ಮಾನಸಿಕ ಖಿನ್ನತೆಗೆ ಇಂಜಿನಿಯರ್ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಇಂಜಿನಿಯರ್ ಆತ್ಮಹತ್ಯೆ  Engineer commits suicide due to mental depression

ಲೋಕದರ್ಶನ ವರದಿ 

ದೇವರಹಿಪ್ಪರಗಿ  05: ಕೆಲಸ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಗೇರಿ ಮೆಟ್ರೊ ನೇರಳೆ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಲೂಕಿನ ಹರನಾಳ ಗ್ರಾಮದ ನಿವೃತ್ತ ಪ್ರೌಢಶಾಲೆಯ ಶಿಕ್ಷಕರಾದ ನಿಂಗನಗೌಡ.ಎಸ್‌. ಪಾಟೀಲ ಅವರ ಕಿರಿಯ ಮಗನಾದ ಶಾಂತನಗೌಡ ನಿಂಗನಗೌಡ ಪಾಟೀಲ(38) ಎಂದು ಗುರುತಿಸಲಾಗಿದ್ದು, ಮೃತರಿಗೆ ಪತ್ನಿ ಹಾಗೂ ಒಬ್ಬಳು ಮಗಳು ಇದ್ದಳು ಒಂದು ತಿಳಿದು ಬಂದಿದೆ.ಧಾರವಾಡದ ಎನ್‌.ಟಿ.ಟಿ.ಎಫ್ ಇಂಜಿನಿಯರಿಂಗ್ ಮುಗಿಸಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 

ಕೊವೀಡ್‌-19 ಸಮಯದಲ್ಲಿ ಮೃತರ ತಾಯಿಯವರು ತೀರಿಕೊಂಡಾಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.ನಂತರ ಹಲವು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ತಿಂಗಳದ ಹಿಂದೆ ಗ್ರಾಮಕ್ಕೆ ಕುಟುಂಬದ ಜೊತೆ ಬಂದು ಎಲ್ಲರ ಜೊತೆ ಬೆರೆತು ಹಸನ್ಮುಖಿಯಾಗಿದ್ದರು, ಮತ್ತೆ ಬೆಂಗಳೂರಿಗೆ ಹೋಗಿ ಕೆಲಸ ಹುಡುಕಾಟದಲ್ಲಿದ್ದರು. ಮನೆಯಲ್ಲಿಯೇ ಇದ್ದು, ಕೆಲ ದಿನಗಳಿಂದ ಯಾರ ಜೊತೆಗೂ ಹೆಚ್ಚು ಮಾತನಾಡದೆ ಒಬ್ಬಂಟಿಯಾಗಿರುತ್ತಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಿಗ್ಗೆ ಮೃತರ ಶರೀರವನ್ನು ಹರನಾಳ ಗ್ರಾಮಕ್ಕೆ ತರಲಾಗುತ್ತಿದ್ದು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.