿಯ ಸದಸ್ಯರಾದ  ವಿಶ್ವೇಶ್ವರಿ ಹಿರೇಮಠ ಅವರು ಮಾತನಾಡಿ, ಇಪ್ಪತ್ತೈದು ವರ್ಷಗಳ ಹಿಂದೆತಾವು ಮತ್ತು ಬಸವಲಿಂಗಯ್ಯ ಹಿರೇಮಠ ಅವರು ವಿಮೋಚನಾ ಸಂಸ್ಥೆಯ ಜೊತೆ ಅಥಣಿ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ತಿಂಗಳುಗಟ್ಟಲೆ ಕಾಲ ನಾಟಕಗಳನ್ನು ಆಡುತ್ತಾ, ಹಾಡುಗಳನ್ನು ಹೇಳುತ್ತಾ, ದೇವದಾಸಿ ಪದ್ಧತಿಯ ವಿರುದ್ಧ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ತಮ್ಮ ನೆನಪುಗಳನ್ನು ಹಂಚಿಕೊಂಡರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಬೆಳಕು ಸಂಸ್ಥೆಯ ಅಕ್ಕಿವಳಿ ಜಿಲ್ಲೆಯ ಸೆಕ್ಸ್‌ ವರ್ಕರ‌್ಸರ ಸ್ಥಿತಗತಿ ಬಗ್ಗೆ ಮಾತನಾಡಿದರು. 

ಪ್ರಾರಂಭದಲ್ಲಿ ಲಾಲ್ ಪ್ರಾರ್ಥಿಸಿದರು.ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಬಸವಪ್ರಭು ಹೊಸಕೇರಿ, ವೀರಣ್ಣಒಡ್ಡೀನ, ಡಾ.ಜಿನದತ್ತ ಹಡಗಲಿ, ಪ್ರೊ. ನಾಡಗೌಡ, ಶ್ರೀನಿವಾಸ ವಾಡಪ್ಪಿ,  ಎಂ.ಎಂ. ಚಿಕ್ಕಮಠ, ಪ್ರತಿಭಾಕುಲಕರ್ಣಿ, ಸರಸ್ವತಿ ಪೂಜಾರ ಸೇರಿದಂತೆ ಮುಂತಾದವರಿದ್ದರು. 

ಅನೇಕರು ಸೂಳೇಗಾರಿಕೆ ಎಂಬುದು ಜಗತ್ತಿನ ಅತ್ಯಂತ ಹಳೆಯ ವೃತ್ತಿಎಂದು ವ್ಯಾಖ್ಯಾನಿಸುತ್ತಾರೆ.ಆದರೆ ನಿಜವಾಗಿಯೂ ಇದು ಜಗತ್ತಿನ ಅತ್ಯಂತ ಹಳೆಯ ಶೋಷಣೆಯ ಪದ್ಧತಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ. 

ಡಾ. ರೂಪೇಶ ಪಾಟ್ಕರ 

‘ಅರ್ಜ್‌’ದೊಳಗಿನ ದಿನಗಳು ಕೃತಿಯ ಮೂಲ ಲೇಖಕ 

ಧರ್ಮವನ್ನು ಅತ್ಯಂತ ತಪ್ಪಾಗಿ ಅರ್ಥೈಸಿ, ಪುರುಷ ವರ್ಗವು ಮಹಿಳೆಯರನ್ನು ಹೀನಾಯವಾಗಿ ಶೋಷಿಸುತ್ತಿದೆ. ಈ ಪುಸ್ತಕವು ಕನ್ನಡದ ಪ್ರಜ್ಞಾವಂತ ಮನಸ್ಸುಗಳನ್ನು ತಲುಪಿ, ಈ ಅನ್ಯಾಯವನ್ನು ನಿವಾರಣೆ ಮಾಡುವಲ್ಲಿ ಒಂದಿಷ್ಟು ಸಹಾಯ ಮಾಡಬಹುದು 

ಡಾ. ಸಂಜೀವಕುಲಕರ್ಣಿ 

‘ಅರ್ಜ್‌’ದೊಳಗಿನ ದಿನಗಳು ಕೃತಿಯಕನ್ನಡಅನುವಾದಕರು