ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ: ಮರಲಿಂಗನ್ನವರ
Environmental protection is essential for the survival of humanity: Maralingan
ಮೂಡಲಗಿ 27: ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆಯ ಅಗತ್ಯವಿದೆ, ಪ್ರತಿಯೊಬ್ಬರು ಅರಣ್ಯ ಸಂರಕ್ಷಿಸುವುದರ ಜೊತೆಗೆ ಮತ್ತಷ್ಟು ಗಿಡಮರಗಳನ್ನ ಬೆಳೆಸಬೇಕು, ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳಬೇಕು, ಮಿತ ಮತ್ತು ಹೊಗೆ ರಹಿತ ವಾಹನ ಮತ್ತು ಯಂತ್ರಗಳನ್ನು ಬಳಸಬೇಕು ಮತ್ತು ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸುವುದಲ್ಲದೆ ವಾಹನ ನಿರ್ವಹಣೆಯ ಪರವಾಣಿಗೆ ಪಡೆದುಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಗೋಕಾಕ- ಪ್ರಾದೇಶಿಕ ಕಛೇರಿಯ ಹಿರಿಯ ಮೋಟಾರು ವಾಹನ ತನಿಕಾಧಿಕಾರಿ(ಎ.ಆರ್.ಟಿ.ಓ) ಎಸ್ ಆರ್.ಮರಲಿಂಗನ್ನವರ ಹೇಳಿದರು.
ಅವರು ಬುಧವಾರದಂದು ಪಟ್ಟಣದ ಚೈತನ್ಯ ಸೋಷಿಯಲ್ ವೆಲ್ಫೇರ ಸೊಸಾಯಿಟಿ ಚೈತನ್ಯ ಐಟಿಐ ಕೇಂದ್ರದಲ್ಲಿ ಸಾರಿಗೆ ಇಲಾಖೆ ವತಿಯಿಂದ ಕೈಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರಿಗೆ ಇಲಾಖಾ ಕಛೇರಿಯ ಮುಜುಮಿಲ್ ಪಿರಜಾದೆ, ಚೈತನ್ಯ ಐಟಿಐ ಕೇಂದ್ರದ ಪ್ರಾಚಾರ್ಯ ಎಸ್.ಬಿ.ಕುಳ್ಳೋಳಿ, ಟಿ. ಆರ್, ಝಾರೆ, ಜೆ.ಎಸ್. ಸಮಾಜೆ, ಆರ್.ವಾಯ್.ನಾಯಿಕ, ಎಸ್.ಎಲ್. ಪೂಜೇರಿ, ದೀಪಾ ಕಲ್ಯಾಣಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 