ಕನ್ನಡಮ್ಮನ ಸೇವೆಗೆ ಸದಾ ಸಿದ್ಧ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಬಿ.ಗೀರೀಶಾನಂದ

ಕನ್ನಡಮ್ಮನ ಸೇವೆಗೆ ಸದಾ ಸಿದ್ಧ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಬಿ.ಗೀರೀಶಾನಂದ Environmental protection is our responsibility: B. Girishananda

ಕೊಪ್ಪಳ 13: ಕನ್ನಡಮ್ಮನ ಸೇವೆಗೆ ಕರವೇ ಸೇನಾನಿಗಳು ಸದಾ ಸಿದ್ಧ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ತಿಳಿಸಿದರು. 

ಅವರು ಬುಧವಾರದಂದು ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮ ಶಾಖೆಯ ಪೂರ್ವಬಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ನಾಡಿನ ಉದ್ದಲಕ್ಕೂ ಲಕ್ಷಾಂತರ ಯುವಕ ಯುವತಿಯರಿಗೆ ಕನ್ನಡದ ದೀಕ್ಷೆ ನೀಡಿ ಕನ್ನಡಮ್ಮ ಸೇವೆಗೆ ಪಣ ತೊಟ್ಟು ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ 26 ವರ್ಷಗಳಿಂದ ಕರವೇ ಕನ್ನಡ ನಾಡು ನುಡಿ ನೆಲ ಜಲ ಗಡಿಯ ವಿಚಾರದಲ್ಲಿ ರಾಜಿ ರಹಿತ ಹೋರಾಟ ಮಾಡುತ್ತಾ ಬಂದಿದೆ.ಈ ಭಾಗದಲ್ಲಿ UKEM AGRE INFRA LTD ಕಂಪನಿ ನೂರಾರು ಎಕರೆ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ನೆರವಿನಿಂದ ರೈತರಿಂದ ಪುಸಲಾಯಿಸಿ ಪಡೆದುಕೊಂಡು 500 ಟಿಸಿಡಿ ಸಕ್ಕರೆ, 400 ಕೆಎಲ್‌ಪಿಡಿ ಎಥೆನಾಲ್, ಹಾಗೂ 300 ಮೆ.ವ್ಯಾ. ಕ್ಯೂ ಜೆನ್ ಸ್ಥಾವರ ನಿರ್ಮಾಣ ಮಾಡಲು ಹೊರಟಿರುವುದನ್ನು ಬಲವಾಗಿ ಖಂಡಿಸಿದ ಅವರು ಈ ಸ್ಥಾವರ ಸ್ಥಾಪನೆಯಿಂದ ಪರಿಸರ, ಅರಣ್ಯ, ಹವಮಾನ ಹಾಗೂ ಪ್ರಾಣಿ ಪಕ್ಷಿ ಮತ್ತು ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಲಿದ್ದು, ಸುತ್ತಮುತ್ತಲಿರುವ ಕೃಷಿ ಜಮೀನುಗಳಲ್ಲಿ ಬೆಳೆ ಬೆಳೆಯಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಜನಜೀವನಕ್ಕೆ ಸಾಂಕ್ರಾಮಿಕ ರೋಗ ಹರಡುವ ಬೀತಿ ಇದ್ದು, ಈಗಾಗಲೇ ಸಾಕಷ್ಷು ಕಾರ್ಖಾನೆಗಳ ಸ್ಥಾಪನೆಯಿಂದ ಈ ಭಾಗದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ನವಜಾತ ಶಿಶುಗಳಲ್ಲಿ ದೈಹಿಕ ವಿಕಲತೆಗಳ ಪ್ರಮಾಣ ಹೆಚ್ಚುತ್ತಿದೆ. ದೇವರು ಸೃಷ್ಟಿಸಿದ ಈ ಅದ್ಭುತ ಪರಿಸರವನ್ನು ಕೈಗಾರಿಕರಣದಿಂದ ಕಲುಷಿತಗೊಳಿಸುವುದು ಖೇಧಕರವಾಗಿದೆ. ಪರಿಸರವು ನಮ್ಮ ಉಳಿವು ಮತ್ತು ಭೂಮಿಯ ಅಸ್ವಿತ್ವದ ಆಧಾರವಾಗಿದೆ. ಮುಂಬರುವ ದಿನಗಳಲ್ಲಿ ಕರವೇಯು ಈ ಭಾಗದ ಹಿರಿಯ ಮುಖಂಡರ ಸಹಕಾರದಿಂದ ಪರಿಸರ ಹಾಗೂ ರೈತರ ಹಿತಕಾಯಲು ಈ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಸಂಘಟಿತ ಹೋರಾಟವನ್ನು ರೂಪಿಸಲಿದೆ ಎಂದರು.ಸಭೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ ಮಾತನಾಡಿದರು.  

ಗ್ರಾಮ ಶಾಖೆಯ ಪೂರ್ವಬಾವಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ವರ ಹಿರೇಮಠ, ಉಪಾಧ್ಯಕ್ಷರಾಗಿ ತಿಮ್ಮರಡ್ಡಿ ಬಿಸರಳ್ಳಿ, ಮಲ್ಲಪ್ಪ ಕುಕನೂರು, ಪ್ರಧಾನ ಕಾರ್ಯದರ್ಶಿಯಾಗಿ ಶರಣಗೌಡ ಪೊ. ಪಾಟೀಲ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಕಮ್ಮಾರ, ಹನುಮಂತ ಹಟಮಾರಿ, ಕಾರ್ಯದರ್ಶಿಯಾಗಿ ಕಲ್ಮೇಶ ಹೊಸೂರು, ಸಂಕೇತ ಪಾಟೀಲ, ಖಜಾಂಚಿಯಾಗಿ ಪ್ರಕಾಶ ತೋಟದ ಅವರು ನೇಮಕವಾದರು.ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ನಗರಾಧ್ಯಕ್ಷ ಪ್ರಫುಲ್‌ಕುಮಾರ ಪಾಟೀಲ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ, ಉಪನ್ಯಾಸಕರಾದ ದೇವೆಂದ್ರಸ್ವಾಮಿ ಎಕದಂಡಿಗಿಮಠ, ಗ್ರಾಮದ ಹಿರಿಯ ಮುಖಂಡರಾದ ಶೇಖರಯ್ಯ ಹಿರೇಮಠ, ಸೋಮಯ್ಯ ಹೊಸೂರು, ಪ್ರಶಾಂತಗೌಡ ಪಾಟೀಲ, ಮಂಜುನಾಥ ಡಂಬ್ರಹಳ್ಳಿ, ಗವಿಸಿದ್ದನಗೌಡ ಮಾಲಿಪಾಟೀಲ, ತೋಟಯ್ಯ ಹಿರೇಮಠ, ಮಲ್ಲಪ್ಪರಾಜ ಹಡಪದ, ವಿಶ್ವ ಹಿರೇಮಠ, ಮಹೇಶ ಹಡಪದ, ಹರ್ಷ ನಾಯಕ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.