ಭಯೋತ್ಪಾದನೆ ವ್ಯಾಪಕದಿಂದ ಇಡೀ ಕೀನ್ಯಾ ಅಸ್ಥಿರ: ಗುಟೇರೆಸ್ ಕಳವಳ

ವಿಶ್ವಸಂಸ್ಥೆ:  ಭಯೋತ್ಪಾದನೆ ಮತ್ತು ಸಂಘರ್ಷಗಳಿಂದ ಕೀನ್ಯಾದ ಇಡೀ ಪ್ರಾಂತ್ಯ ಅಸ್ಥಿರಗೊಳ್ಳುತ್ತಿದ್ದು, ಕುಟುಂಬಗಳು ಮತ್ತು ಸಮುದಾಯಗಳು ನಲುಗುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದಶರ್ಿ ಅಂಟೊನಿಯೋ ಗುಟೇರಸ್ ಕಳವಳ ವ್ಯಕ್ತಪಡಿಸಿದ್ದಾರೆ.  

     ನೈರೋಬಿಯಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕುರಿತ ಸಮಾವೇಶದ ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಗುಟೆರೆಸ್, ಕಳೆದ ಜನವರಿಯಲ್ಲಿ ಕೀನ್ಯಾ ರಾಜಧಾನಿಯಾದ ಇಲ್ಲಿ ಹೋಟೆಲ್ ಸಂಕೀರ್ಣವೊಂದರ ಮೇಲೆ ದಾಳಿಕೋರರು ವಶಕ್ಕೆ ತೆಗೆದುಕೊಂಡ ಘಟನೆಯಲ್ಲಿ 21 ಮಂದಿ  ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. 

       ಪಶ್ಚಿಮ ಆಫ್ರಿಕಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಗಂಭೀರ ವಿಷಯವಾಗಿದೆ ಎಂದ ಗುಟೇರಸ್, ಚಾಡ್ , ಮಧ್ಯ ಮಾಲಿ, ಬುಕರ್ಿನಾ  ಫಾಸೊ ಮತ್ತು ನೈಜರ್ ದೇಶಗಳಲ್ಲಿ  ಸಶಸ್ತ್ರ ಉಗ್ರರು ನಡೆಸುತ್ತಿರುವ ದಾಳಿಗಳಿಂದ ಜನರು ಭಯಭೀತರಾಗಿದ್ದು, ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.  ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಫ್ರಿಕಾದ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ  ಸಮುದಾಯ  ಬೆಂಬಲ ತುತರ್ು ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. 'ಆಫ್ರಿಕಾದ  ಜನರು "ಭಯೋತ್ಪಾದನೆ ಮತ್ತು ಈ ಪಿಡುಗಿನ ಹರಡುವಿಕೆ ಹಾಗೂ ಹಿಂಸಾಚಾರ ಉಗ್ರವಾದ ಹರಡುವಿಕೆ ಎದುರಿಸುವ ಪ್ರಯತ್ನಗಳಲ್ಲಿ  ಮುಂಚೂಣಿಯಲ್ಲಿದ್ದಾರೆ.'ಎಂದು ಗುಟೇರಸ್ ಹೇಳಿದ್ದಾರೆ.