ನಿಯಮಿತ ಯೋಗ ಮತ್ತು ಧ್ಯಾನದಿಂದ ಆರೋಗ್ಯವನ್ನು ಸಮೃದ್ಧಗೊಳಿಸಿಕೊಳ್ಳಿ-ಶ್ರೀ ನಿರಂಜನ ಮಹಾಸ್ವಾಮಿಗಳು

ನಿಯಮಿತ ಯೋಗ ಮತ್ತು ಧ್ಯಾನದಿಂದ ಆರೋಗ್ಯವನ್ನು ಸಮೃದ್ಧಗೊಳಿಸಿಕೊಳ್ಳಿ-ಶ್ರೀ ನಿರಂಜನ ಮಹಾಸ್ವಾಮಿಗಳು Enrich your health with regular yoga and meditation - Sri Niranjan Mahaswamy

ಲೋಕದರ್ಶನ ವರದಿ 

ಬೆಳಗಾವಿ 05 :  ನಿಯಮಿತ ಯೋಗ ಮತ್ತು ಧ್ಯಾನದಿಂದ ಆರೋಗ್ಯವನ್ನು ಸಮೃದ್ಧಗೊಳಿಸಿಕೊಂಡು ಅತ್ಯುತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹಿಮಾಲಯದ ಖ್ಯಾತ ಯೋಗ ಸಾಧಕರಾದ ನಿರಂಜನ ಮಹಾಸ್ವಾಮಿಗಳು ಹೇಳಿದರು. ಅವರಿಂದು ನಾಗನೂರು  ರುದ್ರಾಕ್ಷಿ ಮಠದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೆಳಗಾವಿಯಲ್ಲಿ ಇದೇ  ಜೂನ್ 5 ರಿಂದ  21 ರ ವರೆಗೆ ಹಿಮಾಲಯನ್ ಧ್ಯಾನ ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ಇಂದು ಬೆಳಿಗ್ಗೆ 5-30 ಕ್ಕೆ ಆರಂಭವಾಗಿ   ಯೋಗ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು.  

 ಸಂಜೆ  ಯೋಗ, ಧ್ಯಾನ ಕುರಿತು ಪ್ರಾತ್ಯಕ್ಷಿಕೆ ಹಾಗೂ ಆಧ್ಯಾತ್ಮಿಕ ಅನುಭಾವದ ಪ್ರವಚನ ಅವರು ನೀಡಿದರು.  ಕಾರ್ಯಕ್ರಮದ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರು ಆಶೀರ್ವಚನ ನೀಡಿ ಇಂತಹ ಅಪರೂಪದ ಶಿಬಿರದ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಹಿಸಿದ್ದರು.ಜಾಗತಿಕ ಲಿಂಗಾಯಿತಮ್ಮ ಸಭೆಯ ಅಧ್ಯಕ್ಷ ಬಸವರಾಜ್ ರೊಟ್ಟಿ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಉಪಸ್ಥಿತರಿದ್ದರು.