ಬೆಂಗಳೂರು, ಜ 27, ನಗರದ ಕುಮಾರಸ್ವಾಮಿ ಲೇಔಟ್ ನ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಸುಕೇಶ್ (25) ವಿರುದ್ಧ ಉಚ್ಛ ನ್ಯಾಯಾಲಯವು ಗೂಂಡಾ ಕಾಯ್ದೆ ಜಾರಿಗೊಳಿಸಿದೆ.ರೌಡಿ ಸುಕೇಸ್ ವಿರುದ್ಧ ದೊಂಬಿ, ಕೊಲೆಯತ್ನ, ಮಾರಣಾಂತಿಕ ಹಲ್ಲೆ, ಅಪಹರಣ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತ್ತಾದರೂ, ಜಾಮೀನಿನ ಮೇಲೆ ಹೊರಬಂದ ಈತ ಮತ್ತದೇ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.ಈತನ ವಿರುದ್ಧ ಒಟ್ಟು 9 ವಿವಿಧ ಪ್ರಕರಣಗಳು ದಾಖಲಾಗಿದ್ದವು. ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರ ನೆಮ್ಮದಿಗೆ ಭಂಗತರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಸೆಪಟ್ ಅವರು ಆತನ ವಿರುದ್ಧ ಎಲ್ಲಾ ಪ್ರಕರಣದ ದಾಖಲಾತಿಗಳನ್ನು ಕ್ರೋಢಿಕರಿಸಿ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿ ಎದುರು ತಮ್ಮ ವಾದ ಮಂಡಿಸಿದ್ದರು.ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ ರೌಡಿ ಸುಕೇಸ್ ವಿರುದ್ಧ ಗುಂಡಾ ಕಾಯ್ದೆ ಜಾರಿಗೊಳಿಸಿ, ಒಂದು ವರ್ಷಗಳವರೆಗೆ ಬಂಧನ ಮಾಡಿ ಆದೇಶ ಹೊರಡಿಸಿದೆ.