ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ: ಯಶವಂತರಾಯಗೌಡ ಪಾಟೀಲ

ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ: ಯಶವಂತರಾಯಗೌಡ ಪಾಟೀಲ Ensure that there is no water problem: Yashwant Rayagouda Patil

                  ಇಂಡಿ 19: ಮುಂಬರುವ ಬೇಸಿಗೆಯಲ್ಲಿ ಇಂಡಿ ತಾಲ್ಲೂಕಿನ್ಯಾದಂತ  ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಅವರು ಇಂಡಿ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ 2025-26ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರೀಶೀಲನಾ (ಕೆಡಿಪಿ)ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಈ ಬಾರಿ ಎಲ್ಲೆಡೆ ಉತ್ತಮ ಮಳೆ ಆಗಿದೆ. ಸಾಕಷ್ಟು ನೀರು ಇದೆ ಆದರೆ ಈ ಬಾರಿ ಬೇಸಿಗೆಯಲ್ಲಿ ಜನರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಬೇಕು.

                ನೀರು ಇದ್ದರೂ ಕೂಡಾ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಆಗುವುದಿಲ್ಲ ಎಂದರೆ ಹೇಗೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕರು ತಾಲ್ಲೂಕಿನಾದ್ಯಂತ ಬಂದ ಆದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹಾಗೂ ಜಲ ಜೀವನ ಮಿಷನ್ ಯೋಜನೆ ಹಾಗೂ ಜಲಧಾರೆ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಈ ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಇಲಾಖೆಯ ಆಹಾರ ಇಲಾಖೆ ಪುರಸಭೆ ಹಾಗೂ ನಗರ ಸಭೆ ಇಲಾಖೆ, ನೀರಾವರಿ ಇಲಾಖೆ ಸಾರಿಗೆ ಇಲಾಖೆ ಕೃಷಿ ಇಲಾಖೆ ಆರೋಗ್ಯ ಇಲಾಖೆ ಪಶು ಸಂಗೋಪನಾ ಇಲಾಖೆ ಪೋಲಿಸ್ ಇಲಾಖೆ ಹಾಗೂ ಕೆಪಿಟಿಸಿಎಲ್ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರೀಶೀಲನೆ ನಡೆಸಿದರು.

                 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪ್ರಕಾಶ್ ವಡ್ಡರ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇಂಡಿ ತಶೀಲದಾರ ಬಿ ಎಸ್ ಕಡಕಬಾವಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ಇಂಡಿ ಡಿ ವಾಯ್ ಎಸ್ ಪಿ ಕೀರಣ ಕಟ್ಟಿಮನಿ ಕೆಡಿಪಿ ನಾಮನೀರ್ದೆಶಿತ ಸದಸ್ಯರಾದ ಬಾಬುಸಾಹುಕಾರ ಮೇತ್ರಿ ಗುರಣಗೌಡ ಪಾಟೀಲ ಅಲಿಯಾಸ್ ಬೋರಾಮಣಿ ಇಂಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷರಾದ ಪ್ರಶಾಂತ ಕಾಳೆ ಹಾಗೂ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ್ ರಾಠೋಡ, ಕೃಷಿ ಇಲಾಖೆ ಸಾಹಯಕ ನಿರ್ದೇಶಕರಾದ ಮಾದೇವಪ್ಪ ಏವೂರ ತೋಟಗಾರಿಕೆ ಇಲಾಖೆ ಸಾಹಯಕ ನಿರ್ದೇಶಕರಾದ ಎಚ್ ಎಸ್ ಪಾಟೀಲ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ  ಗೀತಾ ಗುತ್ತರಗಿಮಠ ಸಮಾಜ ಕಲ್ಯಾಣ ಇಲಾಖೆಯ ಸಾಹಯಕ ನಿರ್ದೇಶಕರಾದ ರಾಹುಲ್ ಜಾಧವ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.