ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಜಹಾಗೀರದಾರ

ಲೋಕದರ್ಶನವರದಿ

ರಾಣೇಬೆನ್ನೂರು ಜು.13: ಭವಿಷ್ಯದ ಯುವ ಸಮುದಾಯದ ಬದುಕಿಗಾಗಿ ಅವರ ಪರಿಸರ ಸುರಕ್ಷತೆ ಹಿನ್ನೆಲೆಯಲ್ಲಿ ಇಂದಿನಿಂದಲೇ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಕಾಯಾ-ವಾಚಾ-ಮನಸಾ ಕೆಲಸ ನಿರ್ವಹಿಸುವ ಜವಾಬ್ದಾರಿ ಪ್ರತಿಯೊಬ್ಬ ರೋಟರಿ ಸದಸ್ಯರು ವಹಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪಿಡಿಜಿ ರೊ|| ಪಾಣೇಶ ಜಹಾಗೀರದಾರ ಹೇಳಿದರು.  

ಅವರು ಶನಿವಾರ ನಗರದ ರೋಟರಿ ಶಾಲಾ ಆವರಣದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ, ಪರಿಸರ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.  ರೋಟರಿ ಸಂಸ್ಥೆ ತನ್ನ ಉದ್ದೇಶಿತ ಯೋಜನೆಗಳನ್ನು ಪ್ರತಿಯೊಂದು ಯಶಸ್ವಿಗೊಳಿಸಿಕೊಂಡಿದ್ದು ಸಕರ್ಾರಗಳ ಆದೇಶಿತ ಯೋಜನೆಗಳನ್ನು ಪರಿಪೂರ್ಣ ಜಾರಿಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದಾಗಿ ಹೇಳಿದರು.  

ಶಾಲಾ ಆವರಣದಲ್ಲಿ ಅವರು ನೂರಾರು ಸಸಿಗಳನ್ನು ನೆಟ್ಟು ಅಲ್ಲಿನ ಶಿಕ್ಷಕರಿಗೆ ಮತ್ತು ಸಿಬ್ಬಂದಿ ಸಂಸ್ತೆಯ ಸದಸ್ಯರಿಗೆ ಪಾಲನೆ-ಪೋಷಣೆಯ ಹೊಣೆ ಹೊರಬೇಕೆಂದು ಮನವಿ ಮಾಡಿದರು.  

        ಕಾರ್ಯಕ್ರಮದಲ್ಲಿ ಡಾ|| ಬಸವರಾಜ ಕೇಲಗಾರ, ವಿ.ಸಿ ಪಾಟೀಲ, ವಿರೇಶ ಹನಗೋಡಿಮಠ, ವಿರೇಶ ಮೋಟಗಿ, ಉಮೇಶ ಹೊನ್ನಾಳಿ, ಲತಾ ಕೇಲಗಾರ, ರಾಜೇಶ್ವರಿ ಹನಗೋಡಿಮಠ, ಪ್ರತಿಭಾ ಪಟ್ಟಣಶೆಟ್ಟಿ, ಸುಮಾ ಹೊಟ್ಟಿಗೌಡ್ರ, ವಾಲ್ಜಿಭಾಯಿ ಪಟೇಲ, ಗದಿಗೆಪ್ಪ ಹೊಟ್ಟಿಗೌಡ್ರ, ಕೆ.ವಿ. ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.