ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಡಾ. ಆನಂದ್ ಮಹಾರಾಜರು
Environmental protection is our responsibility: Dr. Anand Maharaj
ಯಮಕನಮರಡಿ 23: ಕರ್ನಾಟಕ ಪತ್ರಕರ್ತರ ಸಂಘ ತಾಲೂಕು ಘಟಕ ಹುಕ್ಕೇರಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಹಿಡಕಲ್ ಡ್ಯಾಮ್ ವತಿಯಿಂದ ಮಹಿಳಾ ಕಲ್ಯಾಣ ಸಂಸ್ಥೆ ಆವರಣದಲ್ಲಿ ಸ ನೆಡುವ ಮೂಲಕ ವಿಶ್ವ ಪರಿಸರ ಹಾಗೂ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಹತ್ತರಗಿ ಹರಿ ಮಂದಿರದ ಡಾ.ಆನಂದ್ ಮಾರಾಜರು ಅವರು "ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ "ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಫೆಸರ್ ಪಿ.ಜಿ .ಕೊಣ್ಣೂರ್ ಅವರು ಮಾತನಾಡಿ ಆಧುನಿಕ ಜೀವನಶೈಲಿಯಿಂದ ಮನುಷ್ಯ ಪರಿಸರದ ವಿನಾಶ ಕಡೆಗೆ ಹೋಗುತ್ತಿದ್ದಾನೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸೋಣ. ಮಕ್ಕಳಿಗೆ ಪರಿಸರದ ಕಾಳಜಿ ಕುರಿತು ತಿಳಿಯೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರವೀಂದ್ರ ಜಿಂಡ್ರಾಳಿಯವರು ಪ್ರತಿಯೊಬ್ಬರೂ ಮನೆಗೊಂದು ಮರ ನೆಡುವ ಸಂಕಲ್ಪ ಮಾಡಬೇಕೆಂದು ಹೇಳಿದರು. ಆನಂದ್ ಜರಳಿ. ಮಾಜಿ ಯೋಧರು, ರುಸ್ತುಂಪುರ ಇವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಆನಂದ್ ಮಜನಿ, ದಯಾನಂದ ಅಂಕಲಗಿ, ಮಹಾದೇವ್ ಕೋಳಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಕಲ್ಯಾಣ ಸಂಸ್ಥೆಯ ಸುರೇಖಾ ಪಾಟೀಲ್, ಕಿರಣ್ ಚೌಗಲ ಪ್ರಾಂಶುಪಾಲರೂ ಯರಗಟ್ಟಿ ಕಾಲೇಜು, ವಸತಿ ನಿಲಯದ ಮೇಲ್ವಿಚಾರಕ ಎಲ್. ವಿ. ಮಾಲ್ದಾರ್ ಪತ್ರಕರ್ತರಾದ ಸಂಜು ಮುಲ್ತಾಲಿಕ್ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ನಂದ್ ಕಿಶೋರ್ ಗೌಡರ್, ಖಜಾಂಚಿ ಎನ್ .ಎಂ ಶಿರೂರ್, ಪ್ರಧಾನ ಕಾರ್ಯದರ್ಶಿ ಎ. ವಾಯ್. ಸೋನ್ಯಾಗೋಳ್, ಸಂಘಟನಾ ಕಾರ್ಯದರ್ಶಿ ನೀಲಕಂಠ ಭೂಮಣ್ಣವರ, ಹೊಸಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ಮಾಳಗೋಳ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಗಂಧ ಮೊಕಾಶಿ ನಿರ್ವಹಿಸಿದರೆ ಪ್ರೊ ನೀಲಕಂಠ ಭೂಮಣ್ಣವರ ವಂದಿಸಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 