ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಹಾಗೂ ಹಣಕಾಸು ಸಾಕ್ಷರತೆಗೆ ಒತ್ತು

ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಹಾಗೂ ಹಣಕಾಸು ಸಾಕ್ಷರತೆಗೆ ಒತ್ತು Emphasis on skill development and financial literacy of students

ಲೋಕದರ್ಶನ ವರದಿ 

ಧಾರವಾಡ 16 : ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಮುಂಬೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರೀಟೀಸ್ ಮಾರ್ಕೆಟ್ಸ್‌ ನಡುವೆ ತಿಳುವಳಿಕಾ ಪತ್ರ  ಸಹಿ ಹಾಕಲಾಯಿತು. ಧಾರವಾಡದ ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಮತ್ತು ಮುಂಬೈನ  ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಬಜಾಜ್ ಅವರು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಜೆ.ಎಸ್‌.ಎಸ್‌. ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮತ್ತು ಬಿ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕ ಅವಿನಾಶ ಹೊಳಿಹೊಸೂರ ಉಪಸ್ಥಿತರಿದ್ದರು. ಈ ಸಹಯೋಗವು ಎನ್‌.ಐ.ಎಸ್‌.ಎಂ ಪ್ರಮಾಣೀಕರಣ ಕಾರ್ಯಕ್ರಮಗಳು, ತರಬೇತಿ, ಕಾರ್ಯಾಗಾರಗಳು ಮತ್ತು ಶೈಕ್ಷಣಿಕ ಉಪಕ್ರಮಗಳ ಮೂಲಕ ಹಣಕಾಸು ಸಾಕ್ಷರತೆ, ಹಣ ಹೂಡಿಕೆದಾರರ ಜಾಗೃತಿ ಮತ್ತು ಉದ್ಯಮ-ಆಧಾರಿತ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಪಾಲುದಾರಿಕೆಯು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾವಕಾಶಗಳನ್ನು ಮತ್ತು ಹಣಕಾಸು ಸೇವಾ ವಲಯದಲ್ಲಿ ಹೆಚ್ಚಿನ ಮಾನ್ಯತೆಯನ್ನು ನೀಡುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ.