ಮನಸೂರೆಗೊಂಡ ಯುವ ಸೌರಭ ಕಾರ್ಯಕ್ರಮ
Enthusiastic young Saurabha program
ಮನಸೂರೆಗೊಂಡ ಯುವ ಸೌರಭ ಕಾರ್ಯಕ್ರಮ
ವಿಜಯಪುರ 29: ಯುವಕರಲ್ಲಿ ಅಡಗಿರುವ ಕಲಾ ಪ್ರತಿಭೆಯ ಅನಾವರಣಕ್ಕೆ ಈ ಕಾರ್ಯಕ್ರಮ ಅತ್ಯಂತ ಸೂಕ್ತವಾಗಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸೂಪ್ತ ಪ್ರತಿಭೆ ಬೆಳಕಿಗೆ ಬರಲು ಪೂರಕವಾಗಿ ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯಗಳಲ್ಲಿ ಬಹುಮುಖ್ಯವಾಗಿದೆ. ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರಲ್ಲಿನ ಸೃಜನಾತ್ಮಕ ಕಲೆಗೆ ಪ್ರೋತ್ಸಾಹ ದೊರೆತು ಕಲಾ ಪ್ರೌಢಿಮೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ತಿಕೋಟಾ ತಹಶೀಲ್ದಾರ ಸುರೇಶ ಚವಲರ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಮೂಲಕ ತಿಕೋಟಾದ ಬಿ.ಎಲ್.ಡಿ.ಈ ಸಂಸ್ಥೆಯ ಎ.ಬಿ.ಜತ್ತಿ ಪ.ಪೂ. ಕಾಲೇಜು ಆವರಣದಲ್ಲಿ ನಡೆದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಕಲೆ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಕೋಟಾದ ಎ.ಬಿ. ಜತ್ತಿಪ.ಪೂ. ಕಾಲೇಜಿನ ಪ್ರಾಚಾರ್ಯ ಸಿ.ಬಿ.ಪಾಟೀಲ ಇವರು ಶಾಲಾ ಕಾಲೇಜುಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.
ಸುಗಮ ಸಂಗೀತವನ್ನು ಚೈತ್ರಾ ಡಂಬಳ ಹಾಗೂ ತಂಡ, ಮುದ್ದೇಬಿಹಾಳ, ಜಾನಪದ ಗೀತೆಗಳ ಗಾಯನವನ್ನು ಭಂಟನೂರಿನ ಕಿರಣ ಕುಮಾರ ಪೂಜಾರಿ ಹಾಗೂ ತಂಡವರು, ಸಮೂಹ ನೃತ್ಯವನ್ನು ದೀಕ್ಷಾ ಭೀಸೆ ಹಾಗೂ ಸಂಗಡಿಗರು, ಗೊಂಬೆ ಕುಣಿತ ಪ್ರವೀಣ ಕಸ್ತೂರಿ ಗೋಳ ಹಾಗೂ ಸಂಗಡಿಗರು, ಸಾರವಾಡ ಕರಡಿ ಮಜಲು ಸಿದ್ದಪ್ಪ ಗಿರಿಮಲ್ಲಪ್ಪ ಹೂಗಾರ ಹಾಗೂ ಸಂಗಡಿಗರು ಮತ್ತು ನಿಜಬಾಯಿ ಹೋಸಾಳಿ ಮತ್ತು ಸಂಗಡಿಗರಿಂದ ಅರ್ಥಪೂರ್ಣ ಶಿಕ್ಷಣವೇ ಸಂಪತ್ತು ನಾಟಕ ಪ್ರದರ್ಶನವು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು. ದೀಕ್ಷಾ ಭೀಸೆ ಮತ್ತು ತಂಡದವರ ಮಹಿಷಾಸುರ ಮರ್ಧಿನಿ, ಪುಣ್ಯಕೋಟಿ, ರೇಣುಕಾ ಯಲ್ಲಮ್ಮದೇವಿಯ ಕುರಿತ ಸಮೂಹ ನೃತ್ಯವ ಕಾರ್ಯಕ್ರಮದ ವೈಭವ ಹೆಚ್ಚಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಇವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಬಿ.ಎಲ್.ಡಿ.ಈ ನಸಿಂರ್ಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ಧಾಪುರ, ಪ್ರೊ. ಪಿ.ಎಸ್.ತೋಳನೂರ, ಡಿ.ಪಿ.ಬೆಳ್ಳಗ್ಗಿ, ಶಿಲ್ಪಾ ಪಾಟೀಲ ಸೇರಿದಂತೆ ಕಲಾವಿದರು ಕಲಾಸಕ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 