ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನು ಅತಿಕ್ರಮಣ: ತಂತಿಬೇಲಿ ಹಾಕಲು ಸಚಿವರಿಗೆ ಮನವಿ

ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನು ಅತಿಕ್ರಮಣ: ತಂತಿಬೇಲಿ ಹಾಕಲು ಸಚಿವರಿಗೆ ಮನವಿ  Encroachment on land belonging to the Public Works Department: Request to the Minister to erect a wi

ಪಾಲಬಾವಿ 24:  ಲೋಕೋಪಯೋಗಿ ಸಚಿವರು ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಇತ್ತೀಚಿಗೆ ಹಾರೂಗೇರಿ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆಗಳ ಆಲಿಸುವ ಸಂದರ್ಭದಲ್ಲಿ ಪಾಲಬಾವಿ ಗ್ರಾಮದ ಹಿರಿಯರಾದ ಗಿರೆಪ್ಪ ಬಳಗಾರ, ಪ್ರಭು ಕರೋಶಿ, ಸಾಗರ ಕುರಬೆಟ್ಟಿ, ಮಹಾಲಿಂಗ ಜನವಾಡ ಸೇರಿದಂತೆ ಹಲವರು ಮನವಿ ಸಲ್ಲಿಸುತ್ತ ನಮ್ಮ  ಪಾಲಬಾವಿ ಗ್ರಾಮದ ಸರ್ವೆ ನಂ.225/ಬ  7ಎಕರೆ 28ಗುಂಟೆ ಜಮೀನವು ಲೋಕೋಪಯೋಗಿ ಇಲಾಖೆಗೆ ಸೇರಿದ್ದು.

ಕಳೆದ ವರ್ಷ ಜೂನ್ 06 ರಂದು ಅಂದಿನ ತಹಶೀಲ್ದಾರ್ ಸುರೇಶ್ ಮುಂಜೆ ಅವರ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ಬಂಧುಬಸ್ತಿನಲ್ಲಿ ಜಮೀನನ್ನು ಸರ್ವೆ ಕಾರ್ಯವು  ಮಾಡಿ ಮುಗಿಸಲಾಗಿದ್ದು.  ಸರ್ವೇ ನಂಬರ್ 225/ಬ 7ಎಕರೆ 28ಗುಂಟೆ ಜಮೀನು ಲೋಕೋಪಯೋಗಿ ಇಲಾಖೆಯ ಜಮೀನವನ್ನು ಅಕ್ಕಪಕ್ಕದ ಜಮೀನು ಮಾಲಿಕರು ಅತಿಕ್ರಮಣ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ. ದಯವಿಟ್ಟು ಸಂಬಂಧಪಟ್ಟ ಇಲಾಖೆಯವರಿಗೆ ಆ ಜಮೀನು ಸುತ್ತಲೂ ತಂತಿಬೇಲಿ ನಿರ್ಮಿಸಿ ಕೊಡಲು ಆದೇಶಿಸಬೇಕೆಂದು ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಮನವಿ ಸಲ್ಲಿಸಿದರು.