ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ
Enroll children in government schools
ಪಾಲಬಾವಿ 05 : ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಅನೇಕ ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಅನುಭವಿ ನುರಿತ ಶಿಕ್ಷಕರಿಂದ ಪಾಠ ಬೋಧನೆ, ಉಚಿತ ಸಮವಸ್ತ್ರ, ಶೂ ಸಾಕ್ಸ್, ಪಠ್ಯಪುಸ್ತಕ, ರುಚಿಯಾದ ಮಧ್ಯಾಹ್ನದ ಬಿಸಿಯೂಟ, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರಕಾರ ಮತ್ತು ಇಲಾಖೆಯು ಕೊಡುತ್ತಿದೆ. ಸಾರ್ವಜನಿಕರು, ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಸಿಆರ್ಪಿ ರಮೇಶ ತೇಲಿ ಹೇಳಿದರು. ಅವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 1ರಂದು ಸನ್.2026 -27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೂ ಹಾಕುವ ಮೂಲಕ ಶೈಕ್ಷಣಿಕ ವರ್ಷಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಡಿಕೊಂಡು ಬರಮಾಡಿಕೊಂಡು, ನಂತರ ನಡೆದ ಸಭೆಯಲ್ಲಿ ಮಾತನಾಡಿದರು.
ವೇದಿಕೆ ಮೇಲೆ ಹಿರಿಯರಾದ ನಿವೃತ್ತ ಶಿಕ್ಷಕ ಚಂದ್ರಯ್ಯ ಹಿರೇಮಠ, ನಿವೃತ್ತ ಹಿರಿಯ ಶಿಕ್ಷಕ ಶ್ರೀಕಾಂತ ಭಜಂತ್ರಿ, ಎಸ್ಡಿಎಂಸಿ ಅಧ್ಯಕ್ಷ ಕಾಡಪ್ಪ ಗೋಡಿ, ಉಪಾಧ್ಯಕ್ಷೆ ಶಬಾಬಿ ಬಿರಾದರ, ಎಸ್ಡಿಎಂಸಿ ಸದಸ್ಯರಾದ ಮಹಾಂತೇಶ ಹಿರೇಮಠ, ಧ್ಯಾನಪ್ಪ ಮಾದರ, ಬರಮಪ್ಪ ಮಾದರ, ಮಡಿವಾಳಪ್ಪ ಗೋಡಿ, ಮಹಿಳಾ ಸದಸ್ಯರಾದ ಯಲ್ಲವ್ವ ನಾವಿ, ಯಮನವ್ವ ಮೆಟಗಾರ, ಗಿರಿಜಾ ತಳವಾರ, ಮಹಾನಂದ ಖಾನಗೌಡರ, ಕಮಲಾ ತಳವಾರ, ಕುಲಸಮಾ ಮಿರ್ಜಿ, ಮಾಲಾಶ್ರೀ ಮಾಂಗ, ಶಿಕ್ಷಣ ಪ್ರೇಮಿಗಳಾದ ಗಿರೆಪ್ಪ ಬಳಿಗಾರ, ಮುತ್ತಪ್ಪ ಗೋಲಬಾವಿ, ಚನ್ನಪ್ಪ ಬಳಿಗಾರ, ಹುಲೆಪ್ಪ ತೇಗೂರ, ಕಲ್ಲಪ್ಪ ತಳವಾರ, ಸಂಜು ಸೊನ್ನದ, ಶಿಕ್ಷಕ ಸಿಬ್ಬಂದಿ ಟಿ.ಜಿ.ಮಾಗಿ, ಎಸ್.ವಿ.ಹಿಡಕಲ್ಲ, ಬಿ.ಎಸ್.ಸವದತ್ತಿ, ಮಹೇಶ ಬಂಗಿ,ಎನ್.ಬಿ.ಹುದ್ದಾರ ಇತರರು ಇದ್ದರು. ಶಿಕ್ಷಕ ಎಸ್.ಬಿ. ತಾಂಶಿ ಸ್ವಾಗತಿಸಿದರು ಎಸ್.ಬಿ.ಹಿಡಕಲ ನಿರೂಪಿಸಿದರು. ಬಿ.ಎಂ.ಅಳ್ಳಿಗಿಡದ ವಂದಿಸಿದರು.ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುತ್ತಿರುವ ಸಿಆರ್ಿ ರಮೇಶ ತೇಲಿ, ಎಸ್ಡಿಎಂಸಿ ಅಧ್ಯಕ್ಷ ಕಾಡಪ್ಪ ಗೋಡಿ, ಚಂದ್ರಯ್ಯ ಹಿರೇಮಠ ಶಬಾಬಿ ಮುಜಾವರ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 