ಪರಿಸರ ಮಾಲಿನ್ಯದಿಂದ ನೆಮ್ಮದಿಯ ಬದುಕು ದೂರ -ಡಾ.ಆರ್.ರಾಮಕೃಷ್ಣರೆಡ್ಡಿ
Environmental pollution is a barrier to a peaceful life - Dr. R. Ramakrishna Reddy
ಬಳ್ಳಾರಿ 23 : ಜಾಗತಿಕ ಹವಾಮಾನದಲ್ಲಿ ಅನೇಕ ಬಗೆಯ ಏರುಪೇರುಗಳಾಗುತ್ತಿವೆ. ಹೆಚ್ಚುತ್ತಿರುವ ಉಷ್ಣತೆ, ಪರಿಸರ ಮಾಲಿನ್ಯದಿಂದಾಗಿ ನೆಮ್ಮದಿಯ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಂತಪುರಂನ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಜೂರು ರಾಮಕೃಷ್ಣರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿಯಲ್ಲಿ ಆಯೋಜಿಸಿದ್ದ ಒಂದು ದಿನದ “ಹವಾಮಾನ ಬದಲಾವಣೆ ಮತ್ತು ಪರಿಸರದ ಸುಸ್ಥಿರತೆ ರಾಷ್ಟ್ರಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನ ಮೂಲ ಉಸಿರಾಟದ ಗಾಳಿ ನಮ್ಮಿಂದ ದೂರವಾಗುತ್ತಿದೆ. ನಮ್ಮ ಭೂಮಿಯಲ್ಲಿ ವ್ಯವಹಾರಿಕ ತಳಿ ಬೆಳೆಯುವುದನ್ನು ಕಡಿಮೆ ಮಾಡಿ ಆಹಾರದ ತಳಿಗಳ ಕಡೆ ಗಮನ ಹರಿಸಬೇಕಾಗಿದೆ. ನೆಲದ ಫಲವತ್ತತೆಯನ್ನು ಹೆಚ್ಚಿಸುವ ಸಸ್ಯ ಶ್ಯಾಮಲೆ, ಪರಿಸರ ಸುಸ್ಥಿರತೆಯ ಕಡೆ ನಾವು ತೀವ್ರವಾಗಿ ಹೆಜ್ಜೆಗಳನ್ನು ಇಡಬೇಕಿದೆ ಎಂದರು.
ಕಲುಷಿತ ಗಾಳಿಯನ್ನು ಸೇವಿಸುವುದರಿಂದ ಶ್ವಾಸಕೋಶ, ಚರ್ಮರೋಗ, ಅಸ್ತಮಾದಂತಹ ಕಾಯಿಲೆಗಳಿಗೆ ತುತ್ತಾಗಿ ತೊಂದರೆಗೆ ಒಳಗಾಗುತ್ತಿದ್ದೇವೆ. ಪ್ಲಾಸ್ಟಿಕ್ ವಸ್ತು, ವಾಹನಗಳ ಬಳಕೆ ಕಡಿಮೆ ಮಾಡಿ, ಅರಣ್ಯಗಳನ್ನು ಉಳಿಸಿಕೊಂಡರೆ ನೆಮ್ಮದಿಯ ಬದುಕು ಸಾಧ್ಯ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಿ.ಪ್ರಹ್ಲಾದ ಚೌದ್ರಿ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವ ಪ್ರಜ್ಞೆಯನ್ನು ವರ್ತಮಾನದಲ್ಲಿ ಬೆಳೆಸಿಕೊಳ್ಳಬೇಕು. ನಾಳಿನ ದಿನಗಳ ಬಗೆಗೆ ಎಚ್ಚರವಿಲ್ಲದಿದ್ದರೆ ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದರು.
ವೇದಿಕೆಯ ಮೇಲೆ ಸಂಶೋಧನಾ ವಿಜ್ಞಾನಿ ಡಾ.ಜಿ.ಬಾಲಕೃಷ್ಣ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್ ಮಂಜುನಾಥ್, ರೂಸಾ ಸಂಚಾಲಕ ಡಾ.ಕುಂಚಂ ನರಸಿಂಹಲು ಇದ್ದರು. ಈ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕರಾದ ಡಾ.ದೊಡ್ಡ ಬಸವರಾಜಟಿ, ಡಾ.ಪಂಚಾಕ್ಷರಿ, ಡಾ.ಶಾಲಿನಿ, ಡಾ.ಶಿಲ್ಪಾ ಕುಲಕರ್ಣಿ, ಡಾ.ರಮಾಬಾಯಿ, ಡಾ.ಗುರುಬಸಪ್ಪ, ಡಾ.ದಸ್ತಗೀರಸಾಬ್ ದಿನ್ನಿ, ಡಾ.ಶೋಭಾರಾಣಿ, ರೇಖಾ ಅಣ್ಣಿಗೇರಿ, ಡಾ.ಗೀತಾ ಬಾಬುಸಿಂಗ್, ಗಾಯತ್ರಿ, ಚನ್ನಮ್ಮ ಕಣವಿ, ಶೋಭಾ ಎಚ್,ವಾಣಿ ಜಿ, ಕೀರ್ತಿ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ವಿವಿಧ ಗೋಷ್ಠಿಗಳು ನಡೆದವು. ಗೋಷ್ಠಿಗಳಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು, ಸಂಶೋಧಕರು ಭಾಗವಹಿಸಿ ತಮ್ಮ ಪ್ರೆಬಂಧಗಳನ್ನು ಮಂಡಿಸಿದ್ದು ವಿಶೇಷವಾಗಿತ್ತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 