ಚಿಕ್ಕಿ ಘಟಕಕ್ಕೆ ಶಂಕುಸ್ಥಾಪನೆ ಮಹಿಳೆಯರ ಸಬಲೀಕರಣವೇ ಗುರಿ- ಸಚಿವೆ ಶಶಿಕಲಾ ಜೊಲ್ಲೆ

ಚಿಕ್ಕಿ ಘಟಕಕ್ಕೆ ಶಂಕುಸ್ಥಾಪನೆ ಮಹಿಳೆಯರ ಸಬಲೀಕರಣವೇ ಗುರಿ- ಸಚಿವೆ ಶಶಿಕಲಾ ಜೊಲ್ಲೆ ಕಾರವಾರ : ಸಮಾಜದ ಅನೇಕ ಕಷ್ಟಗಳಿಂದ ನೊಂದ ಮಹಿಳೆಯರ ಸಬಲೀಕರಣ ಗುರಿಯನ್ನಾಗಿಟ್ಟಕೊಂಡು ಇಂದು ಚಿಕ್ಕಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆವರಣದಲ್ಲಿ ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಚಿಕ್ಕಿ ತಯಾರಿಕಾ ಘಟಕದ ಕಟ್ಟಡ ನಿಮರ್ಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಚಿಕ್ಕಿ ತಯಾರಿಸುವಂತಹ ಉದ್ಯೋಗವನ್ನು ನೀಡುವುದರೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು. ಅಂಗನವಾಡಿಗಳಿಗೆ ಪೂರೈಕೆ ಮಾಡುವ ಆಹಾರ ವಸ್ತುಗಳಲ್ಲಿ ಚಿಕ್ಕಿ ಕೂಡಾ ಒಂದು. ಶೇಂಗಾ ಮತ್ತು ಬೆಲ್ಲದ ಮಿಶ್ರಣವಿರುವ ಚಿಕ್ಕಿ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸುತ್ತದೆ ಎಂದರು. ಚಿಕ್ಕಿ ತಯಾರಿಸುವ ಯೋಜನೆಯು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿದರ್ೇಶಕರ ವಿನೂತನ ಪ್ರಯೋಗವಾಗಿದ್ದು, ಇದು ಖುಷಿ ನೀಡುವಂತಹ ವಿಚಾರವಾಗಿದೆ ಎಂದು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. ಚಿಕ್ಕಿ ತಯಾರಿಸುವ ಯೋಜನೆಯ ಬಗ್ಗೆ ಕೇಂದ್ರ ಸಕರ್ಾರಕ್ಕೆ ವರದಿ ಸಲ್ಲಿಸಿದಾಗ ಸ್ಕಾಚ್' ಅವಾಡರ್್ ಕೂಡ ಈ ಯೋಜನೆಗೆ ಲಬಿಸಿರುತ್ತದೆ. ಈ ಯೋಜನೆಗೆ 50 ಲಕ್ಷ ಪ್ರೋತ್ಸಾಹ ಧನ ಬಂದಿದ್ದು, 25 ಲಕ್ಷದಲ್ಲಿ ಕಟ್ಟಡ ನಿಮರ್ಾಣವಾಗುತ್ತಿದೆ. ಇನ್ನು ಉಳಿದ 25 ಲಕ್ಷದ ಅನುದಾನವನ್ನು ಕಾರವಾರ ಹಾಗೂ ಶಿರಸಿಗೆ ಚಿಕ್ಕಿ ಮಾಡುವ ಮಶೀನ್ ಅನ್ನು ಒದಗಿಸಲಾಗುತ್ತಿದೆ ಎಂದರು. ಕಟ್ಟಡ ನಿಮರ್ಾಣವಾದರೆ ಮಹಿಳೆಯರಿಗೆ ಅನೂಕೂಲವಾಗುವುದರ ಜೊತೆಗೆ ಗುಣಮಟ್ಟ ಕಾಪಾಡಿಕೊಂಡು ಚಿಕ್ಕಿ ತಯಾರಿಸಲು ಸಹಕಾರಿಯಾಗಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ನಾಂದಿ ಹಾಡಲಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ್ ಅವರು ಕೂಡಾ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಮಹಿಳೆಯರನ್ನು ಆಥರ್ಿಕವಾಗಿ ಸಬಲೀಕರಣಗೊಳಿಸುವ ಯೋಜನೆಗಳನ್ನು ರೂಪಿಸಬೇಕೆಂದು ತಿಳಿಸಿದ್ದು, ಅವುಗಳನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವೆ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಎಂ. ರೋಶನ್, ಶಾಸಕಿ ರೂಪಾಲಿ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ರಾಜೇಂದ್ರ ಬೇಕಲ್ ಹಾಗೂ ಇತರರು ಹಾಜರಿದ್ದರು.