ಹ್ಯೂಸ್ಟನ್, ಸೆ 22 ಇಂಧನ ವಲಯದ ಕಂಪೆನಿಗಳ ಮುಖ್ಯಸ್ಥರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ವ್ಯಾಪಾರ ಸುಲಲೀಕರಣದ ಮೋದಿ ಸರ್ಕಾರದ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೊದಲ ಅಧಿಕೃತ ಸಭೆಯಲ್ಲಿ ಇಂಧನ ವಲಯದ ಮುಖ್ಯಸ್ಥರು ಭಾರತದಲ್ಲಿ ತಮ್ಮ ವ್ಯಾಪಾರ ವಿಸ್ತರಿಸುವ ಬಗ್ಗೆ ಚಚರ್ೆ ನಡೆಸಿದ್ದಾರೆ.
ಭಾರತದ ಆರ್ಥಿಕತೆಗೆ ಚೇತರಿಕೆ ತರುವ ಹಾಗೂ ವ್ಯಾಪಾರ ಸುಲಲೀಕರಣಕ್ಕಾಗಿನ ಸರ್ಕಾರದ ಪ್ರಯತ್ನಗಳನ್ನು ನಾಯಕರು ಶ್ಲಾಘಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ದುಂದು ಮೇಜಿನ ಸಭೆಯಲ್ಲಿ 17 ಜಾಗತಿಕ ಇಂಧನ ಕಂಪೆನಿಗಳ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದು ಈ ಕಂಪೆನಿಗಳ ಒಟ್ಟಾರೆ ಮೌಲ್ಯ 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ. ತಾಂತ್ರಿಕ ಪಾಲುದಾರಿಕೆ ಭಾಗವಾಗಿ ಇಂಧನ ಸಹಕಾರ ವೃದ್ಧಿ ಈ ಸಭೆಯ ಉದ್ದೇಶವಾಗಿತ್ತು. ಸಭೆಯ ನೇಪಥ್ಯದಲ್ಲಿ ಹ್ಯೂಸ್ಟನ್ ಮೂಲದ ಟೆಲುರಿಯನ್ ಮತ್ತು ಪೆಟ್ರೊನೆಟ್ ಎಲ್ ಎನ್ ಜಿ ನಡುವಣ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಟೆಲ್ಯುರಿಯನ್ ನ ಪ್ರಸ್ತಾವಿತ ಡ್ರಿಫ್ಟ್ ವುಡ್ ಎನ್ ಎನ್ ಜಿ ರಫ್ತು ಟಮರ್ಿನಲ್ ಗೆ ಪೆಟ್ರೊನೆಟ್ 2.5 ಶತಕೋಟಿ ಅಮೆರಿಕನ್ ಡಾಲರ್ ಬಂಡವಾಳ ಹೂಡಲಿದೆ. ಇದಕ್ಕೆ ಪ್ರತಿಯಾಗಿ 40 ವರ್ಷಗಳವರೆಗೆ ಪ್ರತಿ ವರ್ಷ 5 ದಶಲಕ್ಷ ಮೆಟ್ರಿಕ್ ಟನ್ ಎಲ್ ಎನ್ ಜಿ ಹಕ್ಕು ಪಡೆಯಲಿದೆ.
ಹ್ಯೂಸ್ಟನ್ ಗೆ ಬಂದ ಮೇಲೆ ಶಕ್ತಿಯ ಮಾತುಕತೆ ನಡೆಯದೇ ಇರುವುದೇ? ಇಂಧನ ವಲಯದ ಅವಕಾಶಗಳ ಕುರಿತು ಉತ್ತಮ ಚರ್ಚೆ ನಡೆಯಿತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ರವೀಶ್ ಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಇಂಧನ ವಲಯದ ಪ್ರಮುಖ ನಾಯಕರೊಂದಿಗೆ ಫಲಪ್ರದ ಸಂವಾದ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಇಂಧನ ಭದ್ರತೆ ಮತ್ತು ಉಭಯ ಹಿತಾಸಕ್ತಿಯ ಬಂಡವಾಳ ಅವಕಾಶಗಳ ವಿಸ್ತರಣೆಗೆ ಈ ಮಾತುಕತೆ ಗಮನಹರಿಸಿತ್ತು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಈ ಸಭೆಯಲ್ಲಿ ಭಾರತದ ಅಮೆರಿಕ ರಾಯಭಾರಿ ಕೆನ್ ಜಸ್ಟರ್ ಉಪಸ್ಥಿತರಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಅಮೆರಿಕದ ಭಾರತ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಸಭೆಯಲ್ಲಿ ಪಾಲ್ಗೊಂಡಿದ್ದರು.